Get Updates
Get notified of breaking news, exclusive insights, and must-see stories!

ರಾಜ್ಯಪಾಲ ಹುದ್ದೆ ರಾಜಕೀಯ ಹುದ್ದೆ ಅಲ್ಲ: ರಾಜಾರಾಂ ತಲ್ಲೂರು ಬರಹ

ವಿವಿಧ ರಾಜ್ಯಗಳಲ್ಲಿ ರಾಜ್ಯಪಾಲರ ಅಧಿಕಾರ - ನಿರ್ಧಾರಗಳು ಭಾರೀ ಚರ್ಚೆ ಹಾಗೂ ವಿವಾದಗಳಿಗೆ ಕಾರಣವಾಗಿದೆ. ಕೇರಳ, ಪಶ್ಚಿಮ ಬಂಗಾಳ ಹಾಗೂ ತಮಿಳುನಾಡಿನಲ್ಲಿ ರಾಜ್ಯಪಾಲರ ನಿರ್ಧಾರದ ವಿಚಾರವಾಗಿ ರಾಜಕೀಯ ವಾಕ್ಸಮರವೇ ನಡೆದಿದೆ. ಇದೀಗ ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರ ನಿರ್ಧಾರವೂ ಸಹ ಪರ - ವಿರೋಧ ಚರ್ಚೆಗೆ ಕಾರಣವಾಗಿದೆ. ರಾಜ್ಯಪಾಲ ಹುದ್ದೆ ರಾಜಕೀಯ ಹುದ್ದೆ ಅಲ್ಲ: ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರ ಬರಹ ಇಲ್ಲಿದೆ.

ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಸರ್ಕಾರದ ಅಧಿಕೃತ ಮುಖ್ಯಸ್ಥರಾಗಿರುವ ಮತ್ತು ತನ್ನ ಸೀಲು-ಸಹಿಯಡಿಯಲ್ಲೇ ರಾಜ್ಯದ ಆಡಳಿತಾತ್ಮಕ ನಿರ್ಧಾರಗಳಿಗೆ ಒಪ್ಪಿಗೆಯ ಮುದ್ರೆಯೊತ್ತಿ, ಅದನ್ನು ಅಧಿಕೃತಗೊಳಿಸುವ ರಾಜ್ಯಪಾಲರು ತಾವೇ "ಹೋಸ್ಟ್" ಆಗಿ ಕರೆದಿರುವ ವಿಧಾನಮಂಡಲ ಅಧಿವೇಶನದ ಆರಂಭದಲ್ಲಿ (ಅದರಲ್ಲೂ ವಿಧಾನಸಭೆಯ ಆರಂಭಿಕ ಅಧಿವೇಶನ ಮತ್ತು ಪ್ರತೀ ವರ್ಷದ ಆರಂಭಿಕ ಅಧಿವೇಶನಗಳು) ಉಭಯ ಸದನಗಳನ್ನು ಉದ್ದೇಶಿಸಿ ತನ್ನ ಸರ್ಕಾರದ ನೀತಿಗಳನ್ನು ಸದನಕ್ಕೆ ವಿವರಿಸುವುದು ಅವರ ಸಾಂವಿಧಾನಿಕ ಜವಾಬ್ದಾರಿ.

Governor s Post Is Constitutional Not Political Rajaram Tallur Writes

ಸಂವಿಧಾನದ 176(1) ವಿಧಿಯನ್ವಯ, ಅದು ರಾಜ್ಯಪಾಲ ಹುದ್ದೆಯಲ್ಲಿರುವವರು ನಿರಾಕರಿಸಲಾಗದ ಜವಾಬ್ದಾರಿ. ಸಂವಿಧಾನ ಸ್ಪಷ್ಟ ಶಬ್ದಗಳಲ್ಲಿ "Governor SHALL Address" ಎನ್ನುತ್ತದೆ. ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಾಗಿದ್ದು, ಸಂವಿಧಾನದ ಪಾಲನೆಯ ಪ್ರತಿಜ್ಞೆ ಸ್ವೀಕರಿಸಿರುವ ರಾಜ್ಯಪಾಲರು ಸ್ವತಃ ತನ್ನ ಜವಾಬ್ದಾರಿಯನ್ನು ನಿರಾಕರಿಸುವುದು ಸಂವಿಧಾನಕ್ಕೆ ಅಗೌರವ ತೋರಿಸಿದಂತಾಗಬಹುದು.

ರಾಜ್ಯಪಾಲರಿಗೆ ತಾವು ಓದಬೇಕಾಗಿರುವ ಭಾಷಣದಲ್ಲಿ 11 ಪಾರಾಗ್ರಾಫ್‌ಗಳಿಗೆ ಆಕ್ಷೇಪ ಇದೆಯಂತೆ. ಅದರಲ್ಲಿ ಒಕ್ಕೂಟ ಸರ್ಕಾರವು MGNREGA ಕಾಯಿದೆ ಬದಲಾಯಿಸಿ VB GRAM G ಕಾಯಿದೆ ತಂದಿರುವುದು ಸೇರಿದೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ. ಆದರೆ ಅವರ ಈ ಭಾಷಣ, ಅವರ ಸ್ವಂತದ ಭಾಷಣ ಅಲ್ಲ. ಸಾಂವಿಧಾನಿಕವಾಗಿ ಆಯ್ಕೆಯಾದ ಸರ್ಕಾರವೊಂದರ ನಿರ್ಣಯಗಳನ್ನು ಔಪಚಾರಿಕವಾಗಿ ಸದನಕ್ಕೆ ತಿಳಿಸುವ ಪ್ರಕ್ರಿಯೆ. ಇದರಲ್ಲಿ ರಾಜ್ಯಪಾಲರಿಗೆ ವೈಯಕ್ತಿಕವಾದ ಪಾತ್ರ ಏನೂ ಇರುವುದಿಲ್ಲ.

ತಮಿಳುನಾಡಿನಲ್ಲಿ ಮೊನ್ನೆ ಇಂತಹದೇ ಸನ್ನಿವೇಶದಲ್ಲಿ ನಡೆದ ಪ್ರಹಸನದ ಮುಂದುವರಿಕೆಯಾಗಿ ಕರ್ನಾಟಕದಲ್ಲೂ "ಸಾಂವಿಧಾನಿಕ ಬಿಕ್ಕಟ್ಟನ್ನು" ಕೈಯಾರೆ ಸೃಷ್ಟಿಸುವ ಇಂತಹ ತೀರ್ಮಾನಗಳು ದೇಶದ ಸಂವಿಧಾನಕ್ಕೆ ಅಪಾಯಕಾರಿ. ದೇಶದ ಮೇಲೆ ಭಕ್ತಿ, ಸಂವಿಧಾನದ ಮೇಲೆ ಗೌರವ ಇರುವ ಯಾರೂ ಕೂಡ ಇದನ್ನು ಸಮರ್ಥಿಸಬಾರದು. ಇವೆಲ್ಲ ಸಂವಿಧಾನವನ್ನು ತಿರುಚುವ, ಶಿಥಿಲಗೊಳಿಸುವ ಪ್ರಯತ್ನದ ಭಾಗಗಳೇ ಎಂದು ಪರಿಗಣಿತವಾಗಬೇಕು.

ಒಕ್ಕೂಟ ವ್ಯವಸ್ಥೆಯಲ್ಲಿ, ಒಂದು ರಾಜ್ಯ ಸರ್ಕಾರಕ್ಕೆ ಒಕ್ಕೂಟ ಸರ್ಕಾರ ತೆಗೆದುಕೊಂಡಿರುವ ತೀರ್ಮಾನಗಳಲ್ಲಿ ರಾಜ್ಯದ ಹಿತ ಕಡೆಗಣನೆ ಆಗಿದೆ ಎಂದು ಅನ್ನಿಸಿದರೆ ಅದನ್ನು ಸಾಂವಿಧಾನಿಕ ಚೌಕಟ್ಟಿನ ಒಳಗೆ ವಿರೋಧಿಸುವ, ವ್ಯವಸ್ಥೆಯ ಮುಖ್ಯಸ್ಥರಾದ ರಾಜ್ಯಪಾಲರ ಬಾಯಿಯಿಂದ ಅದನ್ನು ಹೇಳಿಸುವ ಹಕ್ಕು ಇದೆ. ರಾಜ್ಯಪಾಲರು ರಾಜ್ಯ ಸರ್ಕಾರದ ಸಾಂವಿಧಾನಿಕ ಮುಖ್ಯಸ್ಥರೇ ಹೊರತು ಭಾರತ ಸರ್ಕಾರದ ಲೋಕಲ್ ಏಜಂಟರಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+