Gruha Lakshmi Scheme Launch LIVE: ಇಲ್ಲಿ ಮೋದಿ ಅಂತ ಹೇಳಿದರೆ ಕೇಸ್ ಹಾಕ್ತಾರೆ: ಖರ್ಗೆ ವಾಗ್ದಾಳಿ
ಮೈಸೂರು, ಆಗಸ್ಟ್ 30: ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಪ್ರಮುಖ ಕಾರಣಗಳಲ್ಲೊಂದು ಗೃಹಲಕ್ಷ್ಮಿ ಯೋಜನೆ. ಪಂಚ ಗ್ಯಾರಂಟಿಗಳಲ್ಲೊಂದಾದ ಈ ಯೋಜನೆಯಡಿ ಕುಟುಂಬದ ಯಜಮಾನಿಗೆ ಮಾಸಿಕ ಎರಡು ಸಾವಿರ ರೂಪಾಯಿ ಹಣವನ್ನು ಸರ್ಕಾರ ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆ ಮಾಡಲಿದೆ. ಸರ್ಕಾರದ ಈ ಮಹತ್ವಾಕಾಂಕ್ಷೆ ಯೋಜನೆಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಮೈಸೂರಿನಲ್ಲಿ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮದ ಲೈವ್ ಅಪ್ಡೇಟ್ಸ್ ಅನ್ನು ಈ ಪೇಜಿನಲ್ಲಿ ನೀಡಲಾಗುತ್ತದೆ.

ನುಡಿದಂತೆ ನಡೆದಿದ್ದೇವೆ : ಸಿದ್ದರಾಮಯ್ಯ
1.10 ಕೋಟಿ ಫಲಾನುಭವಿಗಳ ಖಾತೆ ತಲಾ 2,000 ರೂಪಾಯಿ ಜಮ: ಸಿದ್ದರಾಮಯ್ಯ
ನುಡಿದಂತೆ ನಡೆದಿದ್ದೇವೆ - ಸಚಿವ ಪ್ರಿಯಾಂಕ್ ಖರ್ಗೆ.
ಕಾಂಗ್ರೆಸ್ ಸಾಧನೆಯ ರೆಕಾರ್ಡ್ ನನ್ನ ಬಳಿ ಇದೆ: ಮಲ್ಲಿಕಾರ್ಜುನ ಖರ್ಗೆ
ಇಲ್ಲಿ ಮೋದಿ ಅಂತ ಹೇಳಿದರೆ ಕೇಸ್ ಹಾಕ್ತಾರೆ: ಖರ್ಗೆ
ದೇಶದ ಸಂವಿಧಾನವನ್ನ ಕಳೆದುಕೊಳ್ಳಬೇಡಿ: ಖರ್ಗೆ
ಗೃಹ ಲಕ್ಷ್ಮೀ ಯೋಜನೆ ಜಾರಿ; ಕೇಂದ್ರ ನಾಯಕರ ವಿರುದ್ಧ ಖರ್ಗೆ ವಾಗ್ದಾಳಿ
ರಾಹುಲ್ ಗಾಂಧಿ ಯಾರಿಗೂ ಹೆದರುವುದಿಲ್ಲ: ಖರ್ಗೆ
ಕೇಂದ್ರ ನಾಯಕರು ಟೀಕೆ ಮಾಡಿದರು; ನಾವು ಮಾಡಿ ತೊರಿಸಿದ್ದೇವೆ: ಖರ್ಗೆ

ಇಂದು ಗೃಹಲಕ್ಷ್ಮಿ ಯೋಜನೆಯ ₹2000 ಹಣವನ್ನು ಫಲಾನುಭವಿಗಳಿಗೆ ವರ್ಗಾಯಿಸುತ್ತಿರುವ ಹಿನ್ನೆಲೆಯಲ್ಲಿ ನಾಡಿನ ಗೃಹ ಲಕ್ಷ್ಮಿಯರೆಲ್ಲ ಸಂಭ್ರಮದಿಂದ ತಮ್ಮ ಮನೆಗಳ ಮುಂದೆ ರಂಗೋಲಿ ಹಾಕುವ ಮೂಲಕ ಸ್ವಾಗತಿಸಿದ್ದಾರೆ.
— Karnataka Congress (@INCKarnataka) August 30, 2023
ಈ ಮೂಲಕ ನಮ್ಮ ಸರ್ಕಾರದ ಯೋಜನೆಗೆ ಜನತೆ ಸಂಭ್ರಮಿಸುತ್ತಿರುವುದು ನಮ್ಮಲ್ಲಿ ಸಾರ್ಥಕತೆ ಮೂಡಿಸುತ್ತಿದೆ.… pic.twitter.com/MPNur31NoH
ಕರ್ನಾಟಕ ಇಡೀ ದೇಶಕ್ಕೆ ದಿಕ್ಸೂಚಿ : ರಾಹುಲ್ ಗಾಂಧಿ
ಇದು ನನ್ನ ಜೀವನದ ಸಾರ್ಥಕ ಕ್ಷಣ ಎಂದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಮಹಿಳೆಯರಿಲ್ಲದೆ ಕರ್ನಾಟಕ ನಿಲ್ಲಲು ಸಾಧ್ಯವಿಲ್ಲ: ರಾಹುಲ್ ಗಾಂಧಿ

ನಮ್ಮ ಐದು ಗ್ಯಾರಂಟಿಗಳ ಪೈಕಿ 4 ಗ್ಯಾರಂಟಿಗಳು ಮಹಿಳೆಯರಿಗಾಗಿ: ರಾಹುಲ್ ಗಾಂಧಿ
ಗೃಹ ಲಕ್ಷ್ಮೀ ಯೋಜನೆ ಜಾರಿ ಬಳಿಕ ರಾಹುಲ್ ಗಾಂಧಿ ಮಾತು

ಸರ್ಕಾರಕ್ಕೆ 100 ದಿನದ ಸಂಭ್ರಮ ಕಿರುಹೊತ್ತಿಗೆ ಬಿಡುಗಡೆ ಮಾಡಿದ ಖರ್ಗೆ, ರಾಹುಲ್ ಗಾಂಧಿ
ಡಿಜಿಟಲ್ ಬಟನ್ ಒತ್ತುವ ಮೂಲಕ ಗೃಹಲಕ್ಷ್ಮಿ ಯೋಜನೆಗೆ ಚಾಲನೆ
100 ದಿನದಲ್ಲಿ ನಾವು ನುಡಿದಂತೆ ನಡೆದಿದ್ದೇವೆ: ಡಿ ಕೆ ಶಿವಕುಮಾರ್
100 ದಿನದಲ್ಲಿ ನಾವು ನುಡಿದಂತೆ ನಡೆದಿದ್ದೇವೆ: ಡಿ ಕೆ ಶಿವಕುಮಾರ್

ಗ್ಯಾರಂಟಿ ಯೋಜನೆಗಳೆಂಬ ನಮ್ಮ ಜನಪರ ಚಿಂತನೆಯ ಹಿಂದಿರುವ ಶಕ್ತಿ @RahulGandhi ಅವರನ್ನು ಕರುನಾಡಿಗೆ ಪ್ರೀತಿಯಿಂದ ಬರಮಾಡಿಕೊಂಡೆ. #ಗೃಹಲಕ್ಷ್ಮಿ pic.twitter.com/VIE3Gzy8zv
— Siddaramaiah (@siddaramaiah) August 30, 2023















Click it and Unblock the Notifications