ಸರ್ಕಾರಿ ಆಸ್ಪತ್ರೆಗಳ ಕಥೆ ಬಿಚ್ಚಿಟ್ಟ ಸಿಎಜಿ ವರದಿ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಮಾರ್ಚ್ 24 : ಸ್ವಾಯತ್ತ ಹಾಗೂ ಬೋಧನಾ ಆಸ್ಪತ್ರೆ ಹಾಗೂ ರಾಜ್ಯ ವಲಯ ಆಸ್ಪತ್ರೆಗಳಲ್ಲಿನ ಸೌಲಭ್ಯಗಳ ಕುರಿತು ಮಹಾಲೇಖಪಾಲರ (ಸಿಎಜಿ)ವರದಿ ಸಿದ್ಧಪಡಿಸಿದೆ. ಬುಧವಾರ ವಿಧಾನಸಭೆಯಲ್ಲಿ ಸಿಎಜಿ ವರದಿಯನ್ನು ಮಂಡಿಸಲಾಗಿದೆ.

ಆಸ್ಪತ್ರೆಗಳಲ್ಲಿ ಯಂತ್ರೋಪಕರಣಗಳನ್ನು ಅಳವಡಿಸಲಾಗಿದ್ದರೂ ಸೂಕ್ತ ತಜ್ಞ ವೈದ್ಯರ ಕೊರತೆ ಇದೆ. ರಾಜ್ಯದ ಶೇ 41 ರಷ್ಟು ಜಿಲ್ಲಾಸ್ಪತ್ರೆಗಳಲ್ಲಿ ಮಕ್ಕಳ ವೈದ್ಯರಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಐಸಿಯು ಅಗತ್ಯಕ್ಕೆ ತಕ್ಕಂತಿಲ್ಲ. ಇದ್ದರೂ ಅಲ್ಲಿ ಉಪಕರಣಗಳ ಕೊರೆತೆಯಿದೆ ಎಂದು ಸಿಎಜಿ ತನ್ನ ವರದಿಯಲ್ಲಿ ಹೇಳಿದೆ. ವರದಿಯ ಪ್ರಮುಖ ಅಂಶಗಳು ಇಲ್ಲಿವೆ. [ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ 'ಕಾಯಕಲ್ಪ' ಪ್ರಶಸ್ತಿ ಗರಿ]

hospital

* ಅಪಾಯಕಾರಿ ಆಸ್ಪತ್ರೆ ತ್ಯಾಜ್ಯ ನಿರ್ವಹಣೆಗೆ ಸೂಕ್ತ ವ್ಯವಸ್ಥೆಯಿಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಜೈವಿಕ ತ್ಯಾಜ್ಯ ನಿರ್ವಹಣೆ ಸಂಬಂಧ ಸೂಕ್ತ ಅನುಮತಿಯಲ್ಲಿ ಹಲವು ಆಸ್ಪತ್ರೆಗಳು ಪಡೆದಿಲ್ಲ. [ಆರೋಗ್ಯ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ ಸಿದ್ದರಾಮಯ್ಯ]

* ಹಲವಾರು ಆಸ್ಪತ್ರೆಗಳಲ್ಲಿ ಅಗ್ನಿ ಶಾಮಕ ಪ್ರಾಧಿಕಾರದಿಂದ ಅನುಪಾಲನಾ ಸಮ್ಮತಿಯನ್ನೂ ಪಡೆದಿಲ್ಲ. ಮದ್ಯ ಸಾರ ಸಂಗ್ರಹಿಸಲು ಅಬಕಾರಿ ಅನುಮತಿ ಮತ್ತು ರಕ್ತ ಸಂಗ್ರಹಿಸಲು ರಕ್ತನಿಧಿ ಪರವಾನಗಿಗಳನ್ನು ಪಡೆದಿಲ್ಲ. [ಐಸಿಯು ಕೋಣೆಗೆ ವಿಧಿಸಿದ್ದ ಹೆಚ್ಚುವರಿ ತೆರಿಗೆ ನೀತಿ ಹಿಂದಕ್ಕೆ]

* ಶೇ. 75ರಷ್ಟು ಆಸ್ಪತ್ರೆಗಳಲ್ಲಿ ಐಪಿಎಚ್ಎಸ್ ಸೂಚಿಸಿದಂತೆ ಆರೋಗ್ಯ ಸಿಬ್ಬಂದಿ ಇಲ್ಲ. ಅರ್ಧದಷ್ಟು ಆಸ್ಪತ್ರೆಗಳಲ್ಲಿ ಜನರಲ್ ಮೆಡಿಸಿನ್ ಮತ್ತು ನೇತ್ರ ವಿಜ್ಞಾನ ಸೇವೆ ಇಲ್ಲ. ಶೇ 35 ರಷ್ಟು ಜನರಲ್ ಸರ್ಜರಿ, ಶೇ 21 ರಷ್ಟು ಪ್ರಸೂತಿ ಮತ್ತು ಶೇ 41 ರಷ್ಟು ಆಸ್ಪತ್ರೆಗಳಲ್ಲಿ ಪ್ರಸೂತಿ ತಜ್ಞರೇ ಇಲ್ಲ. [ಬನ್ನಿ ಎಲ್ಲರೂ ಒಮ್ಮತದಿಂದ ಕ್ಷಯರೋಗವನ್ನು ಕೊನೆಗಾಣಿಸೋಣ]

* ಆಧುನಿಕ ಉಪಕರಣಗಳನ್ನು ಅಳವಡಿಸಿದ್ದರೂ ತಜ್ಞರ ಕೊರತೆಯಿಂದ ಉಪಕರಣಗಳು ಬಳಕೆಯಾಗದೇ ಹಾಳಾಗುತ್ತಿವೆ. ಸುಟ್ಟಗಾಯಗಳ ವಾರ್ಡ್‌ಗಳು ಮತ್ತು ಟ್ರಾಮಾಕೇರ್ ಕೇಂದ್ರಗಳನ್ನು ಸೃಷ್ಟಿಸಲು ಸರ್ಕಾರದಿಂದ ಪಡೆದುಕೊಂಡ ವಿಶೇಷ ಪ್ರಾರಂಭಿಕ ಪ್ರಯತ್ನಗಳು ಹಣಕಾಸು ಮತ್ತು ಮಾನವ ಸಂಪನ್ಮೂಲದ ಕೊರತೆಯಿಂದಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Comptroller and Auditor General of India (CAG) report for 2014–15, tabled in the Legislative Assembly on Wednesday. In the report CAG said, government hospitals facing a shortage of health personnel including doctors.
Please Wait while comments are loading...