ಟೆಕ್ಕಿಯ ಕಿರುಕುಳ: ಪುತ್ರಿಯ ಸಾಯಿಸಿ ಪತ್ನಿ ಆತ್ಮಹತ್ಯೆ

ಗಂಡನ ಕಿರುಕುಳದಿಂದ ಮನನೊಂದ ಅಫ್ರೀನ್ ಆದಿಕ್ ಉಲ್ಲಾ ಎಂಬ 27 ವರ್ಷದ ಹೆಣ್ಣುಮಗಳು ತನ್ನ ನಾಲ್ಕೂವರೆ ವರ್ಷದ ಹೆಣ್ಣುಮಗಳಿಗೆ ಗುಂಡಿಟ್ಟು ಸಾಯಿಸಿ, ನಂತರ ತಾನೂ ಗುಂಡಿಟ್ಟುಕೊಂಡು ಮಂಗಳವಾರ ರಾತ್ರಿ ಸಾವನ್ನಪ್ಪಿದ್ದಾರೆ. ಗಂಡ, ಸಾದಿಕ್ ಉಲ್ಲಾ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದಾರೆ.
ಪತ್ನಿ ಅಪ್ರೀನ್ ಆದಿಕ್ ಉಲ್ಲಾ ಅವರು ಗಂಡನ ಕಾಟ ತಾಳಲಾರದೆ ತವರು ಮನೆಯಲ್ಲೇ ಉಳಿದಿದ್ದರು. ಮಗಳನ್ನು ಕಳುಹಿಸಿಕೊಡುವಂತೆ ಇತ್ತೀಚೆಗೆ ಸಾದಿಕ್ ಉಲ್ಲಾ ಒತ್ತಡ ಹಾಕುತ್ತಿದ್ದ ಎನ್ನಲಾಗಿದೆ. ಕೊನೆಗೆ ಮನನೊಂದ ಅಫ್ರೀನ್, ಮಗುವಿಗೂ ಗುಂಡಿಟ್ಟು, ತಾನೂ ಗುಂಡಿಗೆ ಬಲಿಯಾಗಿದ್ದಾಳೆ.
ಅಂದಹಾಗೆ ಅಫ್ರೀನ್ ಅವರು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಜಿಪಂ ಮಾಜಿ ಸದಸ್ಯ ಮುಖಂಡ ಮುಕ್ರಂಖಾನ್ ಅವರ ಪುತ್ರಿ. ಮುಕ್ರಂಖಾನ್ ಅವರ ಬಳಿ ಪರವಾನಗಿ ಪಡೆದುಕೊಂಡ ಪಿಸ್ತೂಲ್ ಇತ್ತು. ಅದನ್ನು ಮನೆಯಲ್ಲೇ ಇಟ್ಟಿದ್ದರು. ಆ ಪಿಸ್ತೂಲಿನಿಂದಲೇ ಅಫ್ರೀನ್ ಗುಂಡು ಹಾರಿಸಿದ್ದಾರೆ.












Click it and Unblock the Notifications