Government Employees: ಸರ್ಕಾರಿ ನೌಕರರಿಗೆ ಹೊಸ ರೂಲ್ಸ್‌: ಕೇಂದ್ರಸ್ಥಾನದಲ್ಲಿ ವಾಸ ಕಡ್ಡಾಯ, ಆ್ಯಪ್‌ನಲ್ಲಿ ರಾತ್ರಿ ಹಾಜರಾತಿ!

ಸರ್ಕಾರಿ ಅಭಿವೃದ್ಧಿ ಕೆಲಸಗಳು ಹಾಗೂ ಸಾರ್ವಜನಿಕ ಸೇವೆಗಳು ಜನ ಸಾಮಾನ್ಯರಿಗೆ ತಲುಪಬೇಕಾದರೆ ಅಧಿಕಾರಿಗಳು ಮತ್ತು ನೌಕರರು ತಮ್ಮ ಕಾರ್ಯಕ್ಷೇತ್ರ (ಕೇಂದ್ರಸ್ಥಾನ)ದಲ್ಲಿಯೇ ನೆಲೆಸಿರಬೇಕು. ಈ ನಿಟ್ಟಿನಲ್ಲಿ ಸರ್ಕಾರಿ ನೌಕರರು ಕಡ್ಡಾಯವಾಗಿ ನಿಯೋಜಿತ ಕೇಂದ್ರಸ್ಥಾನದಲ್ಲೇ ವಾಸವಿರುವುದನ್ನು ಖಾತ್ರಿಪಡಿಸಿಕೊಳ್ಳಲು ಕರ್ನಾಟಕ ಸರ್ಕಾರ ಈಗ ಜಿಯೋ-ಫೆನ್ಸಿಂಗ್ (Geo-Fencing) ತಂತ್ರಜ್ಞಾನ ಆಧಾರಿತ 'ಕರ್ತವ್ಯ' (Kartavya) ಆ್ಯಪ್ ಮೂಲಕ ರಾತ್ರಿ ವೇಳೆಯ ಹಾಜರಾತಿ ದಾಖಲಿಸುವುದನ್ನು ಕಡ್ಡಾಯಗೊಳಿಸಿ ಮಹತ್ವದ ಆದೇಶ ಹೊರಡಿಸಿದೆ.

Government Employees Must Reside at Headquarters Night Attendance Mandatory Through Kartavya App

​ಆರಂಭಿಕ ಪ್ರಾಯೋಗಿಕ ಅನುಷ್ಠಾನ

ಈ ಸಂಬಂಧ ಮೊದಲ ಹಂತವಾಗಿ, 2026 ನೇ ನವೆಂಬರ್ 01 ರಿಂದ ಜಾರಿಗೆ ಬರುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಾಲ್ಲೂಕು ಆಸ್ಪತ್ರೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ (PHC) ಕರ್ತವ್ಯ ನಿರ್ವಹಿಸುವ ಎಲ್ಲಾ ವೈದ್ಯರಿಗೆ ಈ ರಾತ್ರಿ ಹಾಜರಾತಿಯನ್ನು ಕಡ್ಡಾಯಗೊಳಿಸಲಾಗಿದೆ.

​ಹಾಜರಾತಿ ದಾಖಲಿಸುವ ಸಮಯ ಹಾಗೂ ಜಾಗ

ಪ್ರತಿದಿನ ರಾತ್ರಿ 9.00 ಗಂಟೆಯ ನಂತರ, ವೈದ್ಯರು ತಮ್ಮ ಕೇಂದ್ರಸ್ಥಾನವಿರುವ ನಗರ, ಪಟ್ಟಣ ಅಥವಾ ಗ್ರಾಮದ ಭೌಗೋಳಿಕ ವ್ಯಾಪ್ತಿಯೊಳಗಿದ್ದುಕೊಂಡೇ 'ಕರ್ತವ್ಯ' ಆ್ಯಪ್ ಮೂಲಕ ಹಾಜರಾತಿಯನ್ನು ನಮೂದಿಸಬೇಕು.

​Government Employees: ಯಾರಿಗೆ ವಿನಾಯಿತಿ?

​ಮಂಜೂರಾದ ರಜೆಯಲ್ಲಿರುವ ಅಧಿಕಾರಿ / ಸಿಬ್ಬಂದಿಗಳು ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದು ಕೇಂದ್ರಸ್ಥಾನದಿಂದ ಹೊರಗೆ ಅಧಿಕೃತ ಕರ್ತವ್ಯದಲ್ಲಿರುವ ಅಧಿಕಾರಿ / ಸಿಬ್ಬಂದಿಗಳು ಮತ್ತು ಕೇಂದ್ರಸ್ಥಾನ ಬಿಡಲು ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆದಿರುವ ಅಧಿಕಾರಿ / ಸಿಬ್ಬಂದಿಗಳಿಗೆ ವಿನಾಯಿತಿ ಇರುತ್ತದೆ. ಈ ಸಂಬಂದ ಸದರಿ ರಜೆ ಅಥವಾ ಅನುಮತಿ ಬಗ್ಗೆ ಕಾರಣಗಳನ್ನು ಆ್ಯಪ್‌ನಲ್ಲಿ ಸ್ಪಷ್ಟವಾಗಿ ದಾಖಲಿಸಬೇಕಾಗುತ್ತದೆ.

​ಕಟ್ಟುನಿಟ್ಟಿನ ಮೇಲ್ವಿಚಾರಣೆ ಹಾಗೂ ಕ್ರಮ

ಆಯುಕ್ತರು ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿಗಳು ಪ್ರತಿ ತಿಂಗಳು ರಾತ್ರಿ ಹಾಜರಾತಿ ವರದಿಗಳನ್ನು ಕಡ್ಡಾಯವಾಗಿ ಪರಿಶೀಲಿಸಲಿದ್ದಾರೆ. ಸಕ್ಷಮ ಪ್ರಾಧಿಕಾರದ ಅನುಮತಿಯಿಲ್ಲದೆ ಕೇಂದ್ರಸ್ಥಾನದಲ್ಲಿ ವಾಸವಿರದ ಅಧಿಕಾರಿಗಳ ವಿರುದ್ಧ ನಾಗರಿಕ ಸೇವಾ ನಿಯಮಗಳಡಿ ಕಟ್ಟುನಿಟ್ಟಿನ ಶಿಸ್ತುಕ್ರಮ ಜರುಗಿಸಲಾಗುವುದು.

ಈ ಆದೇಶಕ್ಕೆ ಕಾರಣವೇನು?

ಉಪಲೋಕಾಯುಕ್ತರ ವಿಚಾರಣೆ ವೇಳೆ ಹಲವು ನೌಕರರು ತಮ್ಮ ನಿಯೋಜಿತ ಕೇಂದ್ರಸ್ಥಾನದಲ್ಲಿ ವಾಸವಿರದೆ ದೂರದ ಊರುಗಳಿಂದ ಆಡಳಿತ ನಡೆಸುತ್ತಿದ್ದು, ಇದರಿಂದ ಕರ್ತವ್ಯಕ್ಕೆ ಸರಿಯಾದ ಸಮಯಕ್ಕೆ ಹಾಜರಾಗದೆ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿರುವುದು ಕಂಡುಬಂದಿತ್ತು. ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಸೇವಾ ನಿಯಮಗಳ ಪಾಲನೆಗಾಗಿ ಮಾನ್ಯ ಮುಖ್ಯಮಂತ್ರಿಗಳ ಅನುಮೋದನೆಯೊಂದಿಗೆ ಪ್ರಜಾ ಸೇವಾ ಇಲಾಖೆಯು ಈ ನೂತನ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

​ಮುಂದಿನ ದಿನಗಳಲ್ಲಿ ಈ ಪ್ರಾಯೋಗಿಕ ಯೋಜನೆಯ ಫಲಿತಾಂಶದ ಆಧಾರದ ಮೇಲೆ, ಸರ್ಕಾರದ ಇತರ ಇಲಾಖೆಗಳು ಹಾಗೂ ವೃಂದಗಳ ನೌಕರರಿಗೂ 'ಕರ್ತವ್ಯ' ಆ್ಯಪ್ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ವಿಸ್ತರಿಸಲಾಗುವುದು ಎಂದು ಪ್ರಜಾ ಸೇವೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಆದೇಶ ಹೊರಡಿಸಿದ್ದಾರೆ‌.

ನಾಗರಿಕ ಸೇವೆಗಳನ್ನು ಸುಲಭ ಹಾಗೂ ಪಾರದರ್ಶಕ

ರಾಜ್ಯದಲ್ಲಿ ನಾಗರಿಕರಿಗೆ ತೊಂದರೆಯಿಲ್ಲದೆ, ಸಕಾಲದಲ್ಲಿ ಹಾಗೂ ಪಾರದರ್ಶಕವಾಗಿ ಸರ್ಕಾರಿ ಸೇವೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಎಲ್ಲಾ ಇಲಾಖೆಗಳಿಗೆ ಅನ್ವಯವಾಗುವಂತೆ ಹೊಸ ಪ್ರಮಾಣಿತ ಮಾರ್ಗದರ್ಶಿ ಸೂತ್ರಗಳನ್ನು (Standard Features) ಬಿಡುಗಡೆಗೊಳಿಸಿ ಮಹತ್ವದ ಆದೇಶ ಹೊರಡಿಸಿದೆ.

​ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2ರ (ಕೆಎಆರ್‌ಸಿ-2) ಶಿಫಾರಸುಗಳ ಆಧಾರದ ಮೇಲೆ, ಪ್ರಜಾ ಸೇವಾ ಇಲಾಖೆಯು ಈ ಸಮಗ್ರ ನಿಯಮಾವಳಿಗಳನ್ನು ಸಿದ್ಧಪಡಿಸಿದ್ದು, ಮಾನ್ಯ ಮುಖ್ಯಮಂತ್ರಿಗಳ ಅನುಮೋದನೆಯೊಂದಿಗೆ ಜಾರಿಗೆ ತರಲಾಗಿದೆ.

ಎಲ್ಲಾ ಸೇವೆಗಳು ಆನ್‌ಲೈನ್ ಮತ್ತು ಸಕಾಲ ವ್ಯಾಪ್ತಿಗೆ

​ಸರ್ಕಾರದ ಪರವಾನಗಿ, ಪ್ರಮಾಣಪತ್ರ ಸೇರಿದಂತೆ ಎಲ್ಲಾ ನಾಗರಿಕ ಸೇವೆಗಳನ್ನು ಕಡ್ಡಾಯವಾಗಿ ಆನ್‌ಲೈನ್ ವ್ಯವಸ್ಥೆಗೆ ತರಲಾಗುವುದು ಹಾಗೂ 'ಸಕಾಲ' ವ್ಯಾಪ್ತಿಗೆ ಅಳವಡಿಸಲಾಗುವುದು. ಸೇವೆಗಳ ಕಾಲಮಿತಿಯನ್ನು ಕಡಿತಗೊಳಿಸಲಾಗುತ್ತಿದ್ದು, ಸಾಧ್ಯವಿರುವೆಡೆಯಲ್ಲಿ ಕೌಂಟರ್‌ನಲ್ಲೇ ತಕ್ಷಣವೇ ಪ್ರಮಾಣಪತ್ರ ನೀಡಲು ಕ್ರಮ ಕೈಗೊಳ್ಳಲಾಗುವುದು.

ಆನ್‌ಲೈನ್ ಸೇವೆಗಳಲ್ಲಿ ಪ್ರಮುಖ ಸುಧಾರಣೆಗಳು

ಆಧಾರ್ ಹಾಗೂ ಡಿಜಿಲಾಕರ್ ಬೆಂಬಲ: ಆನ್‌ಲೈನ್ ಸೇವೆಗಳಿಗೆ ಆಧಾರ್/ಮೊಬೈಲ್ ಆಧಾರಿತ ಪರಿಶೀಲನೆ ಬಳಸಲಾಗುವುದು. ವಿತರಿಸಲಾಗುವ ಎಲ್ಲಾ ಪ್ರಮಾಣಪತ್ರಗಳನ್ನು 'ಡಿಜಿಲಾಕರ್'ನಲ್ಲಿ ಸಂಗ್ರಹಿಸಲಾಗುತ್ತದೆ.

​ಆಟೋ-ರಿಫಂಡ್ ಹಾಗೂ ಯುಪಿಐ ಪಾವತಿ: ಅರ್ಜಿ ನಿರಾಕರಣೆಯಾದರೆ (Rejection) ಪಾವತಿಸಿದ ಶುಲ್ಕವನ್ನು ಆಟೋಮ್ಯಾಟಿಕ್ ಆಗಿ ಮರುಪಾವತಿಸಲಾಗುವುದು. ಯುಪಿಐ (UPI) ಸೇರಿದಂತೆ ಡಿಜಿಟಲ್ ಪಾವತಿಗೆ ಆದ್ಯತೆ ನೀಡಿ, ಭೌತಿಕ ಹಣ ಸಂಗ್ರಹಣೆ ತಪ್ಪಿಸಲಾಗುತ್ತದೆ.

ಕನ್ನಡ ಭಾಷೆಗೆ ಆದ್ಯತೆ: ಪ್ರಸ್ತುತ ಇಂಗ್ಲಿಷ್‌ನಲ್ಲಿ ಮಾತ್ರ ಲಭ್ಯವಿರುವ ಎಲ್ಲಾ ನಮೂನೆ ಮತ್ತು ಅರ್ಜಿ ನಮೂನೆಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿಯೂ ಲಭ್ಯಗೊಳಿಸಲಾಗುವುದು.

ಎಸ್‌ಎಂಎಸ್ & ವಾಟ್ಸ್‌ಆ್ಯಪ್ ಮುಖಾಂತರ ಅಪ್‌ಡೇಟ್: ಅರ್ಜಿಯ ಪ್ರಸ್ತುತ ಸ್ಥಿತಿಗತಿಯನ್ನು (Status) ಕಾಲಕಾಲಕ್ಕೆ ಎಸ್‌ಎಂಎಸ್ ಮತ್ತು ವಾಟ್ಸ್‌ಆ್ಯಪ್ ಸಂದೇಶಗಳ ಮೂಲಕ ನಾಗರಿಕರಿಗೆ ತಲುಪಿಸಲಾಗುವುದು.

ಸರ್ಕಾರಿ ಕಚೇರಿಗಳಲ್ಲಿ ಮೂಲಸೌಕರ್ಯ ಹಾಗೂ ಪಾರದರ್ಶಕತೆ

​ಸರ್ಕಾರಿ ಕಚೇರಿಗಳಿಗೆ ಆಗಮಿಸುವ ಸಾರ್ವಜನಿಕರಿಗೆ ಸೂಕ್ತ ಆಸನ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ಸೌಲಭ್ಯ ಒದಗಿಸುವುದು ಕಡ್ಡಾಯ. ಅಧಿಕಾರಿಗಳನ್ನು ಭೇಟಿಯಾಗಲು ಟೋಕನ್ ವ್ಯವಸ್ಥೆ ಹಾಗೂ ವಿಚಾರಣೆಗೆ ಹಾಜರಾಗಬೇಕಿದ್ದಲ್ಲಿ ಮುಂಚಿತವಾಗಿಯೇ ಸಮಯ ನಿಗದಿಪಡಿಸುವ (Time Slot) ಸೌಲಭ್ಯ ನೀಡಲಾಗುತ್ತದೆ.

​ಸ್ಥಳ ತಪಾಸಣೆಗಳನ್ನು (Inspections) ಮೊಬೈಲ್ ಆ್ಯಪ್ ಮೂಲಕವೇ ಪಾರದರ್ಶಕವಾಗಿ ನಡೆಸಲು ನಿರ್ದೇಶಿಸಲಾಗಿದೆ. ಸರ್ಕಾರದ ಈ ನೂತನ ಆದೇಶದಿಂದಾಗಿ ಸಾರ್ವಜನಿಕರು ಲಂಚಗುಳಿತನ, ಕಚೇರಿಗಳಿಗೆ ಅಲೆಯುವುದು ಹಾಗೂ ವಿಳಂಬ ನೀತಿಯಿಂದ ಮುಕ್ತಿ ಪಡೆಯಲಿದ್ದು, ಇಲಾಖೆಗಳು ತಮ್ಮ ಅನುಪಾಲನಾ ವರದಿಯನ್ನು ನಿಯಮಿತವಾಗಿ ಸಲ್ಲಿಸಬೇಕೆಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+