ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್.ವಿಶ್ವನಾಥ್ 'ಅಥೆನ್ಸಿನ ರಾಜಕಾರಣ' ಪುಸ್ತಕ ಸೆ.29ಕ್ಕೆ ಬಿಡುಗಡೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 28 : ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರ 7ನೇ ಪುಸ್ತಕ ಶನಿವಾರ ಲೋಕಾರ್ಪಣೆಯಾಗಲಿದೆ. ಅವರ ಹಳ್ಳಿ ಹಕ್ಕಿಯ ಹಾಡು ಪುಸ್ತಕ ವಿವಾದಕ್ಕೆ ಕಾರಣವಾಗಿತ್ತು.

ಎಚ್.ವಿಶ್ವನಾಥ್ ಅವರ ಮೂರನೇ ಪುಸ್ತಕ 'ಅಥೆನ್ಸಿನ ರಾಜಕಾರಣ' ಸೆ.29ರ ಶನಿವಾರ ಬಿಡುಗಡೆಯಾಗಲಿದೆ. ಭಾರತೀಯ ವಿದ್ಯಾಭವನದಲ್ಲಿ ನಡೆಯುವ ಸಮಾರಂಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ನಿವೃತ್ತ ಲೋಕಾಯುಕ್ತ ನ್ಯಾಯೂರ್ತಿ ಸಂತೋಷ್ ಹೆಗ್ಡೆ ಸೇರಿದಂತೆ ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಎಚ್. ವಿಶ್ವನಾಥ್ ಸಾಹಿತ್ಯ ಪ್ರೀತಿಯ ಬಗ್ಗೆ ನಿಮಗೆಷ್ಟು ಗೊತ್ತು?ಎಚ್. ವಿಶ್ವನಾಥ್ ಸಾಹಿತ್ಯ ಪ್ರೀತಿಯ ಬಗ್ಗೆ ನಿಮಗೆಷ್ಟು ಗೊತ್ತು?

ಪುಸ್ತಕದ ಬಗ್ಗೆ ಮಾಹಿತಿ ನೀಡಿದ ಎಚ್.ವಿಶ್ವನಾಥ್ ಅವರು, 'ಗ್ರೀಕ್ ರಾಷ್ಟ್ರದ ಆಹ್ವಾನದಂತೆ ಎರಡು ವರ್ಷಗಳ ಹಿಂದೆ ಆ ದೇಶಕ್ಕೆ ಭೇಟಿ ನೀಡಿ ಅಧ್ಯಯನ ಮಾಡಿ ಪುಸ್ತಕವನ್ನು ಬರೆಯಲಾಗಿದೆ. ಸಾವಿರಾರು ವರ್ಷಗಳ ಹಿಂದೆ ಜನತಂತ್ರ ವ್ಯವಸ್ಥೆ ಹೇಗಿತ್ತು? ಎಂಬುದನ್ನು ಪುಸ್ತಕದ ಮೂಲಕ ಜನರಿಗೆ ಪರಿಚಯಿಸಲಾಗುತ್ತಿದೆ' ಎಂದರು.

ಜೆಡಿಎಸ್ ನೂತನ ರಾಜ್ಯಾಧ್ಯಕ್ಷ ಅಡಗೂರು ಎಚ್ ವಿಶ್ವನಾಥ್ ಸಂದರ್ಶನಜೆಡಿಎಸ್ ನೂತನ ರಾಜ್ಯಾಧ್ಯಕ್ಷ ಅಡಗೂರು ಎಚ್ ವಿಶ್ವನಾಥ್ ಸಂದರ್ಶನ

H Vishwanath new book Athensina Rajakarana release on Sep 29

'ಗ್ರೀಕ್ ದೊಡ್ಡ ಮೇಧಾವಿಗಳಿಗೆ ಜನ್ಮನೀಡಿದ ದೇಶ. ಒಲಂಪಿಕ್ ಕ್ರೀಡಾಕೂಟವನ್ನು ಹುಟ್ಟುಹಾಕಿದವರೂ ಅವರೇ. ಅಥೆನ್ಸ್ ರಾಜ್ಯಾಡಳಿತ ಈಗಲೂ ಜಗತ್ತಿನ ಇತರ ಜನತಂತ್ರ ವ್ಯವಸ್ಥೆಗೆ ಮಾದರಿಯಾಗಿದೆ. ಹಲವಾರು ಅಧ್ಯಯನ ಮಾಡಿ ಈ ಪುಸ್ತಕ ಬರೆಯಲಾಗಿದೆ' ಎಂದು ಹೇಳಿದರು.

ಜೆಡಿಎಸ್ ನೂತನ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ನಡೆದು ಬಂದ ದಾರಿಜೆಡಿಎಸ್ ನೂತನ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ನಡೆದು ಬಂದ ದಾರಿ

ಕರ್ನಾಟಕದಲ್ಲಿ ಪುಸ್ತಕ ಬಿಡುಗಡೆಯಾದ ಬಳಿಕ ಎಚ್.ವಿಶ್ವನಾಥ್ ಅವರು ಗ್ರೀಕ್‌ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿನ ಸಂಸತ್‌ಗೆ ಪುಸ್ತಕವನ್ನು ಸಲ್ಲಿಸಲಿದ್ದಾರೆ.

English summary
Janata Dal (Secular) Karnataka president H. Vishwanath new book Athensina Rajakarana will be released on September 29, 2018. The book will be released by JD(S) supremo H.D. Deve Gowda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X