ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾಸಗಿ ಶಾಲೆಗಳ ಶುಲ್ಕ ನಿಗದಿ ನಿಯಂತ್ರಣಕ್ಕೆ ಸರ್ಕಾರ ಆದೇಶ!

By Nayana
|
Google Oneindia Kannada News

ಬೆಂಗಳೂರು, ಮೇ 19: ಖಾಸಗಿ ಶಾಲೆಗಳ ಶುಲ್ಕ ನಿಗದಿ ಕುರಿತು ಶೈಕ್ಷಣಿಕ ವಲಯದಲ್ಲಿ ಚರ್ಚೆ ನಡೆಯುತ್ತಲೇ ಇದೆ. ಶುಲ್ಕ ನಿಯಂತ್ರಿಸಿ ಎಂದು ಪಾಲಕರು ಮನವಿ ಮಾಡುತ್ತಲೇ ಬಂದಿದ್ದರು. ಕೊನೆಗೂ ಕಣ್ತೆರೆದ ಸರ್ಕಾರ ಖಾಸಗಿ ಶಾಲೆಗಳ ಶುಲ್ಕ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಿದ್ದು, ಈ ಶೈಕ್ಷಣಿಕ ವರ್ಷದಿಂದಲೇ ನಿಯಮ ಜಾರಿಗೆ ತರಲು ನಿರ್ಧರಿಸಿದೆ.

ಈ ಅಧಿಸೂಚನೆ ಪ್ರಕಾರ, ರಾಜ್ಯದ ಯಾವುದೇ ಶಾಲೆಗಳು ಶುಲ್ಕವನ್ನ ವಾರ್ಷಿಕ ಶೇ.15ಕ್ಕಿಂತ ಹೆಚ್ಚಿಸುವಂತಿಲ್ಲ. ಅಲ್ಲದೆ, ಸಿಬ್ಬಂದಿಯ ವೇತನ, ಒಟ್ಟಾರೆ ಖರ್ಚಿನ ಮೊತ್ತವನ್ನು ಶಾಲೆಯ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ವಿಭಾಗಿಸಿ ಶುಲ್ಕ ನಿಗದಿಪಡಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಖಾಸಗಿ ಶಾಲೆಗಳ ಶುಲ್ಕ ನಿಗದಿ ವಿಚಾರದಲ್ಲಿ ಗೊಂದಲಖಾಸಗಿ ಶಾಲೆಗಳ ಶುಲ್ಕ ನಿಗದಿ ವಿಚಾರದಲ್ಲಿ ಗೊಂದಲ

ಸಾರ್ವಜನಿಕರು ಹಾಗೂ ಪೋಷಕರ ಅನುಕೂಲಕ್ಕಾಗಿ ಎಲ್ಲ ಶಾಲೆಗಳು ತಮ್ಮ ಸೂಚನಾ ಫಲಕ ಹಾಗೂ ವೆಬ್‌ಸೈಟ್‌ನಲ್ಲಿ ಶುಲ್ಕ ವಿವರ ಪ್ರಕಟಿಸಬೇಕು. ಅಲ್ಲದೆ, ಪ್ರವೇಶ ಸಂದರ್ಭದಲ್ಲಿ ಶಾಲೆಗಳ ನಿರ್ವಹಣಾ ವೆಚ್ಚವನ್ನು ಪೋಷಕರಿಂದ ವಸೂಲಿ ಮಾಡುವುದಕ್ಕೂ ಸರ್ಕಾರ ನಿರ್ಬಂಧ ಹೇರಿದೆ.

Govt issues notification of control on private schools

ಇಲಾಖೆ ಹೊರಡಿಸಿರುವ ಹೊಸ ಮಾರ್ಗಸೂಚಿಗಳ ಪ್ರಕಾರ, ಶಾಲೆಗಳು ವಿದ್ಯಾರ್ಥಿಯಿಂದ ಕೇವಲ 2500 ರೂ. ನಿರ್ವಹಣಾ ಶುಲ್ಕ ವಿಧಿಸಬೇಕು. ಈ ನಿಯಮಗಳನ್ನು ರೂಪಿಸಲು ವರ್ಷದ ಹಿಂದೆ ಇಲಾಖೆ ಆಕ್ಷೇಪಣೆಗಳನ್ನು ಆಹ್ವಾನಿಸಿದ್ದಾಗ 5 ಸಾವಿರ ರೂ. ನಿರ್ವಹಣಾ ಶುಲ್ಕ ಪಡೆಯಲು ಅನುಮತಿ ನೀಡುವಂತೆ ಶಾಲೆಗಳು ಕೋರಿದ್ದವು.

ಅಂತಿಮವಾಗಿ 2500 ರೂ. ನಿರ್ವಹಣಾ ಶುಲ್ಕ ಪಡೆಯಲು ಅನುಮತಿ ನೀಡಲಾಗಿದೆ. ರಾಜ್ಯ ಹಾಗೂ ಕೇಂದ್ರದ ನಾನಾ ಮಂಡಳಿಗಳ ಐಸಿಎಸ್‌ಇ, ಸಿಬಿಎಸ್‌ಇ ಪಠ್ಯಕ್ರಮ ಅನುಸರಿಸುವ ಶಾಲೆಗಳಿಗೂ ಈ ನಿಯಮ ಅನ್ವಯವಾಗಲಿದೆ.

ರಾಜ್ಯ ಸರ್ಕಾರದ ಈ ಕ್ರಮವನ್ನು ಸ್ವಾಗತಿಸಿರುವ ಕರ್ನಾಟಕ ರಾಜ್ಯ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆಡಳಿತ ಮಂಡಳಿ ಸಂಘದ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್, ಶುಲ್ಕ ನಿಯಂತ್ರಣ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಒತ್ತಾಯಿಸಿದ್ದಾರೆ.

ಪ್ರವೇಶ ಮುಗಿದಿದ್ದರೆ ಮಾಡಬೇಕಾಗಿದ್ದೇನು?: ಈಗಾಗಲೇ ಬಹುತೇಕ ಖಾಸಗಿ ಶಾಲೆಗಳಲ್ಲಿ ಪ್ರವೇಶ ಮುಗಿದಿದೆ. ಈ ಹಂತದಲ್ಲಿ ಸರ್ಕಾರದ ಶುಲ್ಕ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಿರುವುದರಿಂದ ಪೋಷಕರಲ್ಲಿ ಗೊಂದಲ ಮೂಡಿದೆ. ಒಂದು ವೇಳೆ ಈಗಾಗಲೇ ಪೋಷಕರು ಶುಲ್ಕ ಪಾವತಿ ಮಾಡಿದಲ್ಲಿ ಜಿಲ್ಲಾ ಶಿಕ್ಷಣ ನಿಯಂತ್ರಣ ಸಮಿತಿ ಮೊರೆ ಹೋಗಬಹುದು. ಅಂಥ ಸಂದರ್ಭದಲ್ಲಿ ಶಾಲೆಗಳು ನಿಗದಿಗಿಂತ ಹೆಚ್ಚುವರಿ ಶುಲ್ಕ ಪಾವತಿಸಿದ್ದಲ್ಲಿ ಹಿಂದಿರುಗಿಸಲು ಸಮಿತಿ ಸೂಚಿಸಲಿದೆ.

English summary
To control fees collection of private schools in the state, education department has issued notification. According to notification, private schools could not collect maintenance fees more than Rs.2,500 per year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X