ವಿಧಾನ ಪರಿಷತ್: ಎಚ್. ವಿಶ್ವನಾಥ್ ಸೇರಿ 4 ಸದಸ್ಯರ ನಾಮನಿರ್ದೇಶನ
ಬೆಂಗಳೂರು, ಜು. 22: ವಿಧಾನ ಪರಿಷತ್‌ಗೆ ಐವರು ಸದಸ್ಯರನ್ನು ನಾಮನಿರ್ದೇಶನ ಮಾಡಿ ರಾಜ್ಯಪಾಲರು ಆದೇಶ ಮಾಡಿದ್ದಾರೆ. ಕಲಾ ಕ್ಷೇತ್ರದಿಂದ ಸಿ.ಪಿ. ಯೋಗೇಶ್ವರ್, ಸಾಹಿತ್ಯ ಕ್ಷೇತ್ರದಿಂದ ಎಚ್. ವಿಶ್ವನಾಥ್, ಸಮಾಜಸೇವೆ ಕ್ಷೇತ್ರದಿಂದ ಭಾರತಿ ಶೆಟ್ಟಿ, ವಿಶಿಷ್ಟ ಸೇವಾ ಕ್ಷೇತ್ರದಿಂದ ಶಾಂತಾರಾಂ ಸಿದ್ದಿ ಹಾಗೂ ಶಿಕ್ಷಣ ಕ್ಷೇತ್ರದಿಂದ ಪ್ರೊ. ಸಾಬಣ್ಣ ತಳವಾರ್ ಅವರನ್ನು ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಲಾಗಿದೆ.
Recommended Video
ಇಂದು ಬೆಳಗ್ಗೆಯಷ್ಟೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯಪಾಲ ವಜೂಬಾಯಿ ವಾಲಾ ಅವರನ್ನು ಭೇಟಿ ಮಾಡಿದ್ದರು. ರಾಜ್ಯಪಾಲರನ್ನು ಭೇಟಿಮಾಡಿ ಅಭ್ಯರ್ಥಿಗಳ ಪಟ್ಟಿಯನ್ನು ಸಿಎಂ ಯಡಿಯೂರಪ್ಪ ಸಲ್ಲಿಸಿದ್ದರು.

ಸಿ.ಪಿ. ಯೋಗೇಶ್ವರ್: ಮಾಜಿ ಸಚಿವ, ರಾಮನಗರ ಜಿಲ್ಲೆ, ಒಕ್ಕಲಿಗ ಸಮುದಾಯ-ಕಲೆ ಕ್ಷೇತ್ರ
ಎಚ್. ವಿಶ್ವನಾಥ್: ಮಾಜಿ ಸಚಿವ, ಮೈಸೂರು ಜಿಲ್ಲೆ, ಕುರುಬ ಸಮುದಾಯ- ಸಾಹಿತ್ಯ ಕ್ಷೇತ್ರ
ಭಾರತಿ ಶೆಟ್ಟಿ: ಪರಿಷತ್ ಮಾಜಿ ವಿಧಾನ ಸದಸ್ಯೆ, ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ, ಶಿವಮೊಗ್ಗ ಜಿಲ್ಲೆ, ಬಂಟ ಸಮುದಾಯ-ಸಮಾಜ ಸೇವೆ ಕ್ಷೇತ್ರ
ಶಾಂತಾರಾಮ ಸಿದ್ದಿ: ಸಂಘ ಪರಿವಾರದ ವನವಾಸಿ ಕಲ್ಯಾಣ ಸಂಘಟನೆಯಲ್ಲಿ ಸಕ್ರೀಯ, ಉತ್ತರ ಕನ್ನಡ ಜಿಲ್ಲೆ, ಬುಡಕಟ್ಟು ಸಮುದಾಯ, ವಿಶಿಷ್ಟ ಸೇವಾ ಕ್ಷೇತ್ರ
ಪ್ರೊ. ಸಾಬಣ್ಣ ತಳವಾರ: ಬೆಳಗಾವಿ ರಾಣಿ ಚೆನ್ನಮ್ಮ ವಿವಿಯಲ್ಲಿ ಪ್ರೊಫೆಸರ್, ಕಲ್ಬುರ್ಗಿ ಜಿಲ್ಲೆ, ಕೋಳಿ ಸಮುದಾಯ-ಶಿಕ್ಷಣ ಕ್ಷೇತ್ರ












Click it and Unblock the Notifications