ತುಳಜಾಪುರದಲ್ಲಿ ಕರ್ನಾಟಕದ ಭಕ್ತರಿಗಾಗಿ ಅತಿಥಿ ಗೃಹ
ಬೆಂಗಳೂರು, ಜೂನ್ 28 : ಮಹಾರಾಷ್ಟ್ರದ ಒಸ್ಮನಾಬಾದ್ ಜಿಲ್ಲೆಯ ತುಳಜಾಪುರದಲ್ಲಿ ಪ್ರಸಿದ್ಧ ಶ್ರೀ ತುಳಜಾ ಭವಾನಿ ದೇವಸ್ಥಾನಕ್ಕೆ ಕರ್ನಾಟಕ ರಾಜ್ಯದಿಂದ ಭೇಟಿ ನೀಡುವ ಭಕ್ತಾದಿಗಳ ಅನುಕೂಲಕ್ಕಾಗಿ ತುಳಜಾಪುರದಲ್ಲಿ ಒಂದು ಅತಿಥಿಗೃಹವನ್ನು ನಿರ್ಮಿಸಲಾಗಿದೆ.
ಈ ಅತಿಥಿ ಗೃಹದಲ್ಲಿ 4 ಡಾರ್ಮೆಟರಿಗಳು ಹಾಗೂ 2 ಕೊಠಡಿಗಳಿದ್ದು, ಶೌಚಾಲಯ ಹಾಗೂ ಸ್ನಾನಗೃಹದ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಅತಿಥಿಗೃಹ ತುಳಜಾಪುರದಲ್ಲಿನ ಫಾಟ್‍ಸಿಲ್ ರಸ್ತೆಯಲ್ಲಿದ್ದು ದೇವಾಲಯದ ಸಮೀಪದಲ್ಲಿರುತ್ತದೆ.
ಇಲ್ಲಿ ಪ್ರತೀ ಯಾತ್ರಾರ್ಥಿಗಳಿಗೆ ದಿನ ಒಂದಕ್ಕೆ 50 ರು. ಗಳನ್ನು ನಿಗದಿಪಡಿಸಲಾಗಿದೆ. ಕರ್ನಾಟಕ ಯಾತ್ರಾರ್ಥಿಗಳು ಈ ಸೌಲಭ್ಯವನ್ನು ಸದುಪಯೋಗ ಮಾಡಿಕೊಳ್ಳಬಹುದು. ಅತಿಥಿ ಗೃಹದ ಆವರಣದಲ್ಲಿ ವಾಹನ ನಿಲುಗಡೆಗೂ ಕೂಡ ಸ್ಥಳಾವಕಾಶ ಕಲ್ಪಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಯಾತ್ರಾರ್ಥಿಗಳು ವಸತಿ ಸೌಲಭ್ಯಕ್ಕಾಗಿ ಮಹಾಂತೇಶ್ ದೇವರಗಿ, ಮ್ಯಾನೇಜರ್, ಕರ್ನಾಟಕ ರಾಜ್ಯ ಛತ್ರ, ತುಳಜಾಪುರ ಅವರನ್ನು ದೂರವಾಣಿ ಸಂಖ್ಯೆ 08970996273 ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













Click it and Unblock the Notifications