ಲಾಕ್‌ಡೌನ್: ರಾಜ್ಯ ಸರ್ಕಾರಿ ನೌಕರರ ತುಟ್ಟಿ ಭತ್ಯೆ ತಡೆ ಹಿಡಿದ ಸರ್ಕಾರ
ಬೆಂಗಳೂರು, ಮೇ 06: ಕೊರೊನಾ ವೈರಸ್ ನಿಂದಾಗಿ ಲಾಕ್‌ಡೌನ್‌ನಿಂದ ಸರ್ಕಾರದ ಆರ್ಥಿಕ ಸ್ಥಿತಿಯೂ ಹೇಳಿಕೊಳ್ಳುವಂತಿಲ್ಲ. ಸರ್ಕಾರಕ್ಕೆ ಹರಿದು ಬರುತ್ತಿದ್ದ ತೆರಿಗೆ ಕೂಡ ನಿಂತಿದೆ. ಹೀಗಾಗಿ ಆರ್ಥಿಕವಾಗಿ ಹಲವು ಕಠಿಣ ಕ್ರಮಗಳನ್ನು ರಾಜ್ಯಸರ್ಕಾರ ಕೈಗೊಳ್ಳುತ್ತಿದೆ. ಇದೇ ಹಾದಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೂ ಹಲವು ಸೌಲಭ್ಯಗಳಿಗೆ ತಡೆ ಹಾಕಿದೆ.
Recommended Video
ಕೊರೊನಾ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮಾದರಿಯಲ್ಲಿಯೇ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ತಡೆ ಹಿಡಿದಿದೆ.

ಕೇಂದ್ರ ಸರ್ಕಾರ ಜುಲೈ 2021 ರ ವರೆಗೆ ತನ್ನ ನೌಕರರ ತುಟ್ಟಿ ಭತ್ಯೆಯನ್ನು ತಡೆ ಹಿಡಿದಿದ್ದು ಅದೇ ಮಾದರಿಯಲ್ಲಿ ರಾಜ್ಯ ಸರ್ಕಾರವೂ ತನ್ನ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ತಡೆಹಿಡಿದಿದೆ. ನಿವೃತ್ತ ಪಿಂಚಣಿದಾರರು, ಅನುದಾನಿತ ಸಂಸ್ಥೆಗಳು, ನಿಗಮ ಮಂಡಳಿಗಳ ನೌಕರರು, ಸರ್ಕಾರಿ ಸ್ವಾಮ್ಯದ ಸ್ವಾಯತ್ತ ಸಂಸ್ಥೆಗಳು, ಯುಜಿಸಿ, ಐಸಿಎಆರ್ , ಎಐಸಿಟಿಇ ಹಾಗೂ ಎನ್‌ಜೆಪಿಸಿಗಳಲ್ಲಿ ಕೆಲಸ ಮಾಡುವರಿಗೆ ತುಟ್ಟಿಭತ್ಯೆ ತಡೆಹಿಡಿದಿರುವ ಆದೇಶ ಅನ್ವಯವಾಗಲಿದೆ.












Click it and Unblock the Notifications