ಸರ್ಕಾರಕ್ಕೆ ಮುಖಭಂಗ, ಲೋಕಾಯುಕ್ತ ಕಡತ ಮತ್ತೆ ವಾಪಸ್

Posted By:
Subscribe to Oneindia Kannada

ಬೆಂಗಳೂರು, ಮೇ 27 : ಲೋಕಾಯುಕ್ತ ನೇಮಕದ ವಿಚಾರದಲ್ಲಿ ಕರ್ನಾಟಕ ಸರ್ಕಾರಕ್ಕೆ ಮತ್ತೊಮ್ಮೆ ಮುಖಭಂಗವಾಗಿದೆ. ಲೋಕಾಯುಕ್ತ ಹುದ್ದೆಗೆ ಸರ್ಕಾರ ಶಿಫಾರಸು ಮಾಡಿದ್ದ ನ್ಯಾ.ಎಸ್‌.ಆರ್.ನಾಯಕ್ ಅವರ ಹೆಸರನ್ನು ರಾಜ್ಯಪಾಲರು 2ನೇ ಬಾರಿ ತಿರಸ್ಕರಿಸಿದ್ದಾರೆ.

ನ್ಯಾ.ಭಾಸ್ಕರರಾವ್ ಅವರಿಂದ ತೆರವಾಗಿರುವ ಕರ್ನಾಟಕ ಲೋಕಾಯುಕ್ತ ಹುದ್ದೆಗೆ ಎಸ್.ಆರ್.ನಾಯಕ್ ಅವರನ್ನು ನೇಮಿಸಲು ಸರ್ಕಾರ ನಿರ್ಧರಿಸಿದೆ. ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಈ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಮೇ 3ರಂದು ರಾಜ್ಯಪಾಲರು ಶಿಫಾರಸನ್ನು ವಾಪಸ್ ಕಳಿಸಿದ್ದರು. [ಲೋಕಾಯುಕ್ತರ ನೇಮಕ, ಸರ್ಕಾರಕ್ಕೆ ಹಿನ್ನಡೆ]

vajubhai vala

ಕರ್ನಾಟಕ ಸರ್ಕಾರ ಮತ್ತೊಮ್ಮೆ ಎಸ್.ಆರ್.ನಾಯಕ್ ಅವರ ಹೆಸರನ್ನು ಶಿಫಾರಸು ಮಾಡಿತ್ತು. ಶುಕ್ರವಾರ ರಾಜ್ಯಪಾಲರು 2ನೇ ಬಾರಿಗೆ ನಾಯಕ್ ಅವರ ಹೆಸರನ್ನು ತಿರಸ್ಕಾರ ಮಾಡಿದ್ದು, ಸರ್ಕಾರಕ್ಕೆ ಮುಖಭಂಗವಾಗಿದೆ. [ಲೋಕಾಯುಕ್ತರ ನೇಮಕ ಮತ್ತಷ್ಟು ವಿಳಂಬ]

ಸಿಜೆ ಆಕ್ಷೇಪ ವ್ಯಕ್ತಪಡಿಸಿದ್ದರು : ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಅವರು ಎಸ್‌.ಆರ್.ನಾಯಕ್ ಅವರ ನೇಮಕಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಮಾನವ ಹಕ್ಕು ಆಯೋಗದ ಅಧ್ಯಕ್ಷರಾದ ಮೇಲೆ ಬೇರೆ ಹುದ್ದೆ ನಿರ್ವಹಣೆ ಮಾಡುವಂತಿಲ್ಲ. ಆದ್ದರಿಂದ, ಅವರನ್ನು ನೇಮಕ ಮಾಡಬಾರದು ಎಂದು ಹೇಳಿದ್ದರು. [ನಾಯಕ್ ವಿರುದ್ಧ ಲೋಕಾಯುಕ್ತಕ್ಕೆ ದೂರು]

ಮಾನವ ಹಕ್ಕು ಸಂರಕ್ಷಣಾ ಕಾಯ್ದೆ 1993 ಸಬ್ ಸೆಕ್ಷನ್ 3 ಆಫ್ 24 ಪ್ರಕಾರ ಸರ್ಕಾರಿ ಹುದ್ದೆ ನಿರ್ವಹಣೆ ಮಾಡಿದವರನ್ನು ಪುನಃ ನೇಮಕ ಮಾಡುವಂತಿಲ್ಲ. ಈ ಬಗ್ಗೆ ಸರ್ಕಾರಕ್ಕೂ ಮುಖ್ಯ ನ್ಯಾಯಮೂರ್ತಿಗಳು ಮಾಹಿತಿ ನೀಡಿದ್ದರು. ಮುಖ್ಯ ನ್ಯಾಯಮೂರ್ತಿಗಳ ಈ ಆಕ್ಷೇಪವನ್ನು ಗಂಭೀರವಾಗಿ ಪರಿಗಣನೆ ಮಾಡಿರುವ ರಾಜ್ಯಪಾಲ ವಜುಭಾಯಿ ವಾಲಾ ಅವರು ಸರ್ಕಾರ ಶಿಫಾರಸನ್ನು ತಿರಸ್ಕರಿಸಿರಬಹುದು.

ಉಪ ಲೋಕಾಯುಕ್ತ ವಿಚಾರದಲ್ಲೂ ಹಿನ್ನಡೆ : ಉಪ ಲೋಕಾಯಕ್ತ ಸುಭಾಷ್ ಬಿ.ಅಡಿ ಅವರ ಪದಚ್ಯುತಿ ವಿಚಾರದಲ್ಲಿಯೂ ಸರ್ಕಾರಕ್ಕೆ ಮುಖಭಂಗವಾಗಿದೆ. ಉಪಲೋಕಾಯುಕ್ತರು ಸಜ್ಜನ ಪಕ್ಷಪಾತ ನಡೆಸಿದ್ದಕ್ಕೆ ಯಾವುದೇ ಆಧಾರಗಳಿಲ್ಲ ಎಂದು ನ್ಯಾಯಮೂರ್ತಿ ಆರ್.ಬಿ.ಬೂದಿಹಾಳ್ ಸಮಿತಿ ವರದಿ ನೀಡಿದ್ದು, ಸುಭಾಷ್ ಬಿ.ಅಡಿ ಅವರಿಗೆ ಕ್ಲೀನ್ ಚಿಟ್ ನೀಡಿದೆ. [ಉಪ ಲೋಕಾಯುಕ್ತರು ಆರೋಪ ಮುಕ್ತ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Major embarrassment to the ruling Congress in Karnataka. Governor Vajubhai Vala for the 2 time rejected the government recommendation of S.R. Nayak name for the post of the Karnataka Lokayukta.
Please Wait while comments are loading...