• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೇ 31, ಭಾನುವಾರ ಕರ್ಫ್ಯೂ ಇರುವುದಿಲ್ಲ: ಸರ್ಕಾರದಿಂದ ಮಹತ್ವದ ನಿರ್ಧಾರ!

|

ಬೆಂಗಳೂರು, ಮೇ 30: ಮಹಾಮಾರಿ ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ದೇಶದಾದ್ಯಂತ ಲಾಕ್ ಡೌನ್ ಜಾರಿಯಲ್ಲಿದೆ. ಮೇ 31 ರವರೆಗೂ ನಾಲ್ಕನೇ ಹಂತದ ಲಾಕ್ ಡೌನ್ ಚಾಲ್ತಿಯಲ್ಲಿರಲಿದೆ.

   ಸದ್ಯದಲ್ಲೇ ಭಾರತದಲ್ಲಿ ತಯಾರಾಗಿದೆ ಕೋವಿಡ್ ಲಸಿಕೆ | Oneindia Kannada

   ಲಾಕ್ ಡೌನ್ 4.0 ಅನ್ವಯ ಕರ್ನಾಟಕದಲ್ಲಿ ಕೆಲವು ನಿಯಮಗಳು ಸಡಿಲಗೊಂಡಿದ್ದು, ಭಾನುವಾರ ಮಾತ್ರ ಕಂಪ್ಲೀಟ್ ಲಾಕ್ ಡೌನ್ ಇರಲಿದೆ ಎಂದು ಈ ಹಿಂದೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದರು. ಅದರಂತೆ ಕಳೆದ ವಾರ ಸಂಡೆ ಕರ್ಫ್ಯೂ ವಿಧಿಸಲಾಗಿತ್ತು.

   ರಾಜ್ಯ ಸರ್ಕಾರದ ಆದೇಶದ ಅನ್ವಯ ಮೇ 31 ರವರೆಗೆ ಪ್ರತಿ ಭಾನುವಾರ ಕರ್ನಾಟಕ ಸಂಪೂರ್ಣ ಲಾಕ್ ಡೌನ್ ಆಗಬೇಕಿತ್ತು. ಆದರೆ, ಮೇ 31 ರಂದು (ಭಾನುವಾರ) ಕರ್ನಾಟಕದಲ್ಲಿ ಕಂಪ್ಲೀಟ್ ಲಾಕ್ ಡೌನ್ ಅಥವಾ ಕರ್ಫ್ಯೂ ಇರುವುದಿಲ್ಲ.

   ಕರ್ನಾಟಕದಲ್ಲಿ ಭಾನುವಾರ ಕರ್ಫ್ಯೂ: ಯಾವುದು ಓಪನ್? ಯಾವುದು ಬಂದ್? ಇಲ್ಲಿದೆ ಲಿಸ್ಟ್

   ನಾಲ್ಕನೇ ಹಂತದ ಲಾಕ್ ಡೌನ್ ಮೇ 31 ರಂದು ಕೊನೆಗೊಳ್ಳಲಿದ್ದು, ಭಾನುವಾರ ಕರ್ಫ್ಯೂ ಇರುವುದಿಲ್ಲ ಎಂದು ರಾಜ್ಯ ಸರ್ಕಾರ ತಿಳಿಸಿದೆ.

   ಸಂಡೆ ಕರ್ಫ್ಯೂ ತೆರವು

   ಸಂಡೆ ಕರ್ಫ್ಯೂ ತೆರವು

   ಸಾರ್ವಜನಿಕರ ಬೇಡಿಕೆ ಮೇರೆಗೆ ಹಾಗೂ ರಾಜ್ಯದ ಜನತೆಯ ಹಿತದೃಷ್ಟಿಯಿಂದ ಭಾನುವಾರದಂದು ಕರ್ಫ್ಯೂ ಇರುವುದಿಲ್ಲ. ಭಾನುವಾರದಂದು ವಿಧಿಸಲಾಗುವ ಕರ್ಪ್ಯೂವನ್ನು ತೆರವುಗೊಳಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ಕೊಟ್ಟಿದ್ದಾರೆ. ಹೀಗಾಗಿ, ಮೇ 31 ಭಾನುವಾರ ಎಂದಿನಂತೆ ಎಲ್ಲಾ ಅಂಗಡಿಗಳು ಓಪನ್ ಇರುತ್ತವೆ. ದೈನಂದಿನ ಚಟುವಟಿಕೆ ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆ ಎಂದು ಸಿಎಂ ಸಚಿವಾಲಯದಿಂದ ಮಾಹಿತಿ ಹೊರಬಿದ್ದಿದೆ.

   ಸಾರಿಗೆ ಸೇವೆ ಲಭ್ಯ

   ಸಾರಿಗೆ ಸೇವೆ ಲಭ್ಯ

   ರಾಜ್ಯದಲ್ಲಿ 'ಸಂಡೆ ಕರ್ಫ್ಯೂ'ಗೆ ಬ್ರೇಕ್ ಬಿದ್ದಿರುವುದರಿಂದ ಸಾರಿಗೆ ಸೇವೆ ಕೂಡ ಲಭ್ಯವಿರಲಿದೆ. ಕೆ.ಎಸ್.ಆರ್.ಟಿ.ಸಿ, ಬಿ.ಎಂ.ಟಿ.ಸಿ ಬಸ್ ಗಳು ಭಾನುವಾರ ಸಂಚಾರ ನಡೆಸಲಿದೆ. ಜೊತೆಗೆ ಆಟೋ, ಟ್ಯಾಕ್ಸಿ, ಕ್ಯಾಬ್ ಸೇವೆ ಕೂಡ ಇರಲಿದೆ.

   ಮದ್ಯದಂಗಡಿಗಳು ತೆರೆಯಲಿವೆ

   ಮದ್ಯದಂಗಡಿಗಳು ತೆರೆಯಲಿವೆ

   ಕರ್ನಾಟಕದಲ್ಲಿ 'ಸಂಡೆ ಕರ್ಫ್ಯೂ' ತೆಗೆದುಹಾಕಿರುವುದರಿಂದ ಮದ್ಯದಂಗಡಿಗಳು ಓಪನ್ ಆಗಿರಲಿವೆ. ಜೊತೆಗೆ ಬ್ಯೂಟಿ ಪಾರ್ಲರ್, ಸಲೂನ್, ಬಟ್ಟೆ ಅಂಗಡಿ, ಮಾಂಸದಂಗಡಿಗಳು ಸೇರಿದಂತೆ ಎಲ್ಲಾ ಅಂಗಡಿಗಳು ಕೂಡ ತೆರೆಯಲಿವೆ.

   ಭಾನುವಾರ ಏನಿರುವುದಿಲ್ಲ.?

   ಭಾನುವಾರ ಏನಿರುವುದಿಲ್ಲ.?

   ಲಾಕ್ ಡೌನ್ ನಿಯಮಗಳ ಅನ್ವಯ, ಭಾನುವಾರ ಶಾಪಿಂಗ್ ಮಾಲ್, ಜಿಮ್, ಥಿಯೇಟರ್ ಗಳು ಓಪನ್ ಇರುವುದಿಲ್ಲ.

   ಮಾಸ್ಕ್ ಕಡ್ಡಾಯವಾಗಿ ಧರಿಸಿ

   ಮಾಸ್ಕ್ ಕಡ್ಡಾಯವಾಗಿ ಧರಿಸಿ

   'ಭಾನುವಾರ ಕರ್ಫ್ಯೂ' ಇಲ್ಲದಿರುವುದರಿಂದ ಸಾರ್ವಜನಿಕರು ಎಂದಿನಂತೆ ವ್ಯಾಪಾರ-ವಹಿವಾಟು ನಡೆಸಬಹುದಾಗಿದೆ. ಆದರೆ, ಹೊರಗೆ ಹೊರಟಾಗ ಮುಖಕ್ಕೆ ಮಾಸ್ಕ್ ಕಡ್ಡಾಯವಾಗಿ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಆರೋಗ್ಯಕ್ಕೆ ಉತ್ತಮ.

   English summary
   Karnataka Government Cancels Sunday Lockdown.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X