E-Khata: ಇ-ಖಾತಾ ಪ್ರಕ್ರಿಯೆ ಸರಳೀಕರಣ, ಹೊಸ ಸುತ್ತೋಲೆ
ಬೆಂಗಳೂರು, ಮಾರ್ಚ್ 25: ಕರ್ನಾಟಕ ಸರ್ಕಾರ ಆಸ್ತಿಗಳ ಮಾರಾಟ, ಖರೀದಿಗೆ ಇ-ಖಾತಾ ಕಡ್ಡಾಯಗೊಳಿಸಿದೆ. ಈ ವಿಚಾರದಲ್ಲಿ ಆಗುತ್ತಿರುವ ಗೊಂದಲಗಳನ್ನು ತಪ್ಪಿಸಲು ಇ-ಆಸ್ತಿ ತಂತ್ರಾಂಶವನ್ನು ಸರಳೀಕರಣಗೊಳಿಸಿ, ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಆಸ್ತಿ ಕಣಜ ತಂತ್ರಾಂಶದಲ್ಲಿ ಗಣಕೀಕರಣಗೊಂಡ ಆಸ್ತಿಗಳ ವಿವರಗಳನ್ನು ಪರೀಶಿಲನೆಗೆ ಒಳಪಡಿಸಿ, ಇ- ಆಸ್ತಿ ತಂತ್ರಾಶದಲ್ಲಿ ಇಂಡೀಕರಿಸುವ ಕುರಿತು ಹೊಸ ಸುತ್ತೋಲೆಯನ್ನು ಹೊರಡಿಸಲಾಗಿದೆ.
ಈ ಕುರಿತು ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು ಸುತ್ತೋಲೆಯನ್ನು ಹೊರಡಿಸಿದ್ದಾರೆ. ಮಹಾನಗರ ಪಾಲಿಕೆ, ನಗರ ಸಭೆ ಮತ್ತು ಪುರಸಭೆ, ಪಟ್ಟಣ ಪಂಚಾಯಿತಿಗಳು ನೋಡೆಲ್ ಅಧಿಕಾರಿಯನ್ನು ನೇಮಿಸಬೇಕು ಎಂದು ಹೇಳಿದ್ದಾರೆ. ಈ ನೋಡೆಲ್ ಅಧಿಕಾರಿಗಳ ಮೊಬೈಲ್ ಸಂಖ್ಯೆ ಮತ್ತು ವಿಳಾಸ ಜನರಿಗೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ಸುತ್ತೋಲೆಯಲ್ಲಿ ಸೂಚನೆ ನೀಡಲಾಗಿದೆ.

ಸುತ್ತೋಲೆಯು ಇ-ಆಸ್ತಿ ತಂತ್ರಾಂಶವನ್ನು ಸರಳೀಕರಣಗೊಳಿಸಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಆಸ್ತಿ ಕಣಜ ತಂತ್ರಾಂಶದಲ್ಲಿ ಗಣಕೀಕರಣಗೊಂಡ ಆಸ್ತಿಗಳ ವಿವರಗಳನ್ನು ಪರೀಶಿಲನೆಗೆ ಒಳಪಡಿಸಿ, ಇ-ಆಸ್ತಿ ತಂತ್ರಾಶದಲ್ಲಿ ಇಂಡೀಕರಿಸುವ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ ಮತ್ತು ನಿರ್ದೇಶನಾಲಯದ ವಿವಿಧ ಸುತ್ತೋಲೆಗಳನ್ನು ಉಲ್ಲೇಖಿಸಲಾಗಿದೆ.
ಸುತ್ತೋಲೆಯ ವಿವರಗಳು: ಇ-ಆಸ್ತಿ ತಂತ್ರಾಂಶವನ್ನು ಏಪ್ರಿಲ್-2016 ರಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅನುಷ್ಠಾನಗೊಳಿಸಿ ಬಳಕೆಯನ್ನು ಕಡ್ಡಾಯಗೊಳಿಸಲಾಗಿದೆ. ಸರ್ಕಾರವು ಸುತ್ತೋಲೆಗಳ ಮೂಲಕ ಮಹಾನಗರಪಾಲಿಕೆಗಳಲ್ಲಿಯೂ ಇ-ಆಸ್ತಿ ತಂತ್ರಾಂಶದ ಬಳಕೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಹೇಳಿದೆ. ನಗರ ಸ್ಥಳೀಯ ಸಂಸ್ಥೆಗಳು ಇ-ಆಸ್ತಿ ತಂತ್ರಾಂಶದ ಮೂಲಕ ಆಸ್ತಿಗಳ ಡಿಜಿಟಲೀಕರಣ, ಆಸ್ತಿ, ಮಾಲೀಕತ್ವ ಹಕ್ಕು ವರ್ಗಾವಣೆ ಮತ್ತು ಡಿಜಿಟಲ್ ಸಹಿಯುಳ್ಳ ನಮೂನೆ-3/2 ರನ್ನು ಸೃಜಿಸಬಹುದಾಗಿದೆ.
ನಗರ ಸ್ಥಳೀಯ ಸಂಸ್ಥೆಗಳು ವ್ಯಾಪ್ತಿಯಲ್ಲಿರುವ 57 ಲಕ್ಷ ಆಸ್ತಿಗಳಲ್ಲಿ ಇದುವರೆಗೆ 20 ಲಕ್ಷ ಆಸ್ತಿಗಳನ್ನು ಇ-ಆಸ್ತಿ ತಂತ್ರಾಶದಲ್ಲಿ ಡಿಜಿಟೈಸ್ ಮಾಡಿ ಇ-ಆಸ್ತಿ ತಂತ್ರಾಂಶದಲ್ಲಿ ದಾಖಲಿಸಲಾಗಿದೆ ಹಾಗೂ ಸ್ವತ್ತಿನ ಮಾಲೀಕರಿಗೆ ನಮೂನೆ-2/3 ವಿತರಿಸಲಾಗಿರುತ್ತದೆ. ಇ-ಆಸ್ತಿ ತಂತ್ರಾಂಶದ ಮೂಲಕ ಸುಮಾರು 20 ಲಕ್ಷ ಆಸ್ತಿ ಮಾಲೀಕತ್ವ ಹಕ್ಕು ಬದಲಾವಣೆಗೆ ಕ್ರಮವಹಿಸಲಾಗಿರುತ್ತದೆ. ಬಾಕಿ ಉಳಿದಿರುವ 37 ಲಕ್ಷ ಆಸ್ತಿಗಳನ್ನು ಡಿಜಿಟೈಸ್ ಮಾಡಿ, ಇ-ಆಸ್ತಿ ತಂತ್ರಾಂಶದಲ್ಲಿ ದಾಖಲಿಸುವುದು ಬಾಕಿ ಇರುತ್ತದೆ.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಎಲ್ಲಾ ಆಸ್ತಿಗಳ ಆಸ್ತಿ ತೆರಿಗೆ ಬೇಡಿಕೆ, ವಸೂಲಿ ಮತ್ತು ಬಾಕಿ ವಿವರಗಳನ್ನು ನಿರ್ವಹಿಸಲು ನಿಗದಿಪಡಿಸಿರುವ ನಮೂನ ಕೆಎಂಎಫ್-24ರ ವಹಿಯನ್ನು ನಿಗದಿತ ಕಾಲಮಿತಿಯೊಳಗೆ ಆದ್ಯತೆಯ ಮೇರೆಗೆ ಕಾಲೋಚಿತಗೊಳಿಸಲು ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿತ್ತು ಹಾಗೂ ಕಾಲೋಚಿತಗೊಳಿಸಲಾದ ಮಾಹಿತಿಯನ್ನು ಅಗತ್ಯ ದಾಖಲೆಗಳೊಂದಿಗೆ KMDS ಎಂದ ಅಭಿವೃದ್ಧಿ ಪಡಿಸಲಾದ ತಂತ್ರಾಂಶದಲ್ಲಿ ಗಣಕೀಕರಣಗೊಳಿಸಲು ಸೂಚಿಸಲಾಗಿರುತ್ತದೆ. ಸದರಿ ಕಾರ್ಯವು ಪೂರ್ಣಗೊಂಡು ಈಗಾಗಲೇ ತಂತ್ರಾಂಶದಲ್ಲಿ ಗಣಕೀಕರಣಗೊಳಿಸಿ, ಪರಿಶೀಲನೆ ಕಾರ್ಯವನ್ನು ಕೈಗೊಳ್ಳಲಾಗಿರುತ್ತದೆ.
ತಂತ್ರಾಂಶದಲ್ಲಿ ಗಣಕೀಕರಣಗೊಳಿಸಿರುವ ಮಾಹಿತಿಯನ್ನು ಸ್ವತ್ತಿನ ಮಾಲೀಕರು ಮಾಹಿತಿಗೆ ನೀಡಿ, ತಿದ್ದುಪಡಿಗಳಿದ್ದಲ್ಲಿ ಅಗತ್ಯ ದಾಖಲೆಗಳನ್ನು ಪಡೆದು, ಪರಿಶೀಲಿಸಿ ಸೂಕ್ತ ತಿದ್ದುಪಡಿ ಮಾಡುವ ಕಾರ್ಯವನ್ನು ಕೈಗೊಳ್ಳುವಂತೆ ಸೂಚಿಸಲಾಗಿತ್ತು. ಸದರಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಹೆಚ್ಚಿನ ಕಾರ್ಯವಿಧಾನವನ್ನು ಅನುಸರಿಸುವ ಆವಶ್ಯಕತೆ ಇರುವುದನ್ನು ಪರಿಗಣಿಸಿ ದಿನಾಂಕ 24.01.2025ರ ಸುತ್ತೋಲೆಯನ್ನು ಹಿಂಪಡೆದು, ತಂತ್ರಾಂಶದಲ್ಲಿ ಗಣಕೀಕರಣಗೊಳಿಸಿರುವ ಮಾಹಿತಿಯನ್ನು Validate ಮಾಡಿ ಇ-ಆಸ್ತಿ ತಂತ್ರಾಂಶದಲ್ಲಿ ಇಂಡೀಕರಣ ಮಾಡಬೇಕಾಗಿರುತ್ತದೆ ಹಾಗೂ ಪ್ರತಿ ಆಸ್ತಿಗೆ ನಮೂನೆ-2/3 ನ್ನು ಸೃಜಿಸಿ ಆಸ್ತಿಯ ಮಾಲೀಕರಿಗೆ ನೀಡಬೇಕಾಗಿರುತ್ತದೆ.
ಕಾರ್ಯವಿಧಾನಗಳು
* ತಂತ್ರಾಂಶದಲ್ಲಿರುವ ಮಾಹಿತಿಯನ್ನು ಪ್ರಚುರ ಪಡಿಸಲು KMDS ನಿಂದ ಅಗತ್ಯ ಸಿದ್ಧತೆಯನ್ನು ಮಾಡಿಕೊಂಡು ದಿನಾಂಕ 5.02.2025ರ ಒಳಗಾಗಿ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪ್ರಚುರ ಮಾಡಲು ದತ್ತಾಂಶ ಸಿದ್ಧಪಡಿಸುವುದು.
* KMDSನಿಂದ ಪುಚುರ ಪಡಿಸಲು ನೀಡಲಾಗುವ ದತ್ತಾಂಶವನ್ನು ದಿನಾಂಕ 10.02.2025 ರಿಂದ ದಿನಾಂಕ 25.02.2025 ರವರೆಗೆ ಮಹಾನಗರ ಪಾಲಿಕೆ/ ನಗರ ಸ್ಥಳೀಯ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಪ್ರಚುರಪಡಿಸುವುದು ಮತ್ತು ಕಛೇರಿಯಲ್ಲಿ ಮುದ್ರಣ ಪ್ರತಿಯನ್ನು ವಿಕ್ಷೀಸಲು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡುವುದು.
* ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿ, ಪ್ರಚುರ ಪಡಿಸಲಾದ ದತ್ತಾಂಶದ ಕುರಿತು ತಮ್ಮ ಸ್ವತ್ತಿನ ಮಾಹಿತಿಯಲ್ಲಿ ತಿದ್ದುಪಡಿಗಳಿದ್ದಲ್ಲಿ ದಿನಾಂಕ 25.02.2025 ರೊಳಗೆ ಸಂಬಂಧಿಸಿದ ನಗರ ಸ್ಥಳೀಯ ಸಂಸ್ಥೆಯ ಕಛೇರಿಗೆ ಸಲ್ಲಿಸುವಂತೆ ತಿಳಿಸುವುದು. ಈ ಕುರಿತು ಲಭ್ಯವಿರುವ ಮೊಬೈಲ್ ಸಂಖ್ಯೆಗಳಿಗೆ SMS ಮೂಲಕ ಮಾಹಿತಿಯನ್ನು ನೀಡುವುದು.
* ಸದರಿ ಮಾಹಿತಿ ಮನೆ ಮನೆಗೆ ತಲುಪುವಂತೆ ಮಾಡಲು ವ್ಯಾಪಕ ಪ್ರಚಾರ ಕಾರ್ಯವನ್ನು ಕೈಗೊಳ್ಳುವುದು.
*ಪ್ರಚುರಪಡಿಸಲಾದ ದತ್ತಾಂಶದ ಕುರಿತು ಸ್ವೀಕೃತವಾದ ತಿದ್ದುಪಡಿಗಳನ್ನು ಸ್ವೀಕೃತವಾದ 7 ದಿನಗಳ ಒಳಗಾಗಿ ಇತ್ಯರ್ಥ ಪಡಿಸಿ, ತಂತ್ರಾಂಶದಲ್ಲಿ ಕಾಲೋಚಿತಗೊಳಿಸುವುದು.
* ಸದರಿ ಕಾರ್ಯದ ಸಂಬಂಧ ನೋಡಲ್ ಅಧಿಕಾರಿಗಳನ್ನು ನೇಮಿಸುವುದು ಮತ್ತು ಸದರಿರವರ ವಿಳಾಸ ಮತ್ತು ಮೊಬೈಲ್ ಸಂಖ್ಯೆಗಳನ್ನು ಸರ್ವಾಜನಿಕರಿಗೆ ಲಭ್ಯವಾಗುವಂತೆ ಮಾಡುವುದು. ಸಹಾಯವಾಣಿಯನ್ನು ಸ್ಥಾಪನೆ ಮಾಡುವುದು. ಮಹಾನಗರ ಪಾಲಿಕೆ (ಉಪ ಆಯುಕ್ತರು ಕಂದಾಯ), ನಗರಸಭೆ ಮತ್ತು ಪುರಸಭೆ (ಕಂದಾಯ ಅಧಿಕಾರಿ), ಪಟ್ಟಣ ಪಂಚಾಯಿತಿ (ಕಂದಾಯ ನಿರೀಕ್ಷಕರು) ನೋಡೆಲ್ ಅಧಿಕಾರಿ.
* ಸದರಿ ಕಾರ್ಯವನ್ನು ಕೈಗೊಳ್ಳಲು ಸ್ಥಳೀಯ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳನ್ನು ತೊಡಗಿಸಿಕೊಂಡು ದಿನಾಂಕ 1.03.2025 ರ ಒಳಗಾಗಿ ಸಂಪೂರ್ಣ ಮಾಹಿತಿಯನ್ನು ಸಿದ್ಧಪಡಿಸಿ, ಇ-ಆಸ್ತಿ ತಂತ್ರಾಂಶಕ್ಕೆ ಇಂಡೀಕರಣ ಮಾಡಲು ಸಿದ್ಧಪಡಿಕೊಳ್ಳುವುದು.
* ನಗರ ಸ್ಥಳೀಯ ಸಂಸ್ಥೆಯಲ್ಲಿ ಸದರಿ ಪ್ರಕ್ರಿಯೆಯ ಕುರಿತು ಯೋಜನಾ ನಿರ್ದೇಶಕರು ವಾರಕ್ಕೊಮ್ಮೆ ಭೇಟಿ ನೀಡುವುದು. ಸದರಿ ಕಾರ್ಯವು ತ್ವರಿತವಾಗಿ ಮತ್ತು ವ್ಯವಸ್ಥಿತವಾಗಿ ಕೈಗೊಳ್ಳುತ್ತಿರುವ ಬಗ್ಗೆ ಪರಿಶೀಲಿಸಿ, ಅಗತ್ಯ ಮಾರ್ಗದರ್ಶನ ಮಾಡುವುದು, ಸದರಿ ಕಾರ್ಯದಲ್ಲಿ ನಿರ್ಲಕ್ಷ್ಯ ತೋರುವ ಅಥವಾ ವಿಳಂಬಕ್ಕೆ ಕಾರಣರಾಗುವ ಅಧಿಕಾರಿ/ ನೌಕರರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡುವುದು.
* ಪ್ರಚುರ ಪಡಿಸಲು ನಿಗದಿಪಡಿಸಿದ ಅವಧಿಯ ನಂತರ ಸದರಿ ತಂತ್ರಾಶದಲ್ಲಿನ ದತ್ತಾಂಶವನ್ನು ಇ-ಆಸ್ತಿ ಸಂಖ್ಯಾಂಶದಲ್ಲಿ ದಿನಾಂಕ 10.03.2025ರ ಒಳಗೆ ಇಂಡೀಕರಣ ಮಾಡಲು ಕ್ರಮವಹಿಸುವುದು.
ಇ-ಖಾತಾ ವಿತರಣೆಗೆ ಕ್ರಮಗಳು
* ಮಹಾನಗರ ಪಾಲಿಕೆ/ ನಗರ ಸ್ಥಳೀಯ ಸಂಸ್ಥೆಗಳು ನಾಗರೀಕರ ಅನಕೂಲಕ್ಕಾಗಿ ಇ-ಆಸ್ತಿ ತಂತ್ರಾಂಶದಲ್ಲಿ ನಮೂನೆ 2/3 ಅನ್ನು ಸೃಜಿಸಿ ನಾಗರೀಕರಿಗೆ ಒದಗಿಸಲು ಮೇಳಗಳನ್ನು ಆಯೋಜಿಸುವುದು. ವ್ಯವಸ್ಥಿತವಾಗಿ ಮತ್ತು ಸಂಘಟಿತ ರೀತಿಯಲ್ಲಿ ಮೇಳಗಳನ್ನು ನಡೆಸಲು ಕಾರ್ಯವಿಧಾನ ಕೈಗೊಳ್ಳುವುದು.
* ಬೀದಿಗಳನ್ನು, ಅಪಾರ್ಟ್‌ಮೆಂಟ್/ ಲೇಔಟ್ ಅನ್ನು ಗುರುತಿಸುವುದು, ಆ ಭಾಗದಲ್ಲಿನ ಸಕ್ರಿಯ ನಾಗರಿಕ ಗುಂಪುಗಳು ಅಥವಾ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸಕ್ರಿಯ ವ್ಯಕ್ತಿಯ ಸಹಾಯ ಪಡೆಯುವುದು.
* ಪ್ರತಿಯೊಬ್ಬ ನಾಗರಿಕ ತಮ್ಮ ಕರಡು ಇ-ಆಸ್ತಿಯ ಪ್ರತಿಯನ್ನು ನೋಡಬಹುದು ಮತ್ತು ಡೌನ್ ಲೋಡ್ ಮಾಡಬಹುದು ಮತ್ತು PID/PJID ಟಿಪ್ಪಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸುವುದು.
* ಇ-ಆಸ್ತಿ ಬಯಸುವ ಪ್ರತಿಯೊಬ್ಬ ನಾಗರಿಕನು ಸಲ್ಲಿಸಬೇಕಾದ ಮಾಹಿತಿ/ ದಾಖಲೆಗಳ ವಿವರವನ್ನು ತಿಳಿಸುವುದು. ಅಧಿಕೃತ ಸ್ವತ್ತಿನ ಮಾಲೀಕರು ಸಲ್ಲಿಸಬೇಕಾದ ದಾಖಲೆಗಳು ಮತ್ತು ಅನಧಿಕೃತ ಸ್ವತ್ತಾಗಿದ್ದಲ್ಲಿ ಸಲ್ಲಿಸಬೇಕಾದ ದಾಖಲೆಗಳ ಮಾಹಿತಿಯ ವಿವರವನ್ನು ನೀಡುವುದು.
* ಮೇಳದ ದಿನಾಂಕದಂದು, ಸ್ಥಳದಲ್ಲಿ ಸಾಕಷ್ಟು ಸಂಖ್ಯೆಯ ಕಂಪ್ಯೂಟರ್‌ಗಳು, ಪ್ರಿಂಟರ್‌ಗಳು ಮತ್ತು ಇಂಟರ್ನೆಟ್ ವ್ಯವಸ್ಥೆ ಇರುವುದನ್ನು ಖಚಿತಪಡಿಸಿಕೊಳ್ಳುವುದು. ಜನಸಂದಣಿ ಮತ್ತು ಅನಗತ್ಯ ಕಾಯುವಿಕೆಯನ್ನು ತಪ್ಪಿಸಲು 25 ಅರ್ಜಿದಾರರಿಗೆ ಒಂದು ಕಂಪ್ಯೂಟರ್ ಮತ್ತು ಪ್ರಿಂಟರ್, ಖಚಿತಪಡಿಸಿಕೊಳ್ಳಬೇಕು. ಮುಖ್ಯ ಇಂಟರ್‌ನೆಟ್ ವಿಫಲವಾದಲ್ಲಿ ಬ್ಯಾಕ್ ಅಪ್ ಇಂಟರ್‌ನೆಟ್ ಸಂಪರ್ಕವನ್ನು ಹೊಂದಿರುವುದು.
* ಮೂಲಭೂತ ಸೌಕರ್ಯಗಳೊಂದಿಗೆ ಸಾಕಷ್ಟು ಕುಳಿತುಕೊಳ್ಳುವ ಮತ್ತು ಕಾಯುವ ಸ್ಥಳವನ್ನು ಆಯೋಜಿಸುವುದು. ಆಗಮಿಸುವ ನಾಗರೀಕರಿಗೆ ಟೋಕನ್‌ಗಳನ್ನು ನೀಡುವುದು.
* ಸಾರ್ವಜನಿಕರಿಗೆ ಮಾರ್ಗದರ್ಶನ ನೀಡಲು e-khata helpdesk ಅನ್ನು ಸ್ಥಾಪಿಸುವುದು (ಕಂಪ್ಯೂಟರ್ ಕೌಂಟರ್ ಹೊರತುಪಡಿಸಿ) ಪ್ರತಿಯೊಬ್ಬ ನಾಗರೀಕರ ಕರಡು ಆ-ಆಸ್ತಿ ಪ್ರತಿಯ ಪ್ರಿಂಟ್-ಔಟ್ ಅನ್ನು helpdesk ನಲ್ಲಿ ಇಟ್ಟುಕೊಳ್ಳುವುದು,
* ಇಂಡೀಕರಣದ ನಂತರ ನಮೂನೆ-2/3 ನೀಡಲು ಅಗತ್ಯವಿರುವ ದಾಖಲೆಗಳನ್ನು ಸಲ್ಲಿಸಿ ನಿಗದಿಪಡಿಸಿದ ಶುಲ್ಕ ಪಾವತಿಸಿ, ಸ್ವತ್ತಿನ ಮಾಲೀಕರು DOWNLOAD ಮಾಡಿಕೊಳ್ಳಲು ಅವಕಾಶ ಕಲ್ಪಿಸುವುದು.
-
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ












Click it and Unblock the Notifications