• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಾಲಕೆರೆ ಅಭಿನವ ಅನ್ನದಾನ ಸ್ವಾಮೀಜಿ ಲಿಂಗೈಕ್ಯ; ಸಿಎಂ ಸಂತಾಪ

|
Google Oneindia Kannada News

ಕರ್ನಾಟಕ, ನವೆಂಬರ್ 22: ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಹಾಲಕೆರೆಯ ಅನ್ನದಾನೇಶ್ವರ ಸಂಸ್ಥಾನ ಮಠದ ಡಾ. ಅಭಿನವ ಅನ್ನದಾನ ಸ್ವಾಮೀಜಿ (85) ಲಿಂಗೈಕ್ಯರಾಗಿದ್ದಾರೆ. ಅವರು ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಕೊಟ್ಟೂರು ಮಠ ಸಂಸ್ಥಾನದಲ್ಲಿ ಜಗದ್ಗುರು ಡಾ. ಸಂಗನ ಬಸವ ಮಹಾಸ್ವಾಮಿ ಆಗಿಯೂ ಪೀಠದಲ್ಲಿದ್ದರು.

ಡಾ. ಅಭಿನವ ಅನ್ನದಾನ ಸ್ವಾಮೀಜಿ ಲಿಂಗೈಕ್ಯ
ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಹಾಲಕೆರೆಯ ಡಾ. ಅಭಿನವ ಅನ್ನದಾನ ಸ್ವಾಮೀಜಿಗಳು ಹೃದಯ ಕಾಯಿಲೆಯಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಲಿಂಗೈಕ್ಯರಾಗಿದ್ದಾರೆ. ಮಂಗಳವಾರ (ನ.23) ಸಂಜೆ ಹಾಲಕೆರೆ ಗ್ರಾಮದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.

ಈ ಮಠ 28 ಶಾಖಾ ಮಠಗಳನ್ನು ಹೊಂದಿದ್ದು, ಇದೇ ನವೆಂಬರ್ 10ರಂದು ಹಾಲಕೇರಿಯ 13ನೇ ಪೀಠಾಧಿಪತಿಯಾಗಿ ನೂತನ ಮುಪ್ಪಿನ ಬಸವಲಿಂಗ ಸ್ವಾಮೀಜಿ ಅಧಿಕಾರ ವಹಿಸಿಕೊಂಡಿದ್ದರು.

ಡಾ. ಅಭಿನವ ಅನ್ನದಾನ ಸ್ವಾಮೀಜಿ ಅವರು ಹೊಸಪೇಟೆ, ಬಳ್ಳಾರಿ, ಗದಗ, ಬಾಗಲಕೋಟೆಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಿ, ಬಡವರಿಗೆ ಅನ್ನ, ಅಕ್ಷರ, ದಾಸೋಹ ನೀಡುತ್ತಿದ್ದರು. ಬಸವ ತತ್ವದ ಮೂಲ ದೀನದಲಿತರ ಕಲ್ಯಾಣಕ್ಕೆ ಶ್ರಮಿಸಿದ್ದ ಶ್ರೀಗಳು, ಕಾವಿಧಾರಿಯಾಗಿ ಮಠಕ್ಕೆ ಸೀಮಿತವಾಗಿರದೆ ಜನಪರ ವಿಚಾರಧಾರೆಗಳನ್ನು ಹೊಂದಿದ್ದರು.

ಶಿವಯೋಗಮಂದಿರ ಸ್ವಾಮೀಜಿಗಳ ತರಬೇತಿ ಕೇಂದ್ರ ನಾಡಿಗೆ ಮಹಾನ್ ಸ್ವಾಮೀಜಿಗಳ ಕೊಟ್ಟ ಕೇಂದ್ರ. ಸಂಗನ ಬಸವ ಸ್ವಾಮೀಜಿ ಅವರ ಅವಧಿಯಲ್ಲೇ ಶಿವಯೋಗಮಂದಿರ ಶತಮಾನೋತ್ಸವ ಆಚರಿಸಿದೆ. ಸದ್ಯ ಶಿವಯೋಗಮಂದಿರಲ್ಲಿ 50 ಜನ ವಟುಗಳಿಗೆ ತರಬೇತಿ ನಡೆಯುತ್ತಿದೆ. ಸ್ವಾಮೀಜಿ ಪ್ರತ್ಯೇಕ ಲಿಂಗಾಯತ ಹೋರಾಟ ವಿರೋಧಿಸಿದ್ದರು. ಲಿಂಗಾಯತ ಪ್ರತ್ಯೇಕ ಹೋರಾಟಕ್ಕೆ ಪರ್ಯಾಯವಾಗಿ ಶಿವಯೋಗಮಂದಿರದಲ್ಲಿ ಗುರು ವಿರಕ್ತರ ಸಮಾವೇಶ ನಡೆಸಿದ್ದರು. ಅಖಂಡ ವೀರಶೈವ ಲಿಂಗಾಯತರು ಒಂದೇ ಎಂಬ ಸಂದೇಶ ಸಾರಿದ್ದರು.

Kottur Math Dr. Sangana Basava Mahaswamy and Dr Abhinava Annadana Swamiji Passes Away; CM Pays Condolence

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಸಿ. ಸಿ. ಪಾಟೀಲ, ಗೋವಿಂದ ಕಾರಜೋಳ ಮುಂತಾದವರು ಸೋಮವಾರ ಬೆಳಿಗ್ಗೆ ಆಸ್ಪತ್ರೆಗೆ ಭೇಟಿ ನೀಡಿ, ಹಾಲಕೆರೆಯ ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠದ ಅಭಿನವ ಅನ್ನದಾನೇಶ್ವರ ಮಹಾಸ್ವಾಮಿಗಳ ಪಾರ್ಥೀವ ಶರೀರದ ದರ್ಶನವನ್ನು ಅಂತಿಮ ದರ್ಶನ ಪಡೆದರು.

ಸಿಎಂ ಸಂತಾಪ
ಗದಗ ಜಿಲ್ಲೆ ಗಜೇಂದ್ರಗಡದ ಹಾಲಕೆರೆಯ ಅನ್ನದಾನೇಶ್ವರ ಸಂಸ್ಥಾನ ಮಠದ ಅಭಿನವ ಅನ್ನದಾನೇಶ್ವರ ಡಾ. ಸಂಗನ ಬಸವ ಮಹಾಸ್ವಾಮಿಗಳು ಲಿಂಗೈಕ್ಯರಾದ ವಿಷಯ ತಿಳಿದು ತುಂಬಾ ದುಃಖಿತನಾಗಿದ್ದೇನೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಅಗಲಿಕೆಯ ದುಃಖ ಸಹಿಸುವ ಶಕ್ತಿಯನ್ನು ಅವರ ಭಕ್ತ ಸಮೂಹಕ್ಕೆ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

ಇತ್ತೀಚೆಗಷ್ಟೇ, ಹಾಲಕೆರೆ ಮಠದ ಸಮಾರಂಭದಲ್ಲಿ ಭಾಗವಹಿಸಿ, ಶ್ರೀಗಳ ಆಶೀರ್ವಾದ ಪಡೆದುಕೊಂಡಿದ್ದೆ. ಆದರೆ ಇಷ್ಟು ಬೇಗ ಅವರನ್ನು ಕಳೆದುಕೊಳ್ಳುತ್ತೇವೆ ಎಂಬ ಕಲ್ಪನೆ ಇರಲಿಲ್ಲ. ಅವರ ಅಗಲಿಕೆಯು ನನಗೆ ವೈಯಕ್ತಿಕವಾಗಿ ಬಹಳ ದುಃಖ ತರಿಸಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

   ಕಡೇ ಓವರ್ನಲ್ಲಿ Deepak chahar ಸಿಡಿಸಿದ್ದು ಎಷ್ಟು ಗೊತ್ತಾ | Oneindia Kannada

   ಶ್ರೀಗಳ ಪಾರ್ಥೀವ ಶರೀರ, ಆ್ಯಂಬ್ಯುಲೆನ್ಸ್ ಮೂಲಕ ಬೆಂಗಳೂರಿನಿಂದ ತೆಗೆದುಕೊಂಡು ಹೋಗಲಾಗಿದೆ. ಮೊದಲು ಹೊಸಪೇಟೆ ತಾಲೂಕಿನ ಕೊಟ್ಟೂರು ಮಠ ಸಂಸ್ಥಾನಕ್ಕೆ ಹೋಗಿ, ಅಲ್ಲಿ ಪೂಜಾ ವಿಧಿವಿಧಾನಗಳನ್ನು ಪೂರ್ಣಗೊಳಿಸಿ ಬಳಿಕ ಹಾಲಕೆರೆಗೆ ತೆಗೆದುಕೊಂಡು ಹೋಗಲಾಗುತ್ತದೆ. ಭಕ್ತರು ಮತ್ತು ಶ್ರೀಗಳ ಆಶಯದಂತೆ ಇಳಕಲ್ ಗಡದ ಹಾಲಕೆರೆ ಮಠದಲ್ಲಿ ವೀರಶೈವ ಲಿಂಗಾಯತ ಧರ್ಮದ ವಿಧಿವಿಧಾನದಂತೆ ಮಂಗಳವಾರ ಸಂಜೆ ಶ್ರೀಗಳ ಅಂತ್ಯಕ್ರಿಯೆ ಕಾರ್ಯ ನಡೆಯಲಿದೆ.

   English summary
   Halakere Math Dr Abhinava Annadana swamiji Passes Away, CM Basavaraj Bommai Pays Condolence.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X