ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಡಿಟಿ ಕಾಂಗ್ರೆಸ್‌ಗೆ; ಸಿದ್ದರಾಮಯ್ಯ ಮಹತ್ವದ ಟ್ವೀಟ್!

|
Google Oneindia Kannada News

ಬೆಂಗಳೂರು, ಆಗಸ್ಟ್ 31; ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ, ಮಾಜಿ ಸಚಿವ ಜಿ. ಟಿ. ದೇವೇಗೌಡ ಕಾಂಗ್ರೆಸ್ ಸೇರುವುದಾಗಿ ಘೋಷಣೆ ಮಾಡಿದ್ದಾರೆ. 2018ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಜಿ. ಟಿ. ದೇವೇಗೌಡರ ವಿರುದ್ಧ ಸೋಲು ಕಂಡಿದ್ದರು. ಆದ್ದರಿಂದ ಈ ಬೆಳವಣಿಗೆಗೆ ಸಿದ್ದರಾಮಯ್ಯ ಹೇಗೆ ಪ್ರತಿಕ್ರಿಯಿಸಬಹುದು? ಎಂಬುದು ಎಲ್ಲರ ಕುತೂಹಲವಾಗಿತ್ತು.

ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಸರ್ಕಾರ ಪತನಗೊಂಡ ಬಳಿಕ ಜಿ. ಟಿ. ದೇವೇಗೌಡ ಜೆಡಿಎಸ್ ಪಕ್ಷದ ಚಟುವಟಿಕೆಗಳಿಂದ ದೂರವಾಗಿದ್ದರು. ಅವರು ಪಕ್ಷ ಬಿಡಲಿದ್ದಾರೆ ಎಂಬ ಸುದ್ದಿಗಳು ಬಲವಾಗಿ ಹಬ್ಬಿದ್ದವು. ಆದರೆ ಯಾವ ಪಕ್ಷ ಸೇರಲಿದ್ದಾರೆ? ಎಂಬುದು ಖಚಿತವಾಗಿರಲಿಲ್ಲ.

ಜಿಟಿಡಿ ಗೇಮ್ ಪ್ಲಾನ್ ಬದಲು; ಮೈಮುಲ್ ಅಧ್ಯಕ್ಷರಾಗಿ ಪ್ರಸನ್ನ ಆಯ್ಕೆ ಜಿಟಿಡಿ ಗೇಮ್ ಪ್ಲಾನ್ ಬದಲು; ಮೈಮುಲ್ ಅಧ್ಯಕ್ಷರಾಗಿ ಪ್ರಸನ್ನ ಆಯ್ಕೆ

ಕಳೆದ ವಾರ ಜಿ. ಟಿ. ದೇವೇಗೌಡರು ಕಾಂಗ್ರೆಸ್ ಸೇರುವುದಾಗಿ ಘೋಷಣೆ ಮಾಡಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಜೊತೆ ಈ ಕುರಿತು ಚರ್ಚೆ ನಡೆಸಿದ್ದೇನೆ ಎಂದು ಜಿ. ಟಿ. ದೇವೇಗೌಡರು ಹೇಳಿದ್ದಾರೆ. ಜಿ. ಟಿ. ದೇವೇಗೌಡ ಪುತ್ರನ ಜೊತೆ ಕಾಂಗ್ರೆಸ್ ಸೇರಲಿದ್ದಾರೆ. ಇಬ್ಬರಿಗೂ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಸಿಗಲಿದೆಯೇ? ಎಂದು ಕಾದು ನೋಡಬೇಕು.

Breaking: ಜೆಡಿಎಸ್ ತೊರೆಯುವ ಬಗ್ಗೆ ಜಿಟಿಡಿ ಅಧಿಕೃತ ಘೋಷಣೆ Breaking: ಜೆಡಿಎಸ್ ತೊರೆಯುವ ಬಗ್ಗೆ ಜಿಟಿಡಿ ಅಧಿಕೃತ ಘೋಷಣೆ

ಜಿ. ಟಿ. ದೇವೇಗೌಡರು ಪಕ್ಷವನ್ನು ತೊರೆದರೆ ಪಕ್ಷಕ್ಕೆ ಯಾವುದೇ ನಷ್ಟವಾಗುವುದಿಲ್ಲ. ಜೆಡಿಎಸ್‌ಗೆ ಯಾವ ಶಾಕ್‌ ಸಹ ಆಗೋಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ವಲಯದಲ್ಲಿ ಜಿ. ಟಿ. ದೇವೇಗೌಡರ ಆಗಮನದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ, ಮೈಸೂರು ರಾಜಕಾರಣ ಯಾವ ರೀತಿ ಬದಲಾಗಲಿದೆ? ಎಂಬುದು ಕುತೂಹಲವಾಗಿದೆ.

ಜೆಡಿಎಸ್‌ನಲ್ಲಿದ್ದರೂ ಇಲ್ಲದಂತಿರುವ ಜಿಟಿಡಿ ಮುಂದಿನ ನಡೆ? ಜೆಡಿಎಸ್‌ನಲ್ಲಿದ್ದರೂ ಇಲ್ಲದಂತಿರುವ ಜಿಟಿಡಿ ಮುಂದಿನ ನಡೆ?

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್

ಜಿ. ಟಿ. ದೇವೇಗೌಡ ಕಾಂಗ್ರೆಸ್ ಸೇರುವ ಕುರಿತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. "ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ನನ್ನ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿ. ಕೆ. ಶಿವಕುಮಾರ್ ಜತೆ ಚರ್ಚಿಸಿದ್ದಾರೆ. ಈ ಬಗ್ಗೆ ಹೈಕಮಾಂಡ್ ಜತೆಗೆ ಚರ್ಚಿಸುವುದಾಗಿ ತಿಳಿಸಿದ್ದೇನೆ. ಸದ್ಯಕ್ಕೆ ನಡೆದಿರುವುದು ಇಷ್ಟೇ ಬೆಳವಣಿಗೆ. ಹೈಕಮಾಂಡ್ ಜತೆ ಚರ್ಚಿಸಿದ ಬಳಿಕ ಮುಂದಿನ ಬೆಳವಣಿಗೆ" ಎಂದು ಸ್ಪಷ್ಟನೆ ನೀಡಿದ್ದಾರೆ.

ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದು ಏಕೆ?

ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದು ಏಕೆ?

ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ. ಟಿ. ದೇವೇಗೌಡ ಪುತ್ರ ಹರೀಶ್ ರಾಜಕೀಯ ಭವಿಷ್ಯಕ್ಕಾಗಿಯೇ ಕಾಂಗ್ರೆಸ್ ಸೇರುತ್ತಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಮುಂದಿನ ಚುನಾವಣೆಯಲ್ಲಿ ಜಿ. ಟಿ. ದೇವೇಗೌಡರು ಚಾಮುಂಡೇಶ್ವರಿಯಲ್ಲಿ ಕಣಕ್ಕಿಳಿದರೆ ಪುತ್ರ ಹರೀಶ್ ಕೆ. ಆರ್. ನಗರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದ್ದರಿಂದ ಸಿದ್ದರಾಮಯ್ಯ, "ಹೈಕಮಾಂಡ್ ಜತೆ ಚರ್ಚಿಸಿದ ಬಳಿಕ ಮುಂದಿನ ಬೆಳವಣಿಗೆ" ಎಂದು ಮಂಗಳವಾರ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್‌ನಲ್ಲಿ ಆಗಲೇ ಅಸಮಾಧಾನ

ಕಾಂಗ್ರೆಸ್‌ನಲ್ಲಿ ಆಗಲೇ ಅಸಮಾಧಾನ

ಜಿ. ಟಿ. ದೇವೇಗೌಡ ಪುತ್ರ ಹರೀಶ್ ಕೆ. ಆರ್.‌ ನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿ ಹಬ್ಬುತ್ತಲೇ ಸ್ಥಳೀಯ ಕಾಂಗ್ರೆಸ್ ನಾಯಕರು ಅಸಮಾಧಾನಗೊಂಡಿದ್ದಾರೆ. ಸ್ಥಳೀಯ ಮುಖಂಡ ರವಿಶಂಕರ್, "ಯಾರಿಗೂ ಕ್ಷೇತ್ರವನ್ನು ಬಿಟ್ಟುಕೊಡಲ್ಲ. ನಾನೇ 2023ಕ್ಕೆ ಕೆ. ಆರ್. ನಗರದ ಶಾಸಕ" ಎಂದು ಹೇಳಿದ್ದಾರೆ. ಪ್ರಸ್ತುತ ಜೆಡಿಎಸ್‌ನ ಸಾ. ರಾ. ಮಹೇಶ್ ಕ್ಷೇತ್ರದ ಶಾಸಕರು. ಒಂದು ವೇಳೆ ಮಗನಿಗೆ ಟಿಕೆಟ್ ಸಿಗದಿದ್ದರೆ ಚಾಮುಂಡೇಶ್ವರಿಯನ್ನೇ ಜಿ. ಟಿ. ದೇವೇಗೌಡರು ಬಿಟ್ಟುಕೊಡಲಿದ್ದಾರೆಯೇ? ಎಂದು ಕಾದು ನೋಡಬೇಕಿದೆ.

ಸಿದ್ದರಾಮಯ್ಯ ಸ್ಪರ್ಧೆ ಮಾಡುವುದಿಲ್ಲ

ಸಿದ್ದರಾಮಯ್ಯ ಸ್ಪರ್ಧೆ ಮಾಡುವುದಿಲ್ಲ

"ನಾನು ಕಾಂಗ್ರೆಸ್‌ಗೆ ಬಂದರೆ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ನಾನು ಕ್ಷೇತ್ರದಲ್ಲಿ ಹಾಲಿ ಶಾಸಕ, ನನ್ನ ಪುತ್ರನಿಗೂ ಟಿಕೆಟ್ ಕೇಳಿದ್ದೇನೆ. ಹೈಕಮಾಂಡ್ ಜೊತೆ ಚರ್ಚಿಸಿ ಹೇಳುತ್ತೇವೆ, ನಿಮ್ಮ ಪರವಾಗಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ" ಎಂದು ಜಿ. ಟಿ. ದೇವೇಗೌಡ ಹೇಳಿದ್ದಾರೆ.

ಸಾಕಷ್ಟು ಅವಮಾನ ಸಹಿಸಿಕೊಂಡೆ

ಸಾಕಷ್ಟು ಅವಮಾನ ಸಹಿಸಿಕೊಂಡೆ

"ಜೆಡಿಎಸ್‌ನಲ್ಲಿ ಸಾಕಷ್ಟು ಅವಮಾನ ಸಹಿಸಿಕೊಂಡಿದ್ದೇನೆ. ಇನ್ನು ಅಲ್ಲಿರಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿಯೇ ಎಚ್. ಡಿ. ದೇವೇಗೌಡರಿಗೆ ಸಂದೇಶ ತಲುಪಿಸಿದ್ದೇನೆ. ನನ್ನನ್ನು ಕ್ಷಮಿಸಿ ಅಶೀರ್ವಾದ ಮಾಡಿ ಎಂದು ಕೇಳಿದ್ದೇನೆ. ಎಚ್. ಡಿ. ಕುಮಾರಸ್ವಾಮಿ ನಾಯಕರು ಅವರು ಸಿಟ್ಟು ಮಾಡಿಕೊಂಡರೂ ಸ್ವಲ್ಪ ಸಮಯದಲ್ಲಿ ಸರಿ ಹೋಗುತ್ತಾರೆ. ಆದರೆ ಸ್ಥಳೀಯ ಕೆಲವು ನಾಯಕರನ್ನು ಸರಿ ಮಾಡಲು ಆಗದು. ಅದಕ್ಕಾಗಿಯೇ ಪಕ್ಷ ತೊರೆಯುವ ತೀರ್ಮಾನ ಮಾಡಿದ್ದೇನೆ" ಎಂದು ಜಿ. ಟಿ. ದೇವೇಗೌಡ ಹೇಳಿದ್ದಾರೆ.

Recommended Video

ಸೀಟ್ ಬೆಲ್ಟ್ ಧರಿಸದೆ Audi ಕಾರ್ ನಲ್ಲಿದ್ದ 7 ಜನರ ದುರಂತ ಸಾವು | Oneindia Kannada

English summary
Leader of opposition and former chief minister Siddaramaiah tweet on JD(S) MLA G. T. Deve Gowda joining Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X