ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರಕಾರಿ ಶಾಲೆಗಳ ಮೇಷ್ಟ್ರಿಗೆ ಸಂಬಳ ಆಗಿಲ್ಲ, ಖಜಾನೆಯಲ್ಲಿ ಹಣವಿಲ್ಲವಾ?

|
Google Oneindia Kannada News

ಬೆಂಗಳೂರು, ಜುಲೈ 10: ಸರಕಾರಿ ಶಾಲೆಗಳ ಮೇಷ್ಟ್ರಿಗೆ ಜೂನ್ ತಿಂಗಳ ಸಂಬಳ ಜುಲೈ ಹತ್ತನೇ ತಾರೀಕು ಬಂದರೂ ಆಗಿಲ್ಲ. ಸಾಮಾನ್ಯವಾಗಿ ಇಷ್ಟು ತಡವಾಗಲ್ಲ. ಈ ಬಾರಿ ಬಿಲ್ ಆಗಿದೆ. ಅದನ್ನು ಆರ್ಥಿಕ ಇಲಾಖೆಗೆ ಕಳುಹಿಸಲಾಗಿದೆ. ಆದರೆ ಈ ವರೆಗೆ ಸಂಬಳ ಆಗಿಲ್ಲ ಅಂದರೆ ಸರಕಾರದ ಖಜಾನೆಯಲ್ಲಿ ಹಣ ಇಲ್ಲ ಎಂಬ ಅನುಮಾನ ಮೂಡುತ್ತದೆ.

ಕೃಷಿ ಸಾಲ ಮನ್ನಾದ ಹೊರೆ ತಗ್ಗಿಸಲು 'ಭಾಗ್ಯ'ಗಳ ಅನುದಾನಕ್ಕೆ ಕತ್ತರಿಕೃಷಿ ಸಾಲ ಮನ್ನಾದ ಹೊರೆ ತಗ್ಗಿಸಲು 'ಭಾಗ್ಯ'ಗಳ ಅನುದಾನಕ್ಕೆ ಕತ್ತರಿ

ಈ ಮಾತನ್ನೇ ರಾಮನಗರ ಜಿಲ್ಲೆಯಲ್ಲಿ ಮೇಷ್ಟ್ರಾಗಿರುವವರೊಬ್ಬರು ಕೂಡ ಹೇಳುತ್ತಾರೆ. ಕಳೆದ ತಿಂಗಳು ಸ್ವಲ್ಪ ತಡವಾಗಿತ್ತು. ಆದರೆ ಈ ತಿಂಗಳು ಇಲ್ಲಿವರೆಗೆ ಸಂಬಳ ಬಂದಿಲ್ಲ. ಬಿಲ್ ಆಗಿ, ಅದು ಆರ್ಥಿಕ ಇಲಾಖೆಗೆ ಕಳಿಸಿದ್ದಾರೆ ಎಂಬ ಮಾಹಿತಿಯೇ ನಮಗೂ ಇದೆ. ಅದಕ್ಕಿಂತ ಹೆಚ್ಚಿನ ಮಾಹಿತಿ ಗೊತ್ತಿಲ್ಲ ಅಂತಾರೆ.

Government school teachers June salary not credited yet

ಇನ್ನು ಕೋಲಾರದಲ್ಲೂ ಇದೇ ಸ್ಥಿತಿ ಇದೆ. ಅಲ್ಲಿನ ನಿವೃತ್ತ ಮೇಷ್ಟರೊಬ್ಬರನ್ನು ಒನ್ಇಂಡಿಯಾ ಕನ್ನಡ ಸೋಮವಾರ ಬೆಳಗ್ಗೆ (ಜುಲೈ ಹತ್ತು) ಮಾತನಾಡಿಸಿದಾಗ, ಹಿಂದೆಲ್ಲ ಎರಡು ತಿಂಗಳಿಗೊಮ್ಮೆ ಸಂಬಳ ಆದ ಉದಾಹರಣೆಗಳಿವೆ. ಆದರೆ ಆ ಸಮಸ್ಯೆ ಎಲ್ಲ ಸರಿಹೋಗಿತ್ತು. ನನ್ನ ಬ್ಯಾಂಕ್ ಖಾತೆಗೆ ಪಿಂಚಣಿ ಜಮೆ ಆದ ಹಾಗಿದೆ. ಆದರೆ ಮೇಷ್ಟರ ಸಂಬಳ ಆಗಿಲ್ಲ ಅನ್ನೋದು ನಿಜ ಎಂಬ ಮಾಹಿತಿ ನೀಡಿದರು.

English summary
Karnataka state government school teachers June salary not credited till July 10th. This leads to question of is government treasury has enough to pay off salary of teachers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X