Holiday: 'ಕರ್ನಾಟದಲ್ಲಿ ಮಹಾ ಶಿವರಾತ್ರಿ ಮರುದಿನವೂ ಹಿಂದೂ ಉದ್ಯೋಗಿಗಳಿಗೆ ರಜೆ ಕೊಡಿ'
Holiday: ರಂಜನ್ ಮುಗಿಯುವವರೆಗೂ ರಾಜ್ಯದಲ್ಲಿ ಮುಸ್ಲಿಂ ಉದ್ಯೋಗಿಗಳಿಗೆ ಪ್ರತಿ ದಿನ ಒಂದು ಗಂಟೆ ರಿಲೀಫ್ ನೀಡಿ ಎನ್ನುವ ಮನವಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಮನವಿಯನ್ನು ಕೆಪಿಸಿಸಿ ಉಪಾಧ್ಯಕ್ಷ ಹುಸೇನ್ ಅವರು ಸಿಎಂ ಸಿದ್ದರಾಮಯ್ಯ ಅವರ ಬಳಿ ಮಾಡಿಕೊಂಡಿದ್ದರು. ಇದರ ಬೆನ್ನಲ್ಲೇ ಇದೀಗ ಹಿಂದೂ ಮುಖಂಡರಿಂದಲೂ ಕೂಡ ಸರ್ಕಾರಕ್ಕೆ ಮನವಿಯೊಂದನ್ನು ಮಾಡಲಾಗಿದೆ. ಇಲ್ಲಿದೆ ನೋಡಿ ಮಾಹಿತಿ.
ಸಾಮಾನ್ಯವಾಗಿ ಪ್ರಮುಖ ಹಬ್ಬ-ಹರಿದಿನಗಳಂದು ಎಲ್ಲಾ ಸರ್ಕಾರಿ ಉದ್ಯೋಗಿಗಳು ಹಾಗೂ ಖಾಸಗಿ ಕಚೇರಿಯ ಉದ್ಯೋಗಿಗಳಿಗೂ ರಜೆ ನೀಡಲಾಗುತ್ತದೆ. ಆದರೆ, ಇದೀಗ ರಂಜಾನ್ ಮುಗಿಯುವವರೆಗೂ ಪ್ರತಿದಿನ ಮುಸ್ಲಿಂ ಸಮುದಾಯದವರಿಗೆ ಒಂದು ಗಂಟೆ ರಿಲೀಫ್ ನೀಡಿ ಎಂದು ಮನವಿ ಮಾಡಿರುವ ವಿಚಾರ ಭಾರೀ ಚರ್ಚೆ ಹುಟ್ಟುಹಾಕಿದೆ. ಈ ನಡುವೆಯೇ ಹಿಂದೂ ಮುಖಂಡರೂ ಸಹ ಮಹಾಶಿವರಾತ್ರಿ ಹಬ್ಬದ ದಿನ ಜಾಗರಣೆ ಮಾಡಿದ ಹಿನ್ನೆಲೆ ಮರು ದಿನವೂ ರಜೆ ಘೋಷಣೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಇಂದು (ಫೆಬ್ರವರಿ 26) ಮಹಾಶಿವರಾತ್ರಿ ಹಿನ್ನೆಲೆ ದೇಶದ ಬಹುತೇಕ ರಾಜ್ಯಗಳಲ್ಲಿ ಸರ್ಕಾರಿ ಹಾಗೂ ಖಾಸಗಿ ಶಾಲಾ-ಕಾಲೇಜುಗಳು, ಕಚೇರಿಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಆದರೆ ಇದೀಗ ಹಿಂದೂ ಮುಖಂಡರು ಮಹಾಶಿವರಾತ್ರಿಯ ಇಡೀ ರಾತ್ರಿ ಜಾಗರಣೆ ಮಾಡಲಾಗುತ್ತದೆ. ಆದ್ದರಿಂದ ಮರುದಿನವೂ ರಜೆ ನೀಡುವಂತೆ ಸರ್ಕಾರ ಬಳಿ ಮನವಿ ಮಾಡಿದ್ದಾರೆ. ಈ ವಿಚಾರ ಮುನ್ನಲೆಗೆ ಬಂದಿದ್ದೆ ರಂಜಾನ್ ವೇಳೆ ಮುಸ್ಲಿಂ ಸಮುದಾಯದವರಿಗೆ ಒಂದು ಗಂಟೆ ರಿಲೀಫ್ ನೀಡಿ ಎನ್ನುವ ಮನವಿ ಮಾಡಿದಾಗ.
ರಾಜ್ಯದಲ್ಲಿ ಕಳೆದ ಕೆಲವು ತಿಂಗಳುಗಳಿಂದ ತಣ್ಣಗಾಗಿದ್ದ ಧರ್ಮ ದಂಗಲ್ ಇದೀಗ ಮತ್ತೆ ಮುನ್ನಲೆಗೆ ಬಂದಿದೆ. ಕೆಪಿಸಿಸಿ ಉಪಾಧ್ಯಕ್ಷ ಹುಸೇನ್ ಅವರು ಮನವಿಯಿಂದ ಹಿಂದೂ ಸಂಘಟನೆ ಮುಖಂಡರು ಸರ್ಕಾರದ ಮುಂದೆ ಮತ್ತೊಂದು ವಿಭಿನ್ನ ಬೇಡಿಕೆಯೊಂದನ್ನು ಇಟ್ಟಿದ್ದಾರೆ. ರಂಜನ್‌ಗಾಗಿ ಆ ಸಮುದಾಯದ ಉದ್ಯೋಗಿಗಳಿಗೆ ಪ್ರತಿದಿನ ಒಂದು ಗಂಟೆ ಮುಂಚಿತವಾಗಿ ಕಚೇರಿಯಿಂದ ಹೊರಡುವಂತೆ ಅನುಮತಿ ನೀಡಲು ಸಿಎಂ ಸಿದ್ದಾರಾಮ್ಯ ಅವರಿದೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲೆ ಇದೀಗ ಹಿಂದೂ ಸಮುದಾಯದ ಮುಖಂಡರು ಕೂಡ ಬೇಡಿಕೆಯೊಂದನ್ನ ಇಟ್ಟಿದ್ದಾರೆ.
ತೆಲಂಗಾಣ, ಆಂಧ್ರ ಪ್ರದೇಶದಲ್ಲಿ ಸರ್ಕಾರ ಸ್ವಯಂಪ್ರೇರಿತವಾಗಿ ಮುಸ್ಲಿಂ ಸಮುದಾಯದ ಉದ್ಯೋಗಿಗಳಿಗೆ ರಂಜನ್ ಸಮಯದಲ್ಲಿ ಪ್ರತಿನಿತ್ಯ ಒಂದು ಗಂಟೆ ವಿನಾಯಿತಿ ಕೊಟ್ಟಿದೆ. ಅದರಂತೆಯೇ ಕರ್ನಾಟಕದಲ್ಲೂ ಕೂಡ ಈ ಅವಕಾಶ ಮಾಡಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ಹುಸೇನ್ ಹಾಗೂ ಸೈಯದ್ ಅಹಮ್ಮದ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದರು.
ಈ ಸಂಬಂಧ ಆರಂಭದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದ ಹಿಂದೂ ಸಂಘಟನೆಗಳು, ಬಳಿಕ ಅವರದ್ದೇ ದಾರಿಯಲ್ಲಿಯೇ ಹೋಗಿ ಮತ್ತೆ ಸರ್ಕಾರದ ಮುಂದೆ ಹಿಂದೂಗಳಿಗೆ ಹಬ್ಬದ ಸಂದರ್ಭಗಳಲ್ಲಿ ಹೆಚ್ಚುವರಿ ರಜೆ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಮಹಾ ಶಿವರಾತ್ರಿ ಹಬ್ಬದ ವೇಳೆ ಜಾಗರಣೆ ಮಾಡುವ ಹಿನ್ನೆಲೆ ಮರುದಿನ ಕೆಲಸ ಕಾರ್ಯಗಳಲ್ಲಿ ತೊಡಗಲು ಸಮಸ್ಯೆ ಆಗಲಿದೆ. ಜೊತೆಗೆ ಮರುದಿನ ಪೂಜೆ ಕೈಂಕರ್ಯಗಳು ಮುಂದುವರಿಯುತ್ತವೆ. ಆದ್ದರಿಂದ ಶಿವರಾತ್ರಿ ಮರುದಿನವೂ ಹಿಂದೂ ಉದ್ಯೋಗಿಗಳಿಗೆ ರಜೆ ನೀಡಬೇಕೆಂದು. ಶೀಘ್ರದಲ್ಲೇ ಈ ಆದೇಶ ಮಾಡಬೆಂತಲೂ ಮನವಿ ಮಾಡಿಕೊಂಡಿದ್ದಾರೆ.
ಮಹಾ ಶಿವರಾತ್ರಿ, ರಂಜಾನ್ ಹಬ್ಬಗಳ ದಿನದಂದು ಎಲ್ಲಾ ಸಮುದಾಯದ ಉದ್ಯೋಗಿಗಳಿಗೂ, ಸರ್ಕಾರಿ ಹಾಗೂ ಖಾಸಗಿ, ಶಾಲಾ-ಕಾಲೇಜುಗಳು, ಕಚೇರಿಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇಷ್ಟರಾದರೂ ಕೂಡ ಇದೀಗ ಧರ್ಮ ಧಂಗಲ್ ಮುನ್ನಲೆಗೆ ಬಂದಿದೆ.












Click it and Unblock the Notifications