Industrial Corridor: ಉತ್ತರ ಕರ್ನಾಟಕದಲ್ಲಿ 6,000 ಎಕರೆಯಲ್ಲಿ ಬೃಹತ್ ಕೈಗಾರಿಕೆ ಕಾರಿಡಾರ್: ಎಂಬಿ ಪಾಟೀಲ್
ಬೆಂಗಳೂರು, ಜುಲೈ 30: ರಾಜ್ಯದಲ್ಲಿ ಈವರೆಗೆ ಬಂದ ಸರ್ಕಾರಗಳು ಉತ್ತರ ಕರ್ನಾಟಕದ ಅಭಿವೃದ್ಧಿಯನ್ನು ನಿರ್ಲಕ್ಷಿಸುತ್ತಿದ್ದಾರೆ ಎಂಬ ಆರೋಪ ಸರ್ವೇ ಸಾಮಾನ್ಯವಾಗಿದ್ದವು. ಆದರೆ ಈ ಮಾತನ್ನು ಸುಳ್ಳು ಮಾಡಲು ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಹಾಗೂ ಸಿಎಂ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಬರೋಬ್ಬರಿ 6,000 ಎಕರೆಯಲ್ಲಿ ಬೃಹತ್ ಕೈಗಾರಿಕೆ ಕಾರಿಡಾರ್ ತಲೆ ಎತ್ತಲಿದೆ.
'ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕಾ ಕ್ರಾಂತಿ-ಉದ್ಯೋಗ ಸೃಷ್ಟಿಗೆ ಮುನ್ನುಡಿ' ಎಂಬ ಶಿರ್ಷಿಕೆಯಡಿ ರಾಜ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರು ವಿಡಿಯೋ ವೊಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಉತ್ತರ ಕರ್ನಾಟಕದ ಭಾಗದ ಹುಬ್ಬಳ್ಳಿ-ಧಾರವಾಡ ಐಟಿ, ಇವಿ, ಮುದ್ರಣ, ಫುಡ್ ಹಬ್ ಸೇರಿದಂತೆ ಉದ್ಯಮಗಳನ್ನು ಸ್ಥಾಪನೆ ಆಗಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಸಮಗ್ರ ಕೈಗಾರಿಕಾ ಪರಿವರ್ತನೆಗೆ ನಾಂದಿ
ಧಾರವಾಡದ ಸಮೀಪ 6,000 ಎಕರೆಯಲ್ಲಿ ಕೈಗಾರಿಕಾ ಕಾರಿಡಾರ್ ಸ್ಥಾಪನೆಗೆ ಸಿದ್ಧತೆ ನಡೆಯುತ್ತಿದೆ. ಇದು ಧಾರವಾಡ-ಹುಬ್ಬಳ್ಳಿ ಪ್ರದೇಶದಲ್ಲಿ ದೊಡ್ಡ ಕೈಗಾರಿಕಾ ಕ್ರಾಂತಿಗೆ ಸಾಕ್ಷಿಯಾಗಲಿದೆ. ಈ ಬೆಳವಣಿಗೆಯು ಉತ್ತರ ಕರ್ನಾಟಕದಲ್ಲಿ ಸಮಗ್ರ ಕೈಗಾರಿಕಾ ಪರಿವರ್ತನೆಗೆ ಸಹ ನಾಂದಿಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
'ಕೈಗಾರೀಕರಣ ಇಲ್ಲವೇ ವಿನಾಶ' ಎಂಬ ಸರ್ ಎಂ.ವಿಶ್ವೇಶ್ವರಯ್ಯ' ಮಂತ್ರದಡಿ ಕರ್ನಾಟಕ ರಾಜ್ಯ ಸರ್ಕಾರ ಉತ್ತರ ಕರ್ನಾಟಕದ ಕೈಗಾರಿಕೆ ವೃದ್ಧಿಗೆ ಹಲವು ಕಾರ್ಯಕ್ರಮ ರೂಪಿಸಿತ್ತದೆ. ಭವಿಷ್ಯದಲ್ಲಿ ಬೃಹತ್ ಕೈಗಾರಿಕಾ ಕ್ರಾಂತಿಗೆ ಸಾಹಿತ್ಯ ನಗರಿ ಹುಬ್ಬಳ್ಳಿ ಧಾರವಾಡ ಸಜ್ಜಾಗಲಿದೆ. ಬೆಂಗಳೂರು ಮುಂಬೈ ಕೈಗಾರಿಕೆ ಕಾರಿಡಾರ್ (BMIC) ಸದ್ಭಳಕೆ ಮಾಡಿಕೊಳ್ಳುವ ಜೊತೆಗೆ ದುಡಿಯುವ ಕೈಗಳಿಗೆ ಉದ್ಯೋಗ ನೀಡಲು ಸರ್ಕಾರ ನಿರ್ಧರಿಸಿದೆ.

ಧಾರವಾಡಕ್ಕೆ ಯಾವೆಲ್ಲ ಉದ್ಯಮಗಳು ಬರಲಿವೆ?
ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ಭಾಗದಲ್ಲಿ ಸಾಫ್ಟವೇರ್, ಆಟೋ ಮೊಬೈಲ್, ಇವಿ, ಫುಡ್ ಇಂಡಸ್ಟ್ರಿ, ಮುದ್ರಣ ಹಾಗೂ ಸನ್‌ರೈಸ್ ಸೆಕ್ಟರ್‌ಗಳು ಸೇರಿದಂತೆ ವಿವಿಧ ವಲಯಗಳು ಉದ್ಯಮಗಳ ಸ್ಥಾಪನೆ ಆಗಲಿವೆ. ಈ ಮೂಲಕ ರಾಜ್ಯ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುವ ಜೊತೆಗೆ ಈ ಭಾಗದ ಅರ್ಹರಿಗೆ ಸಾಕಷ್ಟು ಉದ್ಯೋಗಗಳು ಲಭಿಸುವಂತೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಇನ್ನೂ ಇದಕ್ಕೂ ಪೂರಕವಾಗಿ ಉದ್ಯಮಗಳ ವಲಯ, ಅದರ ಸ್ಥಾಪನೆಗೆ ರಾಷ್ಟ್ರೀಯ ಹೆದ್ದಾರಿಗಳಾದ ಎನ್‌ಎಚ್ 48 ಮತ್ತು ಎನ್‌ಎಚ್ 67 ಬಲ ತುಂಬಲಿವೆ. ಈಗಾಗಲೇ ಈ ಭಾಗದಲ್ಲಿ ಸಾರಿಗೆ ವ್ಯವಸ್ಥೆ ಬಲಗೊಳ್ಳುತ್ತಿದ್ದು, ಮುಂದೆ ಹುಬ್ಬಳ್ಳಿ ವಿಮಾನ ನಿಲ್ದಾಣ, ಗೋವಾ, ಕಾರವಾರ ಬಂದರುಗಳಲ್ಲಿ ವಾಣಿಜ್ಯ ಚಟುವಟಿಕೆಗಳು ವೃದ್ಧಿಸಲಿವೆ. ಸರಕು-ಸೇವೆಗಾಗಿ ಇಲ್ಲಿನ ಸಾರಿಗೆ ಮತ್ತಷ್ಟು ಬಲಗೊಳ್ಳುವುದರಲ್ಲಿ ಆಶ್ಚರ್ಯವೇ ಇಲ್ಲ.
Industrial Revolution in North Karnataka Begins
— M B Patil (@MBPatil) July 30, 2024
The Dharwad-Hubballi region is set to witness a major industrial revolution with the establishment of an industrial corridor spanning 6,000 acres near Dharwad.
This development will also serve as a precursor to a comprehensive… pic.twitter.com/IzR09dngT0
ಶೀಘ್ರವೇ ಕೈಗಾರಿಕಾ ಕಾರಿಡಾರ್ ಬಗ್ಗೆ ಪೂರ್ಣ ಮಾಹಿತಿ
ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರದ ಈ ಮಹತ್ವಾಕಾಂಕ್ಷೆಯ ಈ ಕೈಗಾರಿಕೆ ಕಾರಿಡಾರ್ ಭದ್ರ ಬುನಾದಿ ಹಾಕಲಿದೆ ಎಂದು ಸಚಿವ ಎಂಬಿ ಪಾಟೀಲ್ ಅವರು ವಿಶ್ವಾಸ ಹೊಂದಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳ ಜೊತೆಗೆ ಸಚಿವರು ಒಂದಷ್ಟು ಮಾತುಕತೆ ನಡೆಸಿದ್ದಾರೆ.
ಯಾವೆಲ್ಲ ಯೋಜನೆಗಳು ಉತ್ತರ ಕರ್ನಾಟಕ ಭಾಗದಲ್ಲಿ ಎಷ್ಟು ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗಲಿವೆ. ಅಡಿಗಲ್ಲು ಸ್ಥಾಪನೆ ಯಾವಾಗ, ಏನೆಲ್ಲ ಇರಲಿವೆ. ಟೆಂಡರ್ ಸೇರಿದಂತೆ ಇನ್ನಿತರ ಮಾಹಿತಿಗಳು ಸರ್ಕಾರವು ಮುಂದಿನ ದಿನಗಳಲ್ಲಿ ಖಚಿತಪಡಿಸಲಿದೆ.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications