Mata Guruprasad: 50ನೇ ವಯಸ್ಸಿನಲ್ಲಿ ಎರಡನೇ ಮದುವೆಯಾಗಿದ್ದ ಮಠ ನಿರ್ದೇಶಕ ಗುರುಪ್ರಸಾದ್ ?!
ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಹಿ ಘಟನೆಗಳೇ ನಡೆಯುತ್ತಿವೆ. ಒಂದರ ಹಿಂದೆ ಒಂದು ಬರೀ ಕಣ್ಣೀರ ಕಥೆಗಳೇ ತೆರೆದುಕೊಳ್ಳುತ್ತಿವೆ. ಕೆಜಿಎಫ್ ಹಾಗೂ ಕಾಂತಾರದ ಯಶಸ್ಸಿನಲ್ಲಿ ಕನ್ನಡ ಚಿತ್ರರಂಗ ಭಾರತದಾದ್ಯಂತ ಸುದ್ದಿ ಮಾಡಿತ್ತು. ಕನ್ನಡ ಚಿತ್ರರಂಗ ಹೊಸ ಮೈಲಿಗಲ್ಲು ತಲುಪುತ್ತಿದೆ. ತನ್ನ ಹಳೆಯ ಚಾರ್ಮ್‌ಗೆ ಮರಳುತ್ತಿದೆ ಎನ್ನುವಾಗಲೇ ಚಿತ್ರರಂಗದಲ್ಲಿ ಈ ಹಿಂದೆ ಎಂದೂ ಕೇಳಿರದ ನೋವಿನ ಹಾಗೂ ದುಃಖದ ವಿಷಯಗಳಿಗೆ ಕನ್ನಡ ಚಿತ್ರರಂಗ ತೆರೆದುಕೊಳ್ಳುತ್ತಿದೆ. ಇದೀಗ ಕನ್ನಡಕ್ಕೆ ಸಾಲು ಸಾಲು ಹಿಟ್ ಮೂವಿಗಳನ್ನು ನೀಡಿದ್ದ ನಿರ್ದೇಶಕ ಗುರುಪ್ರಸಾದ್ ಅವರು ಆತ್ಮಹತ್ಯೆಗೆ ಶರಣಾಗಿರುವ ಸುದ್ದಿ.
ಕನ್ನಡಚಿತ್ರರಂಗದ ಮೇರು ನಿರ್ದೇಶಕರಲ್ಲಿ ಗುರುಪ್ರಸಾದ್ ಅವರು ಸಹ ಒಬ್ಬರಾಗಿದ್ದಾರೆ. ಅವರು ಕನ್ನಡದ ಚಿತ್ರಗಳಲ್ಲಿ ಹೊಸ ಅಲೆ ಹಾಗೂ ವಿಚಾರಧಾರೆಗಳನ್ನು ಮೂಡಿಸಿದ್ದರು. ಕುಡುಕನೊಬ್ಬನ ಮನಃಪರಿವರ್ತನೆಯ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲವನ್ನೇ ಸೃಷ್ಟಿ ಮಾಡಿತ್ತು. ಇದೀಗ ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಕನ್ನಡ ಚಿತ್ರರಂಗದಲ್ಲಿ ಒಂದರ ಮೇಲೆ ಒಂದು ಹಿಟ್ ಚಿತ್ರಗಳನ್ನು ನೀಡುವ ಮೂಲಕ ಗುರುಪ್ರಸಾದ್ ಅವರು ಕನ್ನಡ ಸಿನಿರಸಿಕರ ಮನಸೆಳೆದಿದ್ದರು. ನಟನಾಗಿ ಮಾತ್ರವಲ್ಲ ಅವರು ಕೆಲವು ಕನ್ನಡ ಸಿನಿಮಾಗಳಲ್ಲಿಯೂ ಅಭಿನಯಿಸಿ ಗಮನ ಸೆಳೆದಿದ್ದರು. ಕನ್ನಡದ ಕೆಲವು ರಿಯಾಲಿಟಿ ಶೋಗಳಲ್ಲಿಯೂ ಗುರುಪ್ರಸಾದ್ ಅವರು ಮಿಂಚಿರುವುದು ಇದೆ.
ಇತ್ತೀಚಿನ ದಿನಗಳಲ್ಲಿ ಅವರು ಕನ್ನಡ ಚಿತ್ರರಂಗದಲ್ಲಿ ಅಷ್ಟೇನು ಸದ್ದು ಮಾಡುತ್ತಿರಲಿಲ್ಲ. ಸಾಲದ ಸುಳಿಯಲ್ಲಿ ಅವರು ಸಿಲುಕಿದ್ದರು ಎನ್ನುತ್ತದೆ ಅವರ ಆಪ್ತ ವಲಯ ಇದೇ ಕಾರಣಕ್ಕೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಶಂಕೆ ಇದೆ. ಆದರೆ, ಈ ಎಲ್ಲಾ ಪ್ರಶ್ನೆಗಳಿಗೂ ಇನ್ನಷ್ಟೇ ಉತ್ತರ ಸಿಗಬೇಕಿದೆ.
ಹೊಸ ಬದುಕು ಕಟ್ಟಿಕೊಳ್ಳುತ್ತಿದ್ದ ಗುರು
ನಿರ್ದೇಶಕ ಹಾಗೂ ದಿವಂಗತ ಗುರುಪ್ರಸಾದ್ ಅವರು ಈಚೆಗೆ ಎರಡನೇ ಮದುವೆಯಾಗಿದ್ದರು. ಈ ಮೂಲಕ ವೈಯಕ್ತಿಕ ಜೀವನದಲ್ಲಿ ಹೊಸ ಬದುಕು ಕಟ್ಟಿಕೊಳ್ಳುವ ಹುಮ್ಮಸ್ಸಿನಲ್ಲಿ ಇದ್ದರು. ಗುರು ಅವರಿಗೆ 50 ವರ್ಷ ವಯಸ್ಸಾಗಿತ್ತು. ಇತ್ತೀಚೆಗಷ್ಟೇ ಅವರು ಅತ್ಯಂತ ಸರಳವಾಗಿ ಎರಡನೇ ಮದುವೆಯಾಗಿದ್ದರು ಎನ್ನಲಾಗಿದೆ.
ಆದರೆ, ಕನ್ನಡ ಚಿತ್ರರಂಗ ಹಾಗೂ ಸಿನಿರಸಿಕರಿಗೆ ಭಾನುವಾರ ಆಘಾತವೇ ಆಗಿದೆ. ಅಂತಹದ್ದೊಂದು ಸುದ್ದಿ ಭಾನುವಾರ ಕೇಳಿ ಬಂದಿದೆ. ಅದೇ ಗುರು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದು. ಗುರು ಅವರು ಬೆಂಗಳೂರಿನ ಮಾದನಾಯಕಹಳ್ಳಿಯ ಅಪಾರ್ಟ್ಮೆಂಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ನೇಣು ಬಿಗಿದಿರುವ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಇದೀಗ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸೋಲಿನಿಂದ ಕುಗ್ಗಿದ್ದರು: ನಿರ್ದೇಶಕ ಗುರುಪ್ರಸಾದ್ ಅವರು ಕನ್ನಡ ಚಿತ್ರರಂಗದಲ್ಲಿ ಹಿಟ್ ಮೂವಿಗಳನ್ನು ಕೊಟ್ಟು ರಂಜಿಸಿದ್ದು ನಿಜ. ಆದರೆ, ಈಚೆಗೆ ನಟ ಜಗ್ಗೇಶ್ ಅವರು ನಾಯಕ ನಟನಾಗಿ ನಟಿಸಿದ್ದ ಹಾಗೂ ಗುರುಪ್ರಸಾದ್ ಅವರು ನಿರ್ದೇಶನ ಮಾಡಿದ್ದ ರಂಗನಾಯಕ ಸಿನಿಮಾ ಮಕಾಡೆ ಮಲಗಿತ್ತು. ಅಲ್ಲದೇ ಕನ್ನಡ ಸಿನಿ ಪ್ರೇಕ್ಷಕರಿಂದ ಕಟು ವಿಮರ್ಶಗೆ ಗುರಿಯಾಗಿತ್ತು.
ಈ ಸಿನಿಮಾದಲ್ಲಿನ ಡೈಲಾಗ್ ಹಾಗೂ ಕೆಲವು ನಿರ್ದಿಷ್ಟ ದೃಶ್ಯಗಳ ಬಗ್ಗೆ ವಿರೋಧ ವ್ಯಕ್ತವಾಗಿತ್ತು. ಈ ಸಿನಿಮಾ ಸೋತಿದ್ದರಿಂದ ಗುರುಪ್ರಸಾದ್ ಅವರು ತೀವ್ರ ಸಾಲಕ್ಕೆ ಗುರಿಯಾಗಿದ್ದರು ಎಂದೂ ಹೇಳಲಾಗಿದೆ.












Click it and Unblock the Notifications