Gruha Lakshmi Scheme: ಗೃಹಲಕ್ಷ್ಮೀ ಯೋಜನೆಗೆ 3 ವರ್ಷ: ಮಹತ್ವದ ಗುಡ್‌ನ್ಯೂಸ್ ಹಂಚಿಕೊಂಡ ಡಿ.ಕೆ ಶಿವಕುಮಾರ್
Gruha Lakshmi Scheme: ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಪರಿಚಯಿಸಿರುವ ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖ ಯೋಜನೆ ಆಗಿರುವ ಗೃಹಲಕ್ಷ್ಮೀ ಯೋಜನೆಯು ಮೂರು ವರ್ಷ ಪೂರೈಸಿದೆ. ಗೃಹಲಕ್ಷ್ಮೀ ಯೋಜನೆ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ವಿಶೇಷ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.
ಗೃಹಲಕ್ಷ್ಮೀ ಪ್ರತಿಯೊಂದರಲ್ಲೂ ಮಹಿಳೆಯರನ್ನು ಸಬಲೀಕರಣಗೊಳಿಸುವ ಶಕ್ತಿ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಗೃಹಲಕ್ಷ್ಮೀ ಯೋಜನೆಯ ನೆರವನ್ನು ಶೇ.94ರಷ್ಟು ಫಲಾನುಭವಿಗಳು ದಿನಸಿ, ದವಸ-ಧಾನ್ಯ ಹಾಗೂ ಅಗತ್ಯ ವಸ್ತುಗಳ ಖರೀದಿಗೆ ಬಳಸಿಕೊಂಡು, ತಮ್ಮ ಕುಟುಂಬದ ದಿನನಿತ್ಯದ ಅಗತ್ಯಗಳನ್ನು ಸುಲಭವಾಗಿ ಪೂರೈಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ. ಪ್ರತಿಯೊಂದರಲ್ಲೂ ಮಹಿಳೆಯರನ್ನು ಸಬಲೀಕರಣಗೊಳಿಸುವ ಶಕ್ತಿ ಈ ಯೋಜನೆಗೆ ಇದೆ. ಕರ್ನಾಟಕದ ಶೇ.89ರಷ್ಟು ಮಹಿಳೆಯರು ಗೃಹಲಕ್ಷ್ಮೀ ಹಣವನ್ನು ಆಸ್ಪತ್ರೆ ಹಾಗೂ ವೈದ್ಯಕೀಯ ವೆಚ್ಚಗಳಿಗೆ ಬಳಸಿಕೊಂಡು, ಸಂಕಷ್ಟದ ಸಮಯದಲ್ಲಿ ಕುಟುಂಬಕ್ಕೆ ಆರ್ಥಿಕ ನೆರವು ಒದಗಿಸುತ್ತಿದ್ದಾರೆ.

ಗೃಹಲಕ್ಷ್ಮೀ - ಸ್ವಾಭಿಮಾನದ ಬದುಕಿನ ಭರವಸೆ ಆಗಿದೆ. ಗೃಹಲಕ್ಷ್ಮೀ ಎಂದರೆ ಕೇವಲ ₹2,000 ಅಲ್ಲ... ಅದು ಒಬ್ಬ ತಾಯಿಯ ಕಣ್ಣಲ್ಲಿ ಮೂಡಿದ ನೆಮ್ಮದಿ, ಒಬ್ಬ ಮಹಿಳೆಯ ಆತ್ಮಗೌರವ, ಮಕ್ಕಳ ಭವಿಷ್ಯಕ್ಕೆ ಬೆಳಕಾದ ನೆರವು. ಮೂರು ವರ್ಷಗಳ ಗೃಹಲಕ್ಷ್ಮೀ ಯೋಜನೆಯ ಯಶಸ್ವಿ ಪಯಣವು, ಲಕ್ಷಾಂತರ ಮಹಿಳೆಯರ ಬದುಕಿನಲ್ಲಿ ಹೊಸ ಭರವಸೆ ಮೂಡಿಸಿದೆ. ಜೊತೆಗೆ ಆತ್ಮಗೌರವದಿಂದ ಬದುಕಲು, ಸ್ವಾವಲಂಬಿಗಳಾಗಿ ತಮ್ಮ ಬದುಕಿನ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳಲು ಶಕ್ತಿ ನೀಡಿದ ಮಹತ್ವದ ಸಂಕಲ್ಪವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಶೇ.52ರಷ್ಟು ತಾಯಂದಿರು ಗೃಹಲಕ್ಷ್ಮಿ ಹಣವನ್ನು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸಿಕೊಂಡು, ಮುಂದಿನ ಪೀಳಿಗೆಗೆ ಉತ್ತಮ ಅವಕಾಶಗಳನ್ನು ಕಲ್ಪಿಸಲು ನೆರವಾಗುತ್ತಿದ್ದಾರೆ ಎಂದೂ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
Gruha Lakshmi Scheme: ಗೃಹಲಕ್ಷ್ಮೀ ಯೋಜನೆ ಸ್ವಾಭಿಮಾನದ ಪ್ರತೀಕ ಎಂದ ಡಿ.ಕೆ ಶಿವಕುಮಾರ್
ಇನ್ನು ಗೃಹಲಕ್ಷ್ಮೀ ಯೋಜನೆಯು ಕರ್ನಾಟಕದ ಪ್ರತಿ ಮನೆಯ ಗೃಹಿಣಿಯರ ಸ್ವಾಭಿಮಾನದ ಪ್ರತೀಕ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ನಿಮ್ಮ ಆರ್ಥಿಕ ಹೊರೆಯನ್ನು ತಗ್ಗಿಸಲು ಜಾರಿ ತಂದ ಗೃಹಲಕ್ಷ್ಮೀ ಯೋಜನೆಗೆ ಇದೀಗ 3 ವರ್ಷ ತುಂಬಿದೆ. ತಿಂಗಳಿಗೆ 2,೦೦೦ ರೂ. ವರ್ಷಕ್ಕೆ 24,000 ರೂ. 1 ಕೋಟಿ 22 ಲಕ್ಷಕ್ಕೂ ಹೆಚ್ಚು ಗೃಹಿಣಿಯರಿಗೆ ಈ ಯೋಜನೆ ತಲುಪುತ್ತಿದೆ.
ಗೃಹಲಕ್ಷ್ಮೀ ಯೋಜನೆ ನಿಮ್ಮ ಬದುಕಿನಲ್ಲಿ ಯಾವ ರೀತಿ ಬದಲಾವಣೆ ತಂದಿದೆ, ಈ ಯೋಜನೆಯ ಹಣ ಹೇಗೆ ನೆರವಾಗಿದೆ ಹಾಗೂ ಹೇಗೆ ಶಕ್ತಿ ತುಂಬಿದೆ ಎನ್ನುವ ವಿಚಾರವನ್ನು ಒಂದು ವಿಡಿಯೋ ಮಾಡಿ ನಮಗೆ ಕಳುಹಿಸಿ ಕೊಡಿ. ನಿಮ್ಮ ನುಡಿಗಳೇ ನಮಗೆ ಪ್ರೇರಣೆ, ನಿಮ್ಮ ಆಶೀರ್ವಾದವೇ ನಮಗೆ ಶಕ್ತಿ ಹಾಗೂ ನಿಮ್ಮ ಸಲಹೆ ನಮ್ಮ ಅಡಳಿತಕ್ಕೆ ಸ್ಫೂರ್ತಿ ಅಂತಲೂ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.


Click it and Unblock the Notifications
