Vijay Dk Shivakumar: ನೀರು ನಮ್ಮನ್ನು ಒಗ್ಗೂಡಿಸಲಿ; ವಿಭಜನೆ ಮಾಡುವುದು ಬೇಡ ಸಿಎಂ ಡಿ.ಕೆ ಶಿವಕುಮಾರ್
Vijay Dk Shivakumar: ನೀರು ನಮ್ಮನ್ನು ಒಗ್ಗೂಡಿಸಲಿ; ವಿಭಜನೆ ಮಾಡುವುದು ಬೇಡ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ದಕ್ಷಿಣ ವಲಯ ಮಂಡಳಿಯ 31ನೇ ಸಭೆಯಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ದಕ್ಷಿಣ ಭಾರತದ ವಿವಿಧ ರಾಜ್ಯಗಳ ನಡುವೆ ಇರುವ ನೀರಿನ ವಿವಾದವನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳೋಣ ಎಂದಿದ್ದಾರೆ. ಕಾವೇರಿ - ಕೃಷ್ಣಾ ನದಿ ಸೇರಿದಂತೆ ದಕ್ಷಿಣ ಭಾರತದ ವಿವಿಧ ರಾಜ್ಯಗಳ ನಡುವೆ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಂರ್ಘಷಗಳು ಏರ್ಪಡುತ್ತಿವೆ. ಈ ಸಮಸ್ಯೆಗಳನ್ನು ಸಹಕಾರ ತತ್ವದ ಮೂಲಕ ಪರಿಹರಿಸಿಕೊಳ್ಳಬೇಕಿದೆ ಎಂದು ಸಿಎಂ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ತಮಿಳುನಾಡಿನ ಚೆನ್ನೈ (ಮಹಾಬಲಿಪುರಂ) ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ದಕ್ಷಿಣ ವಲಯ ಮಂಡಳಿಯ 31ನೇ ಸಭೆಯಲ್ಲಿ ಡಿ.ಕೆ ಶಿವಕುಮಾರ್ ಅವರು ಮಾತನಾಡಿದರು. ಪ್ರತಿ ರಾಜ್ಯಕ್ಕೂ ನೀರಿಗಿಂತ ಮಹತ್ವದ ಸಂಪನ್ಮೂಲ ಮತ್ತೊಂದಿಲ್ಲ. ನಮ್ಮ ನದಿಗಳು ರಾಜಕೀಯ ಗಡಿಗಳನ್ನು ಗುರುತಿಸಬಾರದು. ಕಾವೇರಿ - ಮೇಕೆದಾಟು, ಕೃಷ್ಣಾ, ತುಂಗಭದ್ರಾ, ಪೆನ್ನಾರ್ ಮತ್ತು ಪಾಲಾರ್ ನದಿಗಳು ನಮ್ಮ ದಕ್ಷಿಣ ಭಾರತದ ರಾಜ್ಯಗಳ ಜೀವನಾಡಿ ಆಗಿವೆ. ನೀರು ನಮ್ಮನ್ನೆಲ್ಲ ಒಗ್ಗೂಡಿಸಬೇಕು, ವಿಭಜಿಸಬಾರದು. ನೀರಿನ ಹಂಚಿಕೆಯಿಂದ ನೀರಿನ ಸಹಕಾರದತ್ತ ಸಾಗುವ ಸಮಯ ಈಗ ಬಂದಿದ್ದು, ಸಂಪನ್ಮೂಲಗಳಲ್ಲಿ ನ್ಯಾಯಯುತ ಪಾಲು ಪಡೆಯುವುದು ಅಗತ್ಯ ಎಂದು ಹೇಳಿದರು.

ಮುಂದುವರಿದು ನಮ್ಮ ಧ್ವನಿ ನ್ಯಾಯದ ಒಂದು ಭಾಗವಾದರೆ, ನಮ್ಮ ಸಂಪನ್ಮೂಲಗಳಲ್ಲಿ ನ್ಯಾಯಯುತ ಪಾಲು ಇನ್ನೊಂದು ಭಾಗವಾಗಿದೆ. ದಕ್ಷಿಣ ಭಾರತದ ಪ್ರತಿಯೊಂದು ರಾಜ್ಯಗಳಿಗೂ ನೀರಿಗಿಂತ ಮಹತ್ವದ ಸಂಪನ್ಮೂಲವಾದ ವಿಷಯ ಮತ್ತೊಂದಿಲ್ಲ. ನಮ್ಮ ನದಿಗಳು ರಾಜಕೀಯ ಗಡಿಗಳನ್ನು ಗುರುತಿಸುವುದಿಲ್ಲ. ನೀರಿನ ಹಂಚಿಕೆಯಿಂದ ನೀರಿನ ಸಹಕಾರದತ್ತ ಸಾಗುವ ಸಮಯ ಈಗ ಬಂದಿದೆ ಎಂದು ಸಲಹೆ ನೀಡಿದರು.
ದಕ್ಷಿಣ ಭಾರತದ ಪ್ರತಿ ರಾಜ್ಯದ ನದಿಪಾತ್ರಕ್ಕೂ ತನ್ನದೇ ಆದ ನ್ಯಾಯಸಮ್ಮತ ಅಗತ್ಯಗಳಿವೆ. ನಮ್ಮ ನಿಲುವು ಸಮಾನತೆ - ಪಾರದರ್ಶಕತೆ ಹಾಗೂ ಸಹಕಾರ ಎನ್ನುವ ಮೂರು ತತ್ತ್ವಗಳನ್ನು ಒಳಗೊಂಡಿದೆ. ಆದರೆ ಈ ಸಹಕಾರವು ಎರಡೂ ದಿಕ್ಕಿನಲ್ಲೂ ಇರಬೇಕು. ಕರ್ನಾಟಕವು ಸದಾ ನೆರೆ ರಾಜ್ಯಗಳ ಹಕ್ಕುಗಳನ್ನು ಗೌರವಿಸಿಕೊಂಡೇ ಬಂದಿದೆ. ಅದೇ ರೀತಿಯಲ್ಲಿ ನಮ್ಮ ಹಕ್ಕುಗಳನ್ನೂ ಗೌರವಿಸಬೇಕೆಂದು. ಅಲ್ಲದೆ ಮುಂದುವರಿದು ನ್ಯಾಯಮಂಡಳಿಗಳ ತೀರ್ಪುಗಳಡಿ ನಮಗೆ ಕಾನೂನುಬದ್ಧವಾಗಿ ಸಿಗಬೇಕಾದ ನೀರಿನ ಪಾಲು ಹಾಗೂ ನಮ್ಮ ರೈತರಿಗೆ ನೀರನ್ನು ತಲುಪಿಸುವ ಯೋಜನೆಗಳ ಪೂರ್ಣಗೊಳಿಸುವ ನಿರೀಕ್ಷೆ ನಮ್ಮದು ಎಂದೂ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
Vijay DK Shivakumar: ಬಲಿಷ್ಠ ಭಾರತಕ್ಕೆ ಬಲಿಷ್ಠ ದಕ್ಷಿಣ ಅತ್ಯಗತ್ಯ: ಡಿ.ಕೆ ಶಿವಕುಮಾರ್
ಇನ್ನು ಬಲಿಷ್ಠ ಭಾರತಕ್ಕೆ ಬಲಿಷ್ಠ ದಕ್ಷಿಣ ಭಾರತದ ಅವಶ್ಯಕತೆ ಇದೆ ಎಂದೂ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಕರ್ನಾಟಕವು ಭಾರತದ ಬೆಳವಣಿಗೆಯ ಪ್ರಮುಖ ಆಧಾರವಾಗಿದೆ. ದೇಶದ ಒಟ್ಟು ಆಂತರಿಕ ಉತ್ಪನ್ನದ ಶೇ 9% ರಷ್ಟು ಕೊಡುಗೆಯನ್ನು ಕರ್ನಾಟಕ ನೀಡುತ್ತಿದೆ. ಅದರ ಜನಸಂಖ್ಯೆಯ 5.5% ರಷ್ಟಿದೆ, ಭಾರತದ ಸಾಫ್ಟ್ವೇರ್ ರಫ್ತಿನಲ್ಲಿ 42% ರಷ್ಟಿದೆ ಮತ್ತು 1,100 ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು ಹೊಂದಿದೆ. ಏರೋಸ್ಪೇಸ್, ಕಾಫಿ ಮತ್ತು ಸಂಸ್ಕರಿಸಿದ ಗೆರ್ಕಿನ್ ರಫ್ತಿನಲ್ಲಿ ರಾಜ್ಯವು ಮುಂಚೂಣಿಯಲ್ಲಿದೆ, ಆದರೆ ಬೆಂಗಳೂರು ವಿಶ್ವದ ಅಗ್ರ ಐದು AI ನಗರಗಳಲ್ಲಿ ಸ್ಥಾನ ಪಡೆದಿದೆ.
• ಹಂಚಿಕೆ ಮಾಡಬಹುದಾದ ತೆರಿಗೆ ಮೊತ್ತದಲ್ಲಿ ಕರ್ನಾಟಕದ ಪಾಲನ್ನು ಶೇ.3.6ರಿಂದ ಶೇ.4.7ಕ್ಕೆ ಹೆಚ್ಚಿಸಬೇಕು. 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಪಾಲು ಕಡಿಮೆಯಾಗಿದ್ದರಿಂದ ಆರು ವರ್ಷಗಳಲ್ಲಿ ಕರ್ನಾಟಕಕ್ಕೆ ₹65,000 ಕೋಟಿ ನಷ್ಟವಾಗಿದೆ.
• 15ನೇ ಹಣಕಾಸು ಆಯೋಗವು ಶಿಫಾರಸು ಮಾಡಿದ ₹5,495 ಕೋಟಿ ವಿಶೇಷ ಅನುದಾನ ಮತ್ತು ₹6,000 ಕೋಟಿ ರಾಜ್ಯ-ನಿರ್ದಿಷ್ಟ ಅನುದಾನಗಳನ್ನು ಬಿಡುಗಡೆ ಮಾಡಬೇಕು. ಜೊತೆಗೆ ಬೆಂಗಳೂರು-ಮುಂಬೈ ಹೈ-ಸ್ಪೀಡ್ ರೈಲು, STRR ದಕ್ಷಿಣ, ರಾಯಚೂರಿನಲ್ಲಿ AIIMS ಮತ್ತು ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಪ್ಯಾಕೇಜ್ಗೆ ಹೆಚ್ಚಿನ ಕೇಂದ್ರ ಬೆಂಬಲವನ್ನು ನೀಡಬೇಕು.
• 1971 ರ ಗಡಿನಿರ್ಣಯದ ಆಧಾರದ ಮೇಲೆ ಜನಸಂಖ್ಯೆ ಗಣತಿಗಾಗಿ ಕಾಯದೆ ಮಹಿಳಾ ಮೀಸಲಾತಿಯನ್ನು ಖಚಿತಪಡಿಸಿಕೊಳ್ಳುವ ಮೂಲಕ ದಕ್ಷಿಣದ ರಾಜಕೀಯ ಧ್ವನಿಯನ್ನು ರಕ್ಷಿಸಬೇಕು.
• ಕಾವೇರಿ, ಕೃಷ್ಣ, ತುಂಗಭದ್ರಾ, ಪೆನ್ನಾರ್ ಮತ್ತು ಪಾಲಾರ್ ಜಲಾನಯನ ಪ್ರದೇಶಗಳಲ್ಲಿ ಕರ್ನಾಟಕದ ಕಾನೂನುಬದ್ಧ ಪಾಲು ಮತ್ತು ನದಿ ತೀರದ ರಾಜ್ಯಗಳ ಹಕ್ಕುಗಳನ್ನು ರಕ್ಷಿಸುವಾಗ, ಸಮಾನತೆ, ಪಾರದರ್ಶಕತೆ ಮತ್ತು ಸಹಕಾರದ ಆಧಾರದ ಮೇಲೆ ನೀರಿನ ಹಂಚಿಕೆಯಿಂದ ನೀರಿನ ಸಹಕಾರಕ್ಕೆ ಪರಿವರ್ತನೆ. ಮೇಕೆದಾಟು ಯೋಜನೆಯು ಕರ್ನಾಟಕಕ್ಕೆ ಮಾತ್ರವಲ್ಲ, ತಮಿಳುನಾಡಿಗೂ ಮುಖ್ಯವಾಗಿದೆ, ಏಕೆಂದರೆ ಯೋಜನೆಯಿಂದ ಬರುವ ಪ್ರತಿಯೊಂದು ಹನಿ ನೀರು ತಮಿಳುನಾಡು ಮತ್ತು ಪುದುಚೇರಿಯ ರೈತರಿಗೆ ಪ್ರಯೋಜನವನ್ನು ನೀಡುತ್ತದೆ.
• ಆರೋಗ್ಯ ಸೇವೆಗೆ ಹಣಕಾಸು ಒದಗಿಸುವುದು, ಶಿಕ್ಷಣ ಮತ್ತು ಪೋಷಣೆ, ಬಡ ಕುಟುಂಬಗಳಿಗೆ ವಸತಿ, ಕರಾವಳಿ ಸವೆತ ಮತ್ತು ವಿಪತ್ತು ಬೆಂಬಲ, ಗಣಿಗಾರಿಕೆ ಮತ್ತು ಖನಿಜ ಹೊಂದಿರುವ ರಾಜ್ಯಗಳ ಆರ್ಥಿಕ ಹಕ್ಕುಗಳು, ಕೇಂದ್ರ ಸಂಸ್ಥೆಗಳಿಗೆ ರಾಜ್ಯಗಳು ನೀಡಿದ ಭೂಮಿ, ನ್ಯಾಯ ವಿತರಣೆ ಮತ್ತು ಡಿಜಿಟಲ್ ಮೂಲಸೌಕರ್ಯ, ಬ್ಯಾಂಕಿಂಗ್ ಮತ್ತು ಹಣಕಾಸು ಸೇರ್ಪಡೆ ಮತ್ತು ರೈತರಿಗೆ ಬೆಂಬಲಕ್ಕೆ ಸಂಬಂಧಿಸಿದ ವಿಷಯಗಳನ್ನು ಪರಿಹರಿಸಬೇಕು ಎನ್ನುವುದು ಸೇರಿದಂತೆ ಹಲವು ವಿಷಯಗಳನ್ನು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಪ್ರಸ್ತಾಪಿಸಿದ್ದಾರೆ.


Click it and Unblock the Notifications
