ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೀಸೆಲ್‌ ವಾಹನ ನಿಷ್ಕ್ರಿಯ: ಪ್ರೋತ್ಸಾಹಧನ 50 ಸಾವಿರಕ್ಕೆ ಹೆಚ್ಚಿಸಲು ಚಿಂತನೆ

By Nayana
|
Google Oneindia Kannada News

ಬೆಂಗಳೂರು, ಜೂನ್‌ 27: ಹದಿನೈದು ವರ್ಷ ಮೇಲ್ಪಟ್ಟ ಡೀಸೆಲ್‌ ವಾಹನಗಳನ್ನು ನಿಷ್ಕ್ರಿಯಗೊಳಿಸಿದರೆ ವಾಹನಗಳ ಮಾಲೀಕರಿಗೆ ಪ್ರೋತ್ಸಾಹಧನವನ್ನು 50 ಸಾವಿರ ರೂಗೆವರೆಗೆ ನೀಡಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

ಈಗಾಗಲೇ ಸಾರಿಗೆ ಮತ್ತು ಪರಿಸರ ಇಲಾಖೆ ಜಂಟಿಯಾಗಿ ಹಳೆಯ ಡೀಸೆಲ್‌ ವಾಹನಗಳನ್ನು ನಿಷ್ಕ್ರಿಯಗೊಳಿಸಲು 30 ಸಾವಿರ ರೂ. ಪ್ರೋತ್ಸಾಹ ಧನವನ್ನು ಘೋಷಿಸಿದೆ. ಆದರೆ ಸಾಕಷ್ಟು ಜನರು ತಮ್ಮ ವಾಹನಗಳನ್ನು ನಿಷ್ಕ್ರಿಯಗೊಳಿಸಲು ಮುಂದಾಗುತ್ತಿಲ್ಲ

ವಿಶ್ವದ 20 ಮಾಲಿನ್ಯಯುಕ್ತ ನಗರಗಳಲ್ಲಿ ಭಾರತದ 14 ನಗರಗಳು!ವಿಶ್ವದ 20 ಮಾಲಿನ್ಯಯುಕ್ತ ನಗರಗಳಲ್ಲಿ ಭಾರತದ 14 ನಗರಗಳು!

, ಹಾಗಾಗಿ ಪ್ರೋತ್ಸಾಹಧನವನ್ನು 50 ಸಾವಿರ ರೂ.ಗೆ ಹೆಚ್ಚಿಸಿದರೆ ಹೆಚ್ಚು ಜನರು ಹಲವು ವಾಹನಗಳನ್ನು ನಿಷ್ಕ್ರಿಯಗೊಳಿಸಬಹುದು ಎಂಬುದು ಸರ್ಕಾರದ ನಿರೀಕ್ಷೆಯಾಗಿದೆ ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ ಸುಮಾರು 2ಲಕ್ಷ ಡೀಸೆಲ್‌ ವಾಹನಗಳನ್ನು ನಿಷ್ಕ್ರಿಯಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ.

Govt thinking to increase compensation to scrap 15 years old diesel vehicles

ಡೀಸೆಲ್‌ಯುಕ್ತ ವಾಹನಗಳು ಅದರಲ್ಲೂ 15ವರ್ಷ ಮೀರಿದ ವಾಹನಗಳು ಅತಿ ಹೆಚ್ಚು ಇಂಗಾಲದ ಡೈಆಕ್ಸೈಡ್‌ ನ್ನು ಹೊರ ಉಗುಳುವುದರಿಂದ ಪರಿಸರದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಸಲಹೆ ಅನುಸಾರ 15 ವರ್ಷ ಮೇಲ್ಪಟ್ಟ ಹಳೆಯ ವಾಹನಗಳನ್ನು ನಿಷ್ಕ್ರಿಯಗೊಳಿಸಲು ದೆಹಲಿ ಸರ್ಕಾರ ಮುಂದಾಗಿದೆ.

ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಡೀಸೆಲ್‌ ವಾಹನಗಳನ್ನು ನಿಷ್ಕ್ರಿಯಗೊಳಿಸಲು ಈ ರೀತಿಯ ಚಿಂತನೆಗೆ ಮುಂದಾಗಿದೆ ಎಂದು ಅರಣ್ಯ ಮತ್ತು ಪರಿಸರ ಸಚಿವ ಆರ್‌. ಶಂಕರ್‌ ಇಂಗಿತ ವ್ಯಕ್ತಪಡಿಸಿದ್ದಾರೆ.

English summary
State government is thinking of increase compensation from Rs.30000 to Rs.50000 for scrap 15 years old diesel vehicles as part of initiation of curb pollution in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X