ಬಸವರಾಜ ಬೊಮ್ಮಾಯಿ ಭೇಟಿಯಾದ ಹಳ್ಳಿಹಕ್ಕಿ ಹೆಚ್.ವಿಶ್ವನಾಥ್
ಬೆಂಗಳೂರು,ಜನವರಿ20: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ರಾಜ್ಯದಲ್ಲಿ ಮತ್ತೆ ಪಕ್ಷಾಂತರ ಪರ್ವ ಸದ್ದು ಮಾಡುತ್ತಿದ್ದು,ಇತ್ತೀಚೆಗಷ್ಟೆ ಕಾಂಗ್ರೆಸ್ ಸೇರುವುದಾಗಿ ಘೋಷಣೆ ಮಾಡಿದ್ದ ವಿಧಾನಪರಿಷತ್ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನ ಭೇಟಿಯಾಗಿದ್ದಾರೆ.
ಮುಖ್ಯಮಂತ್ರಿಗಳ ಆರ್.ಟಿ ನಗರ ನಿವಾಸದಲ್ಲಿ ಮುಖ್ಯಮಂತ್ರಿಗಳನ್ನ ಭೇಟಿ ಮಾಡಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ಬಿಜೆಪಿ ನಾಯಕರ ವಿರುದ್ದ ಪದೇ ಪದೇ ವಾಗ್ದಾಳಿ ನಡೆಸುತ್ತಿದ್ದ ಹೆಚ್. ವಿಶ್ವನಾಥ್ ಇದೀಗ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನ ಭೇಟಿ ಮಾಡಿದ್ದು, ಸಾಕಷ್ಟು ಪ್ರಶ್ನೆಗಳಿಗೆ ಎಡೆ ಮಾಡಿಕೊಟ್ಟಿದೆ.
ನನ್ನ ರಕ್ತಾನೇ ಕಾಂಗ್ರೆಸ್ ರೀ, ಹೌದು ನಾನು ಕಾಂಗ್ರೆಸ್ ಪಕ್ಷವನ್ನು ಸೇರುತ್ತೇನೆ ಎಂದಿದ್ದು, ಕಾಂಗ್ರೆಸ್ ಪಕ್ಷ ಸೇರ್ಪಡೆ ಹೇಳಕೆ ಕೊಟ್ಟ ಬಳಿಕ ಹೆಚ್.ವಿಶ್ವನಾಥ್ ಅವರು ಮೊದಲ ಬಾರಿಗೆ ಭೇಟಿಯಾಗಿರುವುದು ತೀವ್ರ ಕುತೂಹಲ ಮೂಡಿಸಿದೆ.

ಇನ್ನೂ ಒನ್ ಇಂಡಿಯಾ ಸಂದರ್ಶನದಲ್ಲೂ ಯಡಿಯೂಪ್ಪರ ಸುಮ್ಮನೆ ರಾಜಾಹುಲಿ. ಏನು ಆಗಲಿಲ್ಲ, ಹಗರಣಗಳು ಆದವು ಅಷ್ಟೇ. ಯಡಿಯೂರಪ್ಪ ಹೆಸರಿಗೆ ಮಾತ್ರ ರಾಜಹುಲಿ. ರಾಜಾಹುಲಿಗೆ ವಯಸ್ಸಾಯಿತು ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ದ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಂದು ಮನೆಯನ್ನ ಹೊರಗಿನಿಂದ ನೋಡುವಾಗ ಏನೋ ಇದೆ ಅನ್ಸುತ್ತೆ, ಮನೆ ಒಳಗೆ ಹೋದಾಗ ವಸ್ತುಸ್ಥಿತಿ ಹಾಗು ಸತ್ಯ ಗೊತ್ತಾಗುತ್ತದೆ. ನಾನು ಬಿಜೆಪಿ ಮನೆ ಒಳಗೆ ಇದೀನಿ, ಬಿಜೆಪಿ ಮನೆ ಒಳಗೆ ಏನು ಆಗ್ತಾ ಇದೆ ನೋಡುತ್ತಿದ್ದೇನೆ. ಕಾಂಗ್ರೆಸ್ ನನ್ನ ತಾಯಿ, ಕಾಂಗ್ರೆಸ್ ಜೊತೆಗೆ 40 ವರ್ಷಗಳ ಕಾಲ ಸುಧೀರ್ಘ ಯಾನ, ಈ ಕುರಿತು ದೇವೇಗೌಡರು ಕೇಳಿದ್ರು, ಏನು ಕಾಂಗ್ರೆಸ್ ನ್ನ ತಾಯಿ ಅಂದ್ರೀ ಅಂತ ,ಹೆತ್ತವಳನ್ನ ತಾಯಿ ಎನ್ನದೇ ಏನ್ ಹೇಳ್ಬೇಕು, ಜೆಡಿಎಸ್ ನನ್ನ ಧಮನಿ, ಬಿಜೆಪಿ ಒಂದು ರಾಜಕೀಯ ಪಕ್ಷ . ನನ್ನ ಝಂಡಾ ಬದಲಾಗಿರ್ಬಹುದು, ಅಜೆಂಡಾ ಬದಲಾಗಿಲ್ಲ. ಸಮಾಜದ ಕಟ್ಟ ಕಡೆಯ ಮನುಷ್ಯನ ಕಷ್ಟಕ್ಕೆ ದುಡಿಯುವುದು, ಹೋರಾಟ ಮಾಡುವುದು ನನ್ನ ಅಜೆಂಡಾ ಎಂದರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ನಾನು ಕಾರಣ. ಒಂದು ವೇಳೆ ನಾನು ಕಾಂಗ್ರೆಸ್ ಗೆ ಬಂದ್ರು ಅದು ಪಕ್ಷಾಂತರವಲ್ಲ, ಮರಳಿ ಮನೆಗೆ, ನನ್ನ ಮನೆ ಕಾಂಗ್ರೆಸ್ ಎಂದು ಒನ್ ಇಂಡಿಯಾಗೆ ಹೇಳಿದ್ದಾರೆ.

ಸಿಎಂ ಬೊಮ್ಮಾಯಿ ಭೇಟಿ ಮಾಡಿದ ಕೆಆರ್‌ಪುರಂ ಮಾಜಿ ಶಾಸಕ ನಂದೀಶ್ ರೆಡ್ಡಿ
ಕೆ ಆರ್ ಪುರಂ ಮಾಜಿ ಶಾಸಕ ನಂದೀಶ್ ರೆಡ್ಡಿ ಅವರು ಆರ್.ಟಿ ನಗರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನ ಭೇಟಿ ಮಾಡಿದ್ದು, ಸಚಿವ ಬೈರತಿ ಬಸವರಾಜು ವಿರುದ್ದ ನಂದೀಶ್ ರೆಡ್ಡಿ ಅಸಮಾಧಾನ ಹೊರ ಹಾಕಿದ್ದಾರೆ. ಈಗಾಗಲೇ ಪಕ್ಷ ಬಿಡುವುದಾಗಿ ಗಡುವು ನೀಡಿದ್ದು, ಮುಂದಿನ ವಿಧಾನಸಭಾ ಚುನಾವಣೆಗೆ ಟಿಕೆಟ್ ನೀರಿಕ್ಷಿಸುತ್ತಿರುವ ನಂದೀಶ್ ರೆಡ್ಡಿ ಸಿಎಂ ಬೊಮ್ಮಾಯಿ ಅವರನ್ನ ಭೇಟಿ ಮಾಡಿದ್ದಾರೆ.












Click it and Unblock the Notifications