MSIL: ಕರ್ನಾಟಕದಲ್ಲಿ 200 ಔಟ್‌ಲೆಟ್‌ಗಳು ಅಪ್‌ಗ್ರೇಡ್ ಮಾಡಲು ಪ್ಲಾನ್
ಬೆಂಗಳೂರು, ಜನವರಿ 02: ಬೆಂಗಳೂರಿನ ಬಸವೇಶ್ವರ ನಗರದಲ್ಲಿ ತನ್ನ ಮೊದಲ ಸರ್ಕಾರಿ ಪ್ರೀಮಿಯಂ ಮದ್ಯ ಮಾರಾಟ ಮಳಿಗೆ ತೆರೆದ ಸರ್ಕಾರಿ ಸ್ವಾಮ್ಯದ ಮೈಸೂರು ಸೇಲ್ಸ್ ಇಂಟರ್‌ನ್ಯಾಶನಲ್ ಲಿಮಿಟೆಡ್ ಆದಷ್ಟು ಶೀಘ್ರವೇ ಮಳಿಗೆಗಳನ್ನು ಅಪ್‌ಗ್ರೇಡ್ ಮಾಡಲು ಪ್ಲಾನ್ ರೂಪಿಸಿದೆ.
ಕರ್ನಾಟಕದಲ್ಲಿ ಎಂಎಸ್‌ಐಎಲ್ ಒಟ್ಟು 1,029 ಔಟ್‌ಲೆಟ್ ಗಳನ್ನು ಹೊಂದಿದೆ. ಪೈಕಿ ರಾಜ್ಯದಲ್ಲಿ ಒಟ್ಟು ಕನಿಷ್ಠ 200 ಮಳಿಗೆಗಳನ್ನು ನವೀಕರಣಗೊಳಿಸಿ ಅಪ್‌ಗ್ರೇಡ್ ಮಾಡಲು MSIL ತೀರ್ಮಾನಿಸಿದೆ. ಕರ್ನಾಟಕದ ಪೈಕಿ ಬೆಂಗಳೂರಿನಲ್ಲಿ ಮುಂದಿನ ದಿನಗಳಲ್ಲಿ ಒಟ್ಟು ಕನಿಷ್ಠ 20 ಮಳಿಗೆಗಳು ಅಪ್‌ಗ್ರೇಡ್ ಆಗಲಿವೆ.

ಡಾ ರಾಜ್‌ಕುಮಾರ್ ರಸ್ತೆ, ಆರ್‌ಪಿಸಿ ಬಡಾವಣೆ ಮತ್ತು ವಿಜಯನಗರದಲ್ಲಿ ಇಂತಹ ನವೀಕರಿಸಿದ ಅಂಗಡಿಗಳನ್ನು ಶೀಘ್ರದಲ್ಲೇ ತೆರೆಯಲಾಗುವುದು ಪ್ರೀಮಿಯಂ ಮಳಿಗೆ ಉದ್ಘಾಟನೆ ವೇಳೆ ಸತಃ ಎಂಎಸ್‌ಐಎಲ್ ಎಂಡಿ ಮನೋಜ್‌ಕುಮಾರ್ ಮಾಹಿತಿ ನೀಡಿದ್ದಾರೆ.
2023 ರ ಕೊನೆಯ ದಿನವಾದ ಡಿಸೆಂಬರ್ 31ರಂದು ಕರ್ನಾಟಕದ ಎಂಎಸ್‌ಐಎಲ್ ವ್ಯಾಪ್ತಿಯ 1,031 ಔಟ್‌ಲೆಟ್‌ಗಳಲ್ಲಿ 18.8 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ. 2022ರ ಡಿಸೆಂಬರ್ ಕೊನೆ ದಿನಕ್ಕೆ ಹೋಲಿಕೆ ಮಾಡಿದರೆ ಈ ಬಾರಿ 4.3 ಕೋಟಿ ರೂ.ಗೂ ಅಧಿಕ ಬೆಲೆ ಮದ್ಯ ಮಾರಾಟವಾಗಿದೆ ಎಂದು ಅವರು ಮಾಹಿತಿ ನೀಡಿದರು.
ತೆಲಂಗಾಣದಲ್ಲೂ ದಾಖಲೆಯ ಮದ್ಯ ಮಾರಾಟ
ಇನ್ನೂ ನೆರೆ ರಾಜ್ಯದ ಮಾಹಿತಿ ನೋಡುವುದಾದರೆ, ಡಿಸೆಂಬರ್ 30 ರಂದು ತೆಲಂಗಾಣ ಮದ್ಯ ಮಾರಾಟ 300 ಕೋಟಿ ರೂ. ತೆಲಂಗಾಣದಲ್ಲಿ ಮದ್ಯ ಮಾರಾಟವಾಗಿದೆ.ತೆಲಂಗಾಣ ರಾಜ್ಯ ಪಾನೀಯಗಳ ನಿಗಮದ (TSBC) ಅಂಕಿಅಂಶಗಳು 2023 ರ ಕೊನೆಯ ಕೆಲವು ದಿನಗಳಲ್ಲಿ ಮದ್ಯ ಮಾರಾಟ ಏರುಗತಿಯಲ್ಲಿದೆ.

ಡಿಸೆಂಬರ್ 28 ಮತ್ತು ಡಿಸೆಂಬರ್ 31 ರ ನಡುವಿನ ಮಾರಾಟವು 750 ಕೋಟಿ ದಾಟುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ ಹೊಸ ವರ್ಷದ ಮುನ್ನಾ ಮೂರು ದಿನಗಳಲ್ಲಿ ಒಟ್ಟು 625.7 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದೆ. ಡಿಸೆಂಬರ್ 30 ರಂದು 5.8 ಲಕ್ಷ ಕೇಸ್ ಮದ್ಯ ಮಾರಾಟ ಆಗಿದೆ. 2022 ಡಿಸೆಂಬರ್ ಕೊನೆ ದಿ 3.31 ಲಕ್ಷ ಕೇಸ್ ಮಾರಾಟವಾಗಿತ್ತು.
ಮದ್ಯದ ಮಳಿಗೆಗೆ ಭಾರೀ ವಿರೋಧ
ಚೆನ್ನೈನ ಮಧುರವಾಯಲ್‌ನಲ್ಲಿರುವ ಪೆರುಮಾಳ್ ಕೋಯಿಲ್ ಸ್ಟ್ರೀಟ್‌ನ ನಿವಾಸಿಗಳು ಮದ್ಯದ ಔಟ್‌ಲೆಟ್ ಸ್ಥಳಾಂತರ ವಿರೋಧಿಸಿದ್ದಾರೆ. ಇಲ್ಲಿ ಟಾಸ್ಮಾಕ್ (TASMAC) ಔಟ್‌ಲೆಟ್ ಸಂಖ್ಯೆ 8,937 ನಷ್ಟಿವೆ. ಇವುಗಳಲ್ಲಿ ಕಡಿಮೆ ಮಾರಾಟವಾಗುವ ಮಳಿಗೆಗಳನ್ನು ಬೇರೆ ಸ್ಥಳಾಂತರಿಸಲಾಗುತ್ತದೆ. ಇದನ್ನು ವಿರೋಧಿಸಿ ಪ್ರತಿಭಟನೆಗಳು ಆಗಿವೆ.
ಈ ಪ್ರದೇಶದಲ್ಲಿ ಮದ್ಯದಂಗಡಿ ಇದ್ದು, ಹತ್ತಿರವೇ ಮತ್ತೊಂದು ಅಂಗಡಿ ಇದೆ. ಈ ಕಾರಣದಿಂದ ಇಲ್ಲಿ ಮತ್ತೊಂದು ಅಂಗಡಿ ಬೇಡ ಎಂದು ಹೇಳುತ್ತಿದ್ದಾರೆ. ಈ ಸಂಬಂಧ ಡಿಎಂಕೆ ಪದಾಧಿಕಾರಿಗಳು, ಪೊಲೀಸರ ಉಪಸ್ಥಿತಿಯೊಂದಿಗೆ, ನಿವಾಸಿಗಳಿಗೆ ತಮ್ಮ ಸಮಸ್ಯೆಗಳನ್ನು ಟಾಸ್ಮಾಕ್ ಅಧಿಕಾರಿಗಳೊಂದಿಗೆ ತಿಳಿಸಿದ್ದರು. ಪರಿಹಾರದ ಭರವಸೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
-
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ನಟಿ ನೋರಾ ಫತೇಹಿ ವೃತ್ತಿಜೀವನಕ್ಕೆ ಕುತ್ತು ತಂದ 'ಸೆರಗ ಸರ್ಸೆ' ವಿವಾದ: ಗಡಿಪಾರು ಮಾಡುವಂತೆ ಗೃಹ ಸಚಿವಾಲಯಕ್ಕೆ ದೂರು -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ












Click it and Unblock the Notifications