ಪೊಲೀಸರನ್ನು ಮಾಧ್ಯಮಗಳಿಂದ ದೂರ ಮಾಡಿದ ಹೊಸ ಆದೇಶ

ಬೆಂಗಳೂರು, ಜೂನ್ 26 : ಕರ್ನಾಟಕದ ಪೊಲೀಸ್ ಇಲಾಖೆಯ ಹೊಸ ಆದೇಶವೊಂದು ವಿವಾದಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಪೊಲೀಸರು ಮಾಧ್ಯಮಕ್ಕೆ ಮಾಹಿತಿ ನೀಡಿದರೆ ತಕ್ಷಣ ಅಮಾನತು ಮಾಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.

'ಮೀಡಿಯಾ ಪಾಲಿಸಿ' ಎಂಬ ಹೆಸರಿನಲ್ಲಿ ಈ ಆದೇಶ ಹೊರಬಿದ್ದಿದೆ. ಇದನ್ನು ಎಲ್ಲಾ ಮಹಾನಗರಗಳ ಪೊಲೀಸ್ ಆಯುಕ್ತು, ಜಿಲ್ಲಾ ಎಸ್ಪಿಗಳಿಗೆ ಕಳುಹಿಸಲಾಗಿದೆ. ಪಾಲಿಸಿಯನ್ನು ಅನುಸರಿಸುವಂತೆ ಸೂಚನೆ ನೀಡಲಾಗಿದೆ.

ಈ ಆದೇಶದಲ್ಲಿ ಪ್ರಮುಖವಾಗಿ 3 ಉಲ್ಲೇಖಗಳನ್ನು ನೀಡಲಾಗಿದೆ. ಸೂಚನೆಗಳನ್ನು ಉಲ್ಲಂಘನೆ ಮಾಡಿದರೆ ಅವರ ಮೇಲೆ ಇಲಾಖಾ ವಿಚಾರಣೆ ಬಾಕಿ ಇರಿಸಿ ತಕ್ಷಣದಿಂದ ಅಮಾನತುಗೊಳಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ಆದೇಶ ನೀಡಲಾಗಿದೆ.

Guidelines for police about media

ಉಲ್ಲೇಖಗಳು ಹೀಗಿವೆ.....

* ಯಾವುದೇ ಪೂರ್ವಾನುಮತಿ ಇಲ್ಲದೇ ಪೊಲೀಸ್ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಯಾವುದೇ ಪತ್ರಿಕೆ, ಆಕಾಶಾವಾಣಿ, ದೂರದರ್ಶನ ಅಥವ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಭಾಗವಹಿಸಕೂಡದು.

* ಇಲಾಖೆಗೆ ಸಂಬಂಧಪಟ್ಟ ಯಾವುದೇ ವಿಷಯಗಳ ವಿವರಗಳನ್ನು ಜಿಲ್ಲಾ ಮಟ್ಟದಲ್ಲಿ ಮಾಧ್ಯಮಗಳಿಗೆ ನೀಡಲು ಆಯಾ ಘಟಕದ ಘಟಕಾಧಿಕಾರಿಗಳಾದ ಪೊಲೀಸ್ ಅಧೀಕ್ಷಕರು/ ಪೊಲೀಸ್ ಆಯುಕ್ತರು/ ವಲಯದ ಐಜಿಪಿ ಅವರು ಅಥವ ಅವರುಗಳಿಂದ ಅನುಮೋದನೆಗೊಂಡ ನಂತರ ಸಂಬಂಧಪಟ್ಟ ಘಟಕದ ನೋಡೆಲ್ ಅಧಿಕಾರಿ ಅವರು ಮಾತ್ರ ಮಾಧ್ಯಮಕ್ಕೆ ಮಾಹಿತಿ ನೀಡಲು ಅಧಿಕೃತ ಅಧಿಕಾರಿಗಳಾಗಿರುತ್ತಾರೆ.

* ಮೇಲ್ಕಂಡ ಸೂಚನೆ ಉಲ್ಲಂಘನೆ ಮಾಡಿದಲ್ಲಿ ಅವರ ಮೇಲೆ ಇಲಾಖಾ ವಿಚಾರಣೆ ಬಾಕಿಇರಿಸಿ ತಕ್ಷಣದಿಂದ ಅಮಾನತುಗೊಳಿಸಲು ಕೂಡಲೇ ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+