ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖುಷಿ ಸುದ್ದಿ: ಕರ್ನಾಟಕದಲ್ಲಿ ವಾಡಿಕೆಗಿಂತ ಅಧಿಕ ಮಳೆ ದಾಖಲು

|
Google Oneindia Kannada News

ಬೆಂಗಳೂರು,ಜು.11: ರಾಜ್ಯದಲ್ಲಿ ವಾಡಿಕೆಗಿಂತ ಅಧಿಕ ಮಳೆ ದಾಖಲಾಗಿದೆ. ಅಂದರೆ ಶೇ.26ರಷ್ಟು ಅಧಿಕ ಮಳೆ ಹೆಚ್ಚುವರಿಯಾಗಿ ಸುರಿದಿದೆ. 2022 ಜುಲೈ 10ರವರೆಗೆ ಮಳೆಯ ಪ್ರಮಾಣವನ್ನು ಗಮನಿಸಿದರೆ ಇದು ಅಧಿಕ ಮಳೆಯು ದಾಖಲಾಗಿದೆ. ರಾಜ್ಯದಲ್ಲಿ ಸಾಮಾನ್ಯವಾಗಿ ಜುಲೈ 10ರವರೆಗೆ ಸರಾಸರಿ 276.7 ಮಿಲಿ ಮೀಟರ್‌ ನಷ್ಟು ವಾಡಿಕೆ ಮಳೆ ಸುರಿಯುತ್ತದೆ. ಆದರೆ ಈ ಬಾರಿ ಸರಾಸರಿ 349.4 ಮಿಲಿ ಮೀಟರ್‌ ಮಳೆಯು ಅಧಿಕವಾಗಿ ಸುರಿದಿದೆ.

ಕರ್ನಾಟಕದಲ್ಲಿ ಮಳೆಗೆ ಹೆಸರುವಾಸಿಯಾದ ಶಿವಮೊಗ್ಗ ಜಿಲ್ಲೆಯಲ್ಲಿ ಸರಾಸರಿ ಮಳೆಗಿಂತ ಶೇ. 8ರಷ್ಟು ಅಧಿಕ ಮಳೆ ಸುರಿದಿದೆ. ಕೊಡಗು ಜಿಲ್ಲೆಯಲ್ಲಿ ಸರಾಸರಿಗಿಂತ ಶೇ.10ರಷ್ಟು ಹೆಚ್ಚುವರಿ ಮಳೆಯಾಗಿದೆ. ಹಾಗೇಯೆ ಗದಗದಲ್ಲಿ ಶೇ.9ರಷ್ಟು ಹೆಚ್ಚುವರಿ ಮಳೆಯಾಗಿದೆ. ಇನ್ನೂ ಹಾವೇರಿಯಲ್ಲಿ ಶೇ.5 ರಷ್ಟು ಮತ್ತು ರಾಯಚೂರು ಜಿಲ್ಲೆಯಲ್ಲಿ ಸರಾಸರಿಗಿಂತ ಶೇ.6ರಷ್ಟು ಹೆಚ್ಚುವರಿ ಮಳೆಯಾಗಿದೆ.

Breaking: ಕಲಬುರ್ಗಿ ಜಿಲ್ಲೆಯಲ್ಲಿ ಭಾರಿ ಮಳೆ: ಶಾಲಾ ಕಾಲೇಜುಗಳಿಗೆ ರಜೆBreaking: ಕಲಬುರ್ಗಿ ಜಿಲ್ಲೆಯಲ್ಲಿ ಭಾರಿ ಮಳೆ: ಶಾಲಾ ಕಾಲೇಜುಗಳಿಗೆ ರಜೆ

ಇನ್ನೂ ಮಂಡ್ಯದಲ್ಲಿ ಶೇ.148, ಬೆಂಗಳೂರು ಗ್ರಾಮಾಂತರದಲ್ಲಿ ಶೇ. 165, ಕೋಲಾರದಲ್ಲಿ ಶೇ.127ರಷ್ಟು ಮಳೆಯಾಗಿದೆ. ಬೆಂಗಳೂರು ನಗರದಲ್ಲಿ ಶೇ. 135ರಷ್ಟು, ಚಿಕ್ಕಬಳ್ಳಾಪುರದಲ್ಲಿ ಶೇ. 141ರಷ್ಟು ಮಳೆಯು ಸುರಿದಿದೆ. ಇದು ಈವರೆಗೂ ಸುರಿದ ಮಳೆಯ ಪ್ರಮಾಣಕ್ಕಿಂತ ಎರಡು ಪಟ್ಟು ಹೆಚ್ಚು ಮಳೆಯಾಗಿದೆ.

good news: More than usual rainfall has been recorded in the state

ಕರಾವಳಿ ಪ್ರದೇಶದ ಜಿಲ್ಲೆಗಳಾದ ಉತ್ತರಕನ್ನಡ, ದಕ್ಷಿಣ ಕನ್ನಡದಲ್ಲಿ ವಾಡಿಕೆ ಮಳೆಗಿಂತ ಶೇ. 25ರಷ್ಟು ಹಾಗೂ ಉಡುಪಿ ಜಿಲ್ಲೆಯಲ್ಲಿ ಶೇ. 17ರಷ್ಟು ಅಧಿಕ ಮಳೆಯು ದಾಖಲಾಗಿದೆ. ಇನ್ನೂ ವಲಯವಾರು ನೋಡುವುದಾದರೆ ಈ ಸಾರಿ ದಕ್ಷಿಣ ಒಳನಾಡಿನಲ್ಲಿ ಮಾತ್ರ ಅಧಿಕ ಮಳೆ ಸುರಿದಿದೆ. ಈ ವಲಯದಲ್ಲಿ ಸಾಮಾನ್ಯವಾಗಿ ಜೂನ್‌ ತಿಂಗಳಲ್ಲಿ 65.5 ಮಿಲಿಮೀಟರ್‌ ಸರಾಸರಿ ಮಳೆ ಕಂಡು ಬರುತ್ತದೆ. ಕಳೆದಬಾರಿ ಅಂದರೆ 2021ರ ಜೂನ್‌ನಲ್ಲಿ 76 ಮಿಲಿ ಮೀಟರ್‌ ಮಳೆಯಾಗಿತ್ತು. ಈಗ 2022ರ ಜೂನ್‌ನಲ್ಲಿ ಬರೋಬ್ಬರಿ 120 ಮಿಲಿಮೀಟರ್‌ ಮಳೆಯಾಗಿದೆ.

ಮಂಗಳೂರು; ಗೌರಿ ಹೊಳೆಗೆ ಬಿದ್ದ ಕಾರು, ಯುವಕರು ನಾಪತ್ತೆಮಂಗಳೂರು; ಗೌರಿ ಹೊಳೆಗೆ ಬಿದ್ದ ಕಾರು, ಯುವಕರು ನಾಪತ್ತೆ

ಇನ್ನೂ ಮಲೆನಾಡು, ಉತ್ತರ ಒಳನಾಡು ಹಾಗೂ ಕರಾವಳಿ ಪ್ರದೇಶದಲ್ಲಿ ಜೂನ್‌ ತಿಂಗಳಿಗೆ ಹೋಲಿಸಿದರೆ, ಈ ವರ್ಷದ ಜೂನ್‌ನಲ್ಲಿ ಬಿದ್ದ ಮಳೆಯ ಪ್ರಮಾಣವು ಕಡಿಮೆ ಎಂದು ಅಂಕಿಅಂಶಗಳು ಹೇಳುತ್ತವೆ. ಉತ್ತರ ಒಳನಾಡಿನಲ್ಲಿ ಪ್ರತೀ ವರ್ಷ ಜೂನ್‌ ತಿಂಗಳಲ್ಲಿ 104 ಮಿಲಿ ಮೀಟರ್ ವಾಡಿಕೆ ಮಳೆಯಾಗುತ್ತದೆ. ಈಗ ಜೂನ್‌ನಲ್ಲಿ 91 ಮಿಲಿಮೀಟರ್‌ ಮಾತ್ರ ಮಳೆಯಾಗಿದೆ. ಕಳೆದ ವರ್ಷ ಇದೇ ವೇಳೆ ಇಲ್ಲಿ 132 ಮಿಲಿಮೀಟರ್‌ ಮಳೆಯಾಗಿತ್ತು. ಮಲೆನಾಡು ವಲಯದಲ್ಲಿ ಜೂನ್‌ ತಿಂಗಳಲ್ಲಿ 364 ಮಿಲಿಮೀಟರ್‌ ಸಾಮಾನ್ಯವಾಗಿ ಮಳೆ ಇರುತ್ತದೆ. 2021ರಲ್ಲಿ 300 ಮಿಲಿಮೀಟರ್‌ ಸರಾಸರಿಮಳೆಯಾಗಿದ್ದರೆ 2022ರಲ್ಲಿ ಅದು 190 ಮಿಲಿಮೀಟರ್‌ಗೆ ಇಳಿಕೆಯಾಗಿದೆ ಎಂದು ಅಂಕಿಅಂಶಗಳು ತಿಳಿಸಿವೆ.

good news: More than usual rainfall has been recorded in the state

ಇನ್ನೂ ಕರಾವಳಿ ಭಾಗದಲ್ಲಿ ಜೂನ್‌ ಮಾಸದಲ್ಲಿ832 ಸರಾಸರಿ ಮಳೆ ಕಂಡು ಬರುತ್ತದೆ. ಹಿಂದಿನ ವರ್ಷ ಇಲ್ಲಿ 732 ಮೀ.ಮೀ. ಮಳೆಯಾಗಿತ್ತು. ಆದರೆ ಈ ವರ್ಷ ಬರೀ 534 ಮಿಲಿಮೀಟರ್‌ನಷ್ಟು ಮಳೆಯಾಗಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.

Recommended Video

ಬಿಜೆಪಿ ನಾಯಕನ ಮನೆ ಮುಂದೆ ಇದ್ದ ಚೀಲದಲ್ಲಿ ಇಷ್ಟೊಂದು ದುಡ್ಡು ಎಲ್ಲಿಂದ ಬಂತು? | *Politics | OneIndia Kannada

English summary
More than normal rainfall has been recorded in Karnataka state. That means 26% more rain has fallen. 2022 is the highest rainfall recorded till 10th July.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X