ಕೊನೆಗೂ ಶ್ಯಾಂ ಭಟ್‌ಗೆ ದಕ್ಕಿದ ಕೆಪಿಎಸ್‌ಸಿ ಅಧ್ಯಕ್ಷ ಗಾದಿ

Subscribe to Oneindia Kannada

ಬೆಂಗಳೂರು, ಆಗಸ್ಟ್, 07: ಅಂತಿಮವಾಗಿ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಧ್ಯಕ್ಷರಾಗಿ ಶ್ಯಾಂ ಭಟ್‌ ನೇಮಕವಾಗಿದ್ದಾರೆ. ರಾಜ್ಯಪಾಲ ವಜುಭಾಯಿ ವಾಲಾ ಅವರು ಸರ್ಕಾರದ ಕಡತಕ್ಕೆ ಸಹಿ ಮಾಡಿದ್ದು ಶ್ಯಾಂ ಭಟ್ ಇನ್ನು ಮುಂದೆ ಕೆಪಿಎಸ್‌ಸಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ(ಬಿಡಿಎ) ಆಯುಕ್ತರಾಗಿದ್ದ ಟಿ.ಶ್ಯಾಂ ಭಟ್ ಅವರ ಮೇಲೆ ಅನೇಕ ದೂರುಗಳಿದ್ದವು. ಲೋಕಾಯುಕ್ತಕ್ಕೂ ಸಹ ಶ್ಯಾಂ ಭಟ್ ಅವರ ಮೇಲೆ ದೂರು ದಾಖಲಾಗಿತ್ತು.ಕೆಪಿಎಸ್‌ಸಿಗೆ ಶ್ಯಾಂ ಭಟ್ ನೇಮಕಕ್ಕೆ ತಾತ್ಕಾಲಿಕ ತಡೆ. [ಕೆಪಿಎಸ್ ಸಿಗೆ ಶ್ಯಾಂ ಭಟ್ ನೇಮಕಕ್ಕೆ ತಾತ್ಕಾಲಿಕ ತಡೆ]

Governor Vajubhai Vala approves T Sham Bhat as KPSC chairman

ಶ್ಯಾಂ ಭಟ್ ಅವರ ಮೇಲೆ 18 ಪ್ರಕರಣಗಳಿದ್ದು ಎರಡು ಪ್ರಕರಣಗಳ ವಿಚಾರಣೆ ಅಗತ್ಯವಿದೆ ಎಂದು ಲೋಕಾಯುಕ್ತ ಸಂಸ್ಥೆ ವರದಿ ಸಲ್ಲಿಕೆ ಮಾಡಿತ್ತು. ಈ ಕಾರಣಕ್ಕೆ ಶ್ಯಾಂ ಭಟ್ ಅವರ ನೇಮಕ ತಡೆ ಹಿಡಿಯಲಾಗಿತ್ತು. ಸಾರ್ವಜನಿಕರಿಂದಲೂ ಶ್ಯಾಂ ಭಟ್ ಅವರ ಮೇಲೆ ಆರೋಪಗಳು ಕೇಳಿ ಬಂದಿದ್ದವು.[ಶ್ಯಾಂ ಭಟ್ ಯಾರು?]

ಸರ್ಕಾರ ಕೆಪಿಎಸ್ ಸಿ ಅಧ್ಯಕ್ಷ ಸ್ಥಾನಕ್ಕೆ ಶ್ಯಾಂ ಭಟ್ ಅವರ ಹೆಸರನ್ನು ಶಿಫಾರಸು ಮಾಡಿದ ವೇಳೆ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಆದರೆ ಅಂತಿಮವಾಗಿ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ವ್ಯಕ್ತಿಯೇ ಕೆಪಿಎಸ್ ಸಿ ಅಧ್ಯಕ್ಷರಾಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru: Finally Karnataka Governor Vajubhai Vala clear the way of T Sham Bhat as a chairman of Karnataka Public Service Commission (KPSC). Governor Vajubhai Vala approved Karnataka Government recommendation on 07 Aug,2016.
Please Wait while comments are loading...