ಯಶಸ್ವಿನಿ & ಆಯುಷ್ಮಾನ್: ಫಲಾನುಭವಿಗಳು ಒಂದು ಯೋಜನೆಯ ಲಾಭ ಪಡೆಯಲಷ್ಟೇ ಅರ್ಹರು: ಸರ್ಕಾರ
ಬೆಂಗಳೂರು, ಅಕ್ಟೋಬರ್ 8: ಸಹಕಾರ ಇಲಾಖೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರತ್ಯೇಕವಾಗಿ ಅನುಷ್ಠಾನಗೊಳಿಸುತ್ತಿರುವ ಯಶಸ್ವಿನಿ ಮತ್ತು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ (ABArK)
ಆರೋಗ್ಯ ಯೋಜನೆಗಳ ಫಲಾನುಭವಿಗಳಲ್ಲಿ ಅನೇಕರು ಎರಡೂ ಯೋಜನೆಗಳ ಅಡಿ ನೋಂದಾಯಿತರಾಗಿರುವುದು ಪತ್ತೆಯಾಗಿದೆ. ಎರಡೂ ಯೋಜನೆಗಳು ಪ್ರತಿ ಕುಟುಂಬಕ್ಕೂ ವಾರ್ಷಿಕವಾಗಿ ರೂ. 5 ಲಕ್ಷದವರೆಗೆ ಉಚಿತ ಆರೋಗ್ಯ ರಕ್ಷಣೆಯನ್ನು ಒದಗಿಸುತ್ತವೆ. ಇದೀಗ ಒಂದು ಯೋಜನೆಯಿಂದ ಫಲಾನುಭವಿಗಳನ್ನು ಕೈ ಬಿಡಲು ಸರ್ಕಾರ ನಿರ್ಧರಿಸಿದೆ.
ಸಹಕಾರ ಇಲಾಖೆಯಿಂದ ಯಶಸ್ವಿನಿ ಫಲಾನುಭವಿಗಳ ಆಧಾರ್ ಸೀಡೆಡ್ ಡೇಟಾವನ್ನು ಸಂಗ್ರಹಿಸಿ, ಅದನ್ನು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ (ABArK) ಡೇಟಾಬೇಸ್‌ನೊಂದಿಗೆ ತಾಳೆಮಾಡಲಾಗಿದೆ. ಈ ಪ್ರಕ್ರಿಯೆಯಲ್ಲಿ ಒಟ್ಟು 41.51 ಲಕ್ಷ ಯಶಸ್ವಿನಿ ಫಲಾನುಭವಿಗಳಲ್ಲಿ 41.09 ಲಕ್ಷರ ಆಧಾರ್ ಸಂಖ್ಯೆ ದೃಢಪಟ್ಟಿದ್ದು, 35.71 ಲಕ್ಷರ ಮಾಹಿತಿ ABArK ಡೇಟಾದೊಂದಿಗೆ ಹೊಂದಾಣಿಕೆಯಾಗಿರುವುದು ಪತ್ತೆಯಾಗಿದೆ. ಅದರಲ್ಲಿ 31 ಲಕ್ಷರ ಹೆಸರು ಮತ್ತು ಆಧಾರ್ ಎರಡೂ ಹೊಂದಿಕೆಯಾಗಿದೆ. 26.82 ಲಕ್ಷರು PHH ಮತ್ತು 4.17 ಲಕ್ಷರು NPHH ಫಲಾನುಭವಿಗಳಾಗಿದ್ದಾರೆ ಎಂದು ಸರ್ಕಾರ ಮಾಹಿತಿ ನೀಡಿದೆ.

ಫಲಾನುಭವಿಗಳು ಒಂದು ಯೋಜನೆಗೆ ಅರ್ಹರು
ಇದೇ ವೇಳೆ, 2024-25ನೇ ಆರ್ಥಿಕ ವರ್ಷದಲ್ಲಿ ಯಶಸ್ವಿನಿ ಯೋಜನೆಯ 3.07 ಲಕ್ಷ ಫಲಾನುಭವಿಗಳು ABArK ಯೋಜನೆಯಡಿಯಲ್ಲಿ ರೂ.130.22 ಕೋಟಿ ಮೊತ್ತದ ಚಿಕಿತ್ಸೆ ಪಡೆದಿರುವುದಾಗಿ ವರದಿಯಾಗಿದೆ. ಆದರೆ, ABArK ಯೋಜನೆಯ ಮಾರ್ಗಸೂಚಿಯ ಪ್ರಕಾರ, ಫಲಾನುಭವಿಗಳು ಬೇರೆ ಯಾವುದೇ ಸರ್ಕಾರಿ ನೆರವಿನ ಆರೋಗ್ಯ ಯೋಜನೆಯಡಿ ನೋಂದಾಯಿಸಬಾರದು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಆದ್ದರಿಂದ ಯಶಸ್ವಿನಿ ಯೋಜನೆಯು ಸಹ ಸರ್ಕಾರಿ ನೆರವಿನ ಯೋಜನೆಯಾಗಿರುವುದರಿಂದ, ಅದರ ಫಲಾನುಭವಿಗಳು ABArK ಅಡಿ ಪ್ರಯೋಜನ ಪಡೆಯಲು ಅರ್ಹರಾಗುವುದಿಲ್ಲ ಎಂದು ಹೇಳಿದೆ.
ಯೋಜನೆಯಿಂದ ಫಲಾನುಭವಿಗಳ ಕೈ ಬಿಡಲು ಸೂಚನೆ
ಈ ಹಿನ್ನೆಲೆಯಲ್ಲಿ, ಎರಡು ಯೋಜನೆಗಳಲ್ಲಿನ ಫಲಾನುಭವಿಗಳ ಪುನರಾವರ್ತನೆಯನ್ನು ತಪ್ಪಿಸಲು, ಯಶಸ್ವಿನಿ ಯೋಜನೆಯನ್ನು SAST ಪ್ಲಾಟ್‌ಫಾರ್ಮ್‌ಗೆ ಆನ್‌ಬೋರ್ಡ್ ಮಾಡುವ ಅಥವಾ ಯಶಸ್ವಿನಿ ಫಲಾನುಭವಿಗಳನ್ನು ABArK ಯೋಜನೆಯಿಂದ ತೆಗೆದುಹಾಕುವ ಕ್ರಮ ಕೈಗೊಳ್ಳಲು ಸರ್ಕಾರ ಸೂಚಿಸಿದೆ. ಆದರೆ ಯಶಸ್ವಿನಿ ಯೋಜನೆ ಸಹಕಾರ ಇಲಾಖೆಯಿಂದ ನಿರ್ವಹಿಸಲ್ಪಡುವುದರಿಂದ, ಆ ಯೋಜನೆಯನ್ನು SAST ಪ್ಲಾಟ್‌ಫಾರ್ಮ್‌ಗೆ ಸೇರಿಸಲು ಅವರ ಅನುಮತಿ ಅಗತ್ಯ ಇರುತ್ತದೆ.
ಈ ಕ್ರಮಗಳು ಅಂತಿಮಗೊಳ್ಳುವವರೆಗೆ, ಯಶಸ್ವಿನಿ ಯೋಜನೆಯ ಫಲಾನುಭವಿಗಳಿಗೆ ABArK ಅಡಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವ ಬದಲು, ಯಶಸ್ವಿನಿ ಯೋಜನೆಯಲ್ಲಿಯೇ ಪ್ರಯೋಜನ ಪಡೆಯಲು ಅವಕಾಶ ನೀಡಲು ಸರ್ಕಾರ ನಿರ್ಧರಿಸಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ SAST ರೆಫರಲ್ ನೀಡುವ ಹಂತದಲ್ಲೇ ಹಿಂಬರಹವನ್ನು ನೀಡಲಾಗುವುದು.
ಸರ್ಕಾರಿ ಆಸ್ಪತ್ರೆಗಳು ವ್ಯಾಪಕವಾಗಿ ಲಭ್ಯವಿರುವುದರಿಂದ, ಯಶಸ್ವಿನಿ ಫಲಾನುಭವಿಗಳು ಇವುಗಳಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ಮುಂದುವರಿಯುತ್ತದೆ. ಈ ವೇಳೆ SAST ಎಲ್ಲಾ ಅಂತಹ ಫಲಾನುಭವಿಗಳ ಮಾಹಿತಿಯನ್ನು ಸಹಕಾರ ಇಲಾಖೆಯೊಂದಿಗೆ ಹಂಚಿಕೊಳ್ಳುವುದು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ABArK ದರದಲ್ಲಿ ವೆಚ್ಚವನ್ನು ಮರುಪಾವತಿಸಲು ಕ್ರಮ ಕೈಗೊಳ್ಳಲಾಗುತ್ತದೆ.
ಕಳೆದ ವರ್ಷದಲ್ಲಿ ABArK ಅಡಿಯಲ್ಲಿ ಯಶಸ್ವಿನಿ ಫಲಾನುಭವಿಗಳಿಗೆ ನೀಡಲಾದ ರೂ.130.22 ಕೋಟಿಯ ಚಿಕಿತ್ಸಾ ವೆಚ್ಚವನ್ನು ಸಹಕಾರ ಇಲಾಖೆಯಿಂದ ಆರೋಗ್ಯ ಇಲಾಖೆಗೆ ಮರುಪಾವತಿಸಲು ಕ್ರಮವಹಿಸಲಾಗಿದೆ. ಈ ಹೊಸ ವ್ಯವಸ್ಥೆ ತಕ್ಷಣದಿಂದಲೇ ಜಾರಿಗೆ ತರಲು SAST ಗೆ ಸೂಚನೆ ನೀಡಲಾಗಿದೆ. ಇದರ ಅನುಷ್ಠಾನದಲ್ಲಿ ಯಾವುದೇ ಅಡಚಣೆಗಳು ಎದುರಾದಲ್ಲಿ ತಕ್ಷಣ ಸರ್ಕಾರದ ಗಮನಕ್ಕೆ ತರುವಂತೆ ಸರ್ಕಾರ ಆದೇಶ ಮೂಲಕ ನಿರ್ದೇಶಿಸಿದೆ.
-
ಶಾಲಾ ಮಕ್ಕಳ ಮೊಬೈಲ್ ಬಳಕೆ ನಿರ್ಬಂಧ: 'ಡಿಜಿಟಲ್ ಕರಡು ನೀತಿ' ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರ -
Vastu Tips for Kitchen: ವಾಸ್ತು ಪ್ರಕಾರ ಅಡುಗೆ ಮನೆಯಲ್ಲಿ ಇವು ಇರಬಾರದು.. ಒಮ್ಮೆ ನೋಡಿ! -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ












Click it and Unblock the Notifications