ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Village accountant; ಗ್ರಾಮ ಲೆಕ್ಕಿಗರ ಕಾರ್ಯಗಳ ಮಾಹಿತಿ

|
Google Oneindia Kannada News

ಬೆಂಗಳೂರು, ನವೆಂಬರ್ 16; ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸರ್ಕಾರಿ ಅಧಿಕಾರಿಗಳು ಎಂದರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಲೆಕ್ಕಿಗರು ಆಗಿರುತ್ತಾರೆ. ಸರ್ಕಾರದಿಂದ ನೇಮಕಗೊಂಡ ಪೂರ್ಣಾವಧಿ ಸರ್ಕಾರಿ ನೌಕರರು ಪಿಡಿಒ ಆಗಿರುತ್ತಾರೆ. ಕಂದಾಯ ಇಲಾಖೆಯ ವ್ಯಾಪ್ತಿಗೆ ಗ್ರಾಮ ಲೆಕ್ಕಿಗರು ಒಳಪಡುತ್ತಾರೆ.

ಗ್ರಾಮೀಣ ಮಟ್ಟದಲ್ಲಿನ ವಿವಿಧ ಕಾರ್ಯಗಳನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮತ್ತು ಗ್ರಾಮ ಲೆಕ್ಕಿಗರ ನಡುವೆ ಹಂಚಿಕೆ ಮಾಡಲಾಗಿದೆ. ಗ್ರಾಮ ಸಭೆ ಕರೆಯುವುದು ಸೇರಿದಂತೆ ವಿವಿಧ ಜವಾಬ್ದಾರಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಿರ್ವಹಣೆ ಮಾಡುತ್ತಾರೆ.

Village Accountant; ಗ್ರಾಮಲೆಕ್ಕಿಗರ ಕರ್ತವ್ಯ ಮತ್ತು ಜವಾಬ್ದಾರಿಗಳುVillage Accountant; ಗ್ರಾಮಲೆಕ್ಕಿಗರ ಕರ್ತವ್ಯ ಮತ್ತು ಜವಾಬ್ದಾರಿಗಳು

ಕರ್ನಾಟಕ ಸರ್ಕಾರ ಗ್ರಾಮ ಲೆಕ್ಕಿಗರ ನೇಮಕಾತಿಯಲ್ಲಿ ಮಹತ್ವದ ಬದಲಾವಣೆ ಮಾಡಲು ಮುಂದಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ನೇಮಕಾತಿ ಮಾಡಲಾಗುತ್ತದೆ. ಈ ಕುರಿತು ಸಲಹೆ, ವರದಿ ನೀಡಲು ಈಗಾಗಲೇ ಸರ್ಕಾರ ಸಮಿತಿಯೊಂದನ್ನು ರಚನೆ ಮಾಡಿದೆ.

Village Accountant; ಕಂದಾಯ ಇಲಾಖೆಯ ಗ್ರಾಮಲೆಕ್ಕಿಗರ ಕಾರ್ಯಗಳುVillage Accountant; ಕಂದಾಯ ಇಲಾಖೆಯ ಗ್ರಾಮಲೆಕ್ಕಿಗರ ಕಾರ್ಯಗಳು

12ನೇ ತರಗತಿಯಲ್ಲಿ ಪಡೆದ ಗರಿಷ್ಠ ಅಂಕಗಳು, ಮೀಸಲಾತಿ ಅನ್ವಯ ನೇಮಕ ಮಾಡಲಾಗುತ್ತಿತ್ತು. ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿಯೇ ಆಯ್ಕೆ ಪ್ರಾಧಿಕಾರವಾಗಿತ್ತು. ಗ್ರಾಮ ಲೆಕ್ಕಿಗರ ಕಾರ್ಯಗಳ ಮಾಹಿತಿ ಇಲ್ಲಿದೆ ನೋಡಿ..

ಗ್ರಾಮ ಲೆಕ್ಕಿಗರ ನೇಮಕಾತಿ; ಸ್ಪರ್ಧಾತ್ಮಕ ಪರೀಕ್ಷೆ ಹೇಗಿರಲಿದೆ? ಗ್ರಾಮ ಲೆಕ್ಕಿಗರ ನೇಮಕಾತಿ; ಸ್ಪರ್ಧಾತ್ಮಕ ಪರೀಕ್ಷೆ ಹೇಗಿರಲಿದೆ?

ಗ್ರಾಮ ಲೆಕ್ಕಾಧಿಕಾರಿಗಳು ಜಾರಿ ಮಾಡಬೇಕು

ಗ್ರಾಮ ಲೆಕ್ಕಾಧಿಕಾರಿಗಳು ಜಾರಿ ಮಾಡಬೇಕು

ನಿಯಮ 64 (2)ರ ಅಡಿ ತಾಲೂಕು ಕಚೇರಿಯಿಂದ ನಮೂನೆ 12ರಲ್ಲಿ ಹಕ್ಕು ಬದಲಾವಣೆ ನಮೂದನ್ನು ಸ್ವೀಕರಿಸಿದ ಕೂಡಲೇ ಪ್ರತಿ ಹಳ್ಳಿಗೆ ನಮೂನೆ 12ರಲ್ಲಿ ನಿರ್ವಹಿಸಬೇಕಾದ ವಹಿಯಲ್ಲಿ ನಮೂನೆ 12ರ ಹಕ್ಕು ಬದಲಾವಣೆ ವಿವರಗಳನ್ನು ನಮೂದಿಸಬೇಕು.

ನಿಯಮ 65ರ ಅನ್ವಯ ತಾಲೂಕು ಕಚೇರಿಯಿಂದ ಪಡೆದ ನಮೂನೆ ಸಂಖ್ಯೆ 21ರ ಪ್ರತಿಗಳನ್ನು ಸೆಕ್ಷನ್ 129ರ ಉಪವಿಭಾಗ 2ರ ಅಡಿಯಲ್ಲಿ ಅಗತ್ಯವಿರುವಂತೆ ಅಂತಹ ಎಲ್ಲಾ ವ್ಯಕ್ತಿಗಳಿಗೆ ಗ್ರಾಮ ಲೆಕ್ಕಾಧಿಕಾರಿಗಳು ಜಾರಿ ಮಾಡಬೇಕು.

ಹಕ್ಕು ಬದಲಾವಣೆ ವಹಿಯ ಕಾರ್ಯಗಳು

ಹಕ್ಕು ಬದಲಾವಣೆ ವಹಿಯ ಕಾರ್ಯಗಳು

ಗ್ರಾಮ ಲೆಕ್ಕಿಗರು ನಿಯಮ 70 (1)ರ ಅಡಿ ತಾಲೂಕು ಕಚೇರಿಯಲ್ಲಿ ನಿರ್ವಹಿಸಲಾಗುವ ನಮೂನೆ 16ರಲ್ಲಿನ ಹಕ್ಕು ದಾಖಲೆಯಲ್ಲಿನ ನಮೂದುಗಳನ್ನು ನಿಯಮ 62ರ ಉಪ ನಿಯಮ 1ರ ಅಡಿಯಲ್ಲಿ ಒದಗಿಸಲಾದ ತಂತ್ರಾಂಶ ಬಳಸಿ ಹಕ್ಕು ಬದಲಾವಣೆ ವಹಿಯಲ್ಲಿ ರವಾನಿಸಲಾದ ಆದೇಶಕ್ಕೆ ಅನುಗುಣವಾಗಿ ಕಾಲೋಚಿತಗೊಳಿಸಬೇಕು. ನವೀಕರಿಸಿದ ದಾಖಲೆಯ ಪ್ರತಿಯನ್ನು ಸಂಬಂಧಪಟ್ಟ ಗ್ರಾಮ ಲೆಕ್ಕಾಧಿಕಾರಿಗಳ ಗಮನಕ್ಕಾಗಿ 7 ದಿನದ ಒಳಗೆ ಕಳಿಸಲಾಗುತ್ತದೆ.

ನಿಯಮ 109 (1) ರ ಅಡಿ ರಾಜಸ್ವದ ಎಲ್ಲಾ ಪಾವತಿಗಳನ್ನು ಗ್ರಾಮ ಲೆಕ್ಕಾಧಿಕಾರಿಗಳು ಪಡೆದು ನಮೂನೆ ಸಂಖ್ಯೆ 36ರಲ್ಲಿ ರಶೀದಿಗಳನ್ನು ನೀಡಬೇಕು.

ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು

ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು

ನಿಯಮ 112ರ ಪ್ರಕಾರ ನಮೂನೆ 37ರಲ್ಲಿ ಸೆಕ್ಷನ್ 162ರ ಉಪ ಸೆಕ್ಷನ್ 1ರ ಅಡಿಯಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಡಿಮ್ಯಾಂಡ್ ನೋಟಿಸ್ ನೀಡಬೇಕು. ಬೇಡಿಕೆಯ ನೋಟಿಸ್ ಸ್ವೀಕರಿಸಿದ ನಂತರ 7 ದಿನಗಳಲ್ಲಿ ಪಾವತಿಸಬೇಕಾದ ಮೊತ್ತವನ್ನು ಅಂತಹ ವ್ಯಕ್ತಿಯು ಪಾವತಿಸಲು ವಿಫಲವಾದರೆ ಗ್ರಾಮ ಲೆಕ್ಕಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು. ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಅಂತಹ ಪ್ರಕರಣಗಳಲ್ಲಿ ಮಾರಾಟಕ್ಕೆ ವ್ಯಾಪಕ ಪ್ರಚಾರ ನೀಡಿದ ನಂತರ ಕಂದಾಯ ನಿರೀಕ್ಷಕರು ಅದನ್ನು ಮಾರಾಟಕ್ಕೆ ತರಬಹುದು.

ಖಜಾನೆಗೆ ರಾಜಸ್ವ ಪಾವತಿ ಮಾಡುವುದು

ಖಜಾನೆಗೆ ರಾಜಸ್ವ ಪಾವತಿ ಮಾಡುವುದು

ಉಳಿದಂತೆ ಗ್ರಾಮ ಲೆಕ್ಕಿಗರು ನಿಯಮ 121ರ ಅನ್ವಯ ಗ್ರಾಮ ಲೆಕ್ಕಾಧಿಕಾರಿಗಳು ರಾಜಸ್ವ ವಸೂಲಾತಿ ಸಂಗ್ರಹ ಮೊತ್ತ ರೂ. 5000 ಮೀರಿದಲ್ಲಿ ತಾಲೂಕು ಖಜಾನೆಗೆ ಪಾವತಿಸಬೇಕು. ಇತರೆ ಸಂದರ್ಭದಲ್ಲಿ ಪ್ರತಿ ತಿಂಗಳ 25ರೊಳಗೆ ರಾಜಸ್ವ ಸಂಗ್ರಹವನ್ನು ಖಜಾನೆಗೆ ಪಾವತಿಸಬೇಕು. ಖಿರ್ದಿ ಮೂಲಕ ಪಾವತಿಸಬೇಕು.

English summary
Gram Panchayat Village Accountant; Village Accountant role and responsibilities. This post will come under revenue department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X