ಪ್ರಹ್ಲಾದ್ ಜೋಶಿ ಜೊತೆ ಇಂದು ಹ್ಯಾಂಗ್ ಔಟ್ ಸಂವಾದ
ಬೆಂಗಳೂರು, ಮಾ. 22 : ತಮ್ಮ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಂತೆ ಬಿಜೆಪಿ ನಾಯಕರು ಸಾಮಾಜಿಕ ತಾಣಗಳ ಮೂಲಕ ಜನರನ್ನು ತಲುಪಲು ಮುಂದಾಗಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ, ಮಾಜಿ ಸಿಎಂಗಳಾದ ಬಿಎಸ್ ಯಡಿಯೂರಪ್ಪ, ಡಿವಿ ಸದಾನಂದ ಗೌಡ 'ಗೂಗಲ್ ಹ್ಯಾಂಗ್ ಔಟ್ ಮೂಲಕ ಜನರೊಂದಿಗೆ ಸಂವಾದ ನಡೆಸಲಿದ್ದಾರೆ.
ಮಾ.22ರ ಶನಿವಾರ ಕರ್ನಾಟಕ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಗೂಗಲ್ ಹ್ಯಾಂಗ್ ಔಟ್ ಮೂಲಕ ರಾಜ್ಯದ ಜನರೊಂದಿಗೆ ಸಂವಾದ ನಡೆಸಲಿದ್ದಾರೆ. ಶನಿವಾರ ಸಂಜೆ 7 ರಿಂದ 8 ಗಂಟೆವರೆಗೆ ಜೋಶಿ ಸಂವಾದ ನಡೆಸಲಿದ್ದು, ಪ್ರಶ್ನೆ ಕೇಳಲು ಇಚ್ಛಿಸುವವರು http://bjpkarnataka.org/with-pralhad-joshi/ ವಿಳಾಸಕ್ಕೆ ಭೇಟಿ ನೀಡಬಹುದಾಗಿದೆ.

ಮಾರ್ಚ್ 24ರಂದು ಮಾಜಿ ಸಿಎಂ ಮತ್ತು ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿವಿ ಸದಾನಂದ ಗೌಡ ಮತ್ತು ಮಾರ್ಚ್ 27ರ ಗುರುವಾರ ಶಿವಮೊಗ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮತ್ತು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಗೂಗಲ್ ಹ್ಯಾಂಗ್ ಔಟ್ ಮೂಲಕ ಜನರ ಜೊತೆ ನೇರವಾಗಿ ಸಂವಾದ ನಡೆಸಲಿದ್ದಾರೆ. ಮಾಹಿತಿಗಾಗಿ http://bjpkarnataka.org/ ಮತ್ತು http://www.youtube.com/user/BjpKarnatakaOfficial ವಿಳಾಸಕ್ಕೆ ಭೇಟಿ ನೀಡಬಹುದಾಗಿದೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಹೆಚ್ಚಾಗಿ ಟ್ವಿಟ್ಟರ್ ನಲ್ಲಿ ಆಕ್ಟಿವ್ ಆಗಿರುವ ರಮ್ಯಾ ಈಗಾಗಲೇ ಗೂಗಲ್ ಪ್ಲಸ್ ನ ಹ್ಯಾಂಗ್ ಔಟ್ ಗೆ ಕರೆತರಲಾಗಿದೆ. ಗುರುವಾರ ಮಧ್ಯಾಹ್ನ ಸಾರ್ವಜನಿಕರ ಜತೆ ನೇರವಾಗಿ ರಮ್ಯಾ ವಿಡಿಯೋ ಸಂವಾದ ನಡೆಸಿದ್ದಾರೆ. [ರಮ್ಯಾ ಜೊತೆ ಹ್ಯಾಂಗ್ ಔಟ್ ಲೈವ್]












Click it and Unblock the Notifications