ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಭೇಟಿಯಾದ ಜೆಡಿಎಸ್‌ನಿಂದ ದೂರವಾಗಿರುವ ಜಿಟಿಡಿ!

|
Google Oneindia Kannada News

Recommended Video

ಜೆಡಿಎಸ್ ಗೆ ಆತಂಕ..! | G.T.Devegowda | Oneindia Kannada

ಬೆಂಗಳೂರು, ಸೆಪ್ಟೆಂಬರ್ 09 : ಜೆಡಿಎಸ್ ನಾಯಕ, ಮಾಜಿ ಸಚಿವ, ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ. ಟಿ. ದೇವೇಗೌಡ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಭೇಟಿ ಮಾಡಿದರು.

ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ನಿವಾಸ 'ಧವಳಗಿರಿ'ಯಲ್ಲಿ ಸೋಮವಾರ ಬೆಳಗ್ಗೆ ನಡೆದ ಈ ಭೇಟಿ ಕರ್ನಾಟಕ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಅದರಲ್ಲೂ ಜೆಡಿಎಸ್‌ ಚಟುವಟಿಕೆಗಳಿಂದ ದೇವೇಗೌಡರು ದೂರವಾಗಿರುವಾಗ ಈ ಭೇಟಿ ನಡೆದಿದೆ.

ಜಿಟಿ ದೇವೇಗೌಡ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆಜಿಟಿ ದೇವೇಗೌಡ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ

ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡ ಬಳಿಕ ಜೆಡಿಎಸ್ ಪಕ್ಷದ ಚಟುವಟಿಕೆಗಳಿಂದ ಜಿ. ಟಿ. ದೇವೇಗೌಡ ದೂರವಾಗಿದ್ದಾರೆ. ಹಾಗೆಯೇ ಪದೇ-ಪದೇ ಪ್ರಧಾನಿ ನರೇಂದ್ರ ಮೋದಿ ಮತ್ತು ಯಡಿಯೂರಪ್ಪ ಹೊಗಳುತ್ತಿದ್ದಾರೆ.

ಜಿಟಿ ದೇವೇಗೌಡರಿಗೆ ಬಿಜೆಪಿಗೆ ಸ್ವಾಗತ; ಸಾಮಾಜಿಕ ಜಾಲತಾಣಗಳಲ್ಲಿ ಗುಲ್ಲುಜಿಟಿ ದೇವೇಗೌಡರಿಗೆ ಬಿಜೆಪಿಗೆ ಸ್ವಾಗತ; ಸಾಮಾಜಿಕ ಜಾಲತಾಣಗಳಲ್ಲಿ ಗುಲ್ಲು

ಜಿ. ಟಿ. ದೇವೇಗೌಡರು ಜೆಡಿಎಸ್ ಬಿಟ್ಟು ಬಿಜೆಪಿ ಸೇರಲಿದ್ದಾರೆ?. ಎಂಬ ಸುದ್ದಿಗಳು ಬಲವಾಗಿ ಹಬ್ಬಿರುವಾಗ ಈ ಭೇಟಿ ಕುತೂಹಲ ಮೂಡಿಸಿದೆ. ಮೈಸೂರು ರಾಜಕೀಯದಲ್ಲಿ ಗುಸು-ಗುಸು ಆರಂಭವಾಗಿದೆ. ಆದರೆ, ಜಿ. ಟಿ. ದೇವೇಗೌಡರು ಈ ಬಗ್ಗೆ ಸ್ಪಷ್ಟನೆಯನ್ನು ನೀಡಿದರು.

ಜೆಡಿಎಸ್ ಶಾಸಕ ಬಿಜೆಪಿಯತ್ತ ಹೆಜ್ಜೆ? ಮಗನಿಗೆ ಟಿಕೆಟ್ ಕೊಡಿಸಲು ಯತ್ನಜೆಡಿಎಸ್ ಶಾಸಕ ಬಿಜೆಪಿಯತ್ತ ಹೆಜ್ಜೆ? ಮಗನಿಗೆ ಟಿಕೆಟ್ ಕೊಡಿಸಲು ಯತ್ನ

ಪಕ್ಷದಿಂದ ನನಗೆ ನೋವಾಗಿದೆ

ಪಕ್ಷದಿಂದ ನನಗೆ ನೋವಾಗಿದೆ

ಮಾಧ್ಯಮಗಳ ಜೊತೆ ಮಾತನಾಡಿದ ಜಿ. ಟಿ. ದೇವೇಗೌಡ, "ಜೆಡಿಎಸ್ ಪಕ್ಷದಿಂದ ನನಗೆ ನೋವಾಗಿದೆ. ಆದ್ದರಿಂದ, ಸಭೆ ಹಾಗೂ ಕಾರ್ಯಕ್ರಮಗಳಿಂದ ದೂರ ಇದ್ದೇನೆ" ಎಂದು ಹೇಳಿದರು.

ಬಿಜೆಪಿಯಿಂದ ಆಹ್ವಾನ ಬಂದಿಲ್ಲ

ಬಿಜೆಪಿಯಿಂದ ಆಹ್ವಾನ ಬಂದಿಲ್ಲ

ಬಿಜೆಪಿ ಸೇರುವ ಪ್ರಶ್ನೆಗೆ ಉತ್ತರ ನೀಡಿದ ಜಿ. ಟಿ. ದೇವೇಗೌಡರು, "ಬಿಜೆಪಿಯಿಂದ ಪಕ್ಷ ಸೇರುವಂತೆ ನನಗೆ ಆಹ್ವಾನ ಬಂದಿಲ್ಲ. ನಾನು ಸಹ ಪಕ್ಷಕ್ಕೆ ಬರುತ್ತೇನೆ ಎಂದು ಹೇಳಿಲ್ಲ. ಮುರೂವರೆ ವರ್ಷಗಳ ಕಾಲ ನಾನು ಏನೂ ಮಾತನಾಡುವುದಿಲ್ಲ" ಎಂದು ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿಗಳ ಭೇಟಿ ಏಕೆ?

ಮುಖ್ಯಮಂತ್ರಿಗಳ ಭೇಟಿ ಏಕೆ?

"ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯಲ್ಲಿ ಗ್ರಾಮೀಣ ರಸ್ತೆಗಳ ಕಾಮಗಾರಿಗೆ ತಡೆ ಆಗಿದೆ. ಟೆಂಡರ್ ಆಗಿದ್ದರೂ ಕಾಮಗಾರಿ ನಡೆಯುತ್ತಿಲ್ಲ. ಆದ್ದರಿಂದ, ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದೆ. ಹುಣಸೂರು ಅಥವ ಬೇರೆ ಯಾವುದೇ ಕ್ಷೇತ್ರದಿಂದ ನನ್ನ ಮಗ ಚುನಾವಣೆಗೆ ನಿಲ್ಲುತ್ತಿಲ್ಲ. ನಾನು ಸಹ ಬಿಜೆಪಿಗೆ ಹೋಗುತ್ತಿಲ್ಲ" ಎಂದು ಜಿ. ಟಿ. ದೇವೇಗೌಡ ಹೇಳಿದರು.

ಅವರು ಕ್ಷೇತ್ರ ಉಸ್ತುವಾರಿ

ಅವರು ಕ್ಷೇತ್ರ ಉಸ್ತುವಾರಿ

ವಿ. ಸೋಮಣ್ಣ ಜೊತೆ ವೇದಿಕೆ ಹಂಚಿಕೊಂಡ ಬಗ್ಗೆ ಪ್ರತಿಕ್ರಿಯಿಸಿದ ಜಿ. ಟಿ. ದೇವೇಗೌಡ, "ಒಟ್ಟಾಗಿ ಕಾಣಿಸಿಕೊಂಡ ಮಾತ್ರಕ್ಕೆ ಉಹಾಪೋಹ ಬೇಡ. ಅವರು ಕ್ಷೇತ್ರದ ಉಸ್ತುವಾರಿ ಸಚಿವರು, ನನ್ನ ಸ್ನೇಹಿತರು ಹೀಗಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದೇವೆ" ಎಂದು ಸ್ಪಷ್ಟನೆ ನೀಡಿದರು.

English summary
Chamundeshwari JD(S) MLA G.T.Devegowda met the Karnataka Chief Minister B.S.Yediyurappa. G.T.Devegowda upset with party leaders and not attending party meeting and other activities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X