Good News: 6 ತಿಂಗಳ ಬಳಿಕ ಬೆಂಗಳೂರು-ಮಂಗಳೂರು-ಕಾರವಾರ ಕರಾವಳಿ ರೈಲು ಸೇವೆ ಪುನಾರಂಭ

Bengaluru-Coastal Train Service Updates: ರಾಜಧಾನಿ ಬೆಂಗಳೂರು-ಕರಾವಳಿ ರೈಲು ಸಂಪರ್ಕ ಸುಧಾರಣೆಗೆ ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ. ಇದೀಗ ಆರು ತಿಂಗಳ ಹಿಂದೆ ರದ್ದಾಗಿದ್ದ ಬೆಂಗಳೂರು-ಮಂಗಳೂರು-ಕಾರವಾರ ರೈಲು ಸೇವೆ ಪುನಾರಂಭಗೊಳಿಸಲು ನಿರ್ಧರಿಸಲಾಗಿದೆ. ಕರಾವಳಿಗೆ ಸಂಚಾರ ಮಾಡುವ ವಿವಿಧ ರೈಲುಗಳಲ್ಲಿ ಒಂದಾದ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ರೈಲು (16575/16576) ಸೇವೆ ಮತ್ತೆ ಶುರುವಾಗಿದ್ದಕ್ಕೆ ಪ್ರಯಾಣಿಕರು ಹರ್ಷ ವ್ಯಕ್ತಪಡಿಸಿದ್ದಾರೆ.

ಮೊದಲಿನಂತೆ ಬೆಂಗಳೂರಿನ ಯಶವಂತಪುರದಿಂದ ಈ ರೈಲು ಸಂಚಾರ ಸೇವೆ ಆರಂಭಿಸಲಿದೆ. ವಾರದಲ್ಲಿ ಮೂರು ದಿನ ಸೇವೆ ಪಡೆಯಬಹುದಾಗಿದೆ. ಇತ್ತೀಚೆಗೆ ಯಶವಂತಪುರ, ಹಾಸನ, ಸಕಲೇಶಪುರ ಮಾರ್ಗದಲ್ಲಿ ವಿದ್ಯುದೀಕರಣ ಮತ್ತು ಇತರ ಕಾಮಗಾರಿಗಳ ಕಾರಣದಿಂದಾಗಿ ಈ ರೈಲು ಸೇವೆಯನ್ನು ನವೆಂಬರ್‌ವರೆಗೆ ಆರು ತಿಂಗಳ ಕಾಲ ರದ್ದುಗೊಳಿಸಲಾಗಿತ್ತು. ಇದೀಗ ಮತ್ತೆ ಸೇವೆ ಪುನಾರಂಭಿಸುವ ಮೂಲಕ ನೈಋತ್ಯ ರೈಲ್ವೆ ಕರಾವಳಿ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ.

Gommateshwar Express Train Bangalore-Mangalore Coastal Railway Service Resumed After 6 Months

ಪ್ರವಾಸೋದ್ಯಮಕ್ಕೆ ಉತ್ತೇಜನ: ವಿಸ್ಟಾಡೋಮ್ ಕೋಚ್

ಪ್ರವಾಸೋದ್ಯಮಕ್ಕೆ ಉತ್ತೇಜಿಸುವ ಉದ್ದೇಶದಿಂದ ಪ್ರಯಾಣಿಕರು ಪ್ರಕೃತಿ ಸೌಂದರ್ಯ ಸವಿಯಲು ಅನುಕೂಲವಾಗುವಂತೆ ರೈಲ್ವೆ ಇಲಾಖೆ ಈ ಗೊಮ್ಮಟೇಶ್ವರ ರೈಲಿಗೂ ವಿಸ್ಟಾಡೋಮ್ ಕೋಚ್ ಅಳವಡಿಸಿದೆ. ಅಗಲ ಗಾಜಿನ ಕಿಟಿಕಿ, ಬೃಹತ್ ಗಾಜಿನ ಮೇಲ್ಚಾವಣೆ, ವ್ಯವಸ್ಥಿತ ಆಸನಗಳಲಿದ್ದವು. ಇದರಿಂದ ಹಾಸನ, ಸಂಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಮಂಗಳೂರು ಮಾರ್ಗದುದ್ದಕ್ಕೂ ಕಾಣುವ ಪ್ರಕೃತಿಯನ್ನು ಸವಿಯಬಹುದಾಗಿತ್ತು. ಪ್ರವಾಸಿಗರು ಇದನ್ನು ಹೆಚ್ಚಾಗಿ ಇಷ್ಟಪಡುತ್ತಿದ್ದರು. ಆದರೆ ಈ ರೈಲಿನ ರದ್ದತಿಯಿಂದ ಪ್ರಯಾಣಿಕರಿಗೆ ಒಂದಷ್ಟು ನಿರಾಸೆಯಾಗಿತ್ತು.

ಗೊಮ್ಮಟೇಶ್ವರ ರೈಲು ಮಾರ್ಗ, ನಿಲುಗಡೆ ನಿಲ್ದಾಣಗಳು

ಯವಂತಪುರದಿಂದ ಈ ರೈಲು ವಾರದಲ್ಲಿ ರವಿವಾರ, ಮಂಗಳವಾರ ಮತ್ತು ಗುರುವಾರ ಹೀಗೆ ಮೂರು ದಿನ ಪ್ರಯಾಣ ಮಾಡುತ್ತದೆ. ಯಶವಂತಪುರದಿಂದ ಹೊರಟು ಚಿಕ್ಕಬಾಣಾವರ, ಹಾಸನ, ಶ್ರವಣಬೆಳಗೊಳ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕಪುತ್ತೂರು, ಬಂಟವಾಳ ಮೂಲಕ ಮಂಗಳೂರಿಗೆ ಹೋಗುತ್ತದೆ. ರೈಲು ಶ್ರವಣಬೆಳಗೊಳ (ಗೊಮ್ಮಟೇಶ್ವರನಿಗೆ), ಹಾಸನ ಮತ್ತು ಸಕಲೇಶಪುರದಲ್ಲಿ ಹೆಚ್ಚು ಕಾಲ ನಿಲ್ಲುತ್ತದೆ. ಈ ರೈಲನ್ನು ಮುಂದಿನ ಕೆಲವು ನಿಲ್ದಾಣಗಳವರೆಗೆ ವಿಸ್ತರಣೆಗೆ ಕರಾವಳಿ ಜನರು ಆಗ್ರಹಿಸಿದ್ದಾರೆ.

ರೈಲು ಟಿಕೆಟ್ ಬುಕ್ಕಿಂಗ್ ಆರಂಭ

ಗೊಮ್ಮಟೇಶ್ವರ ರೈಲು ಸೇವೆ ಪುನಾರಂಭಗೊಳ್ಳುತ್ತಿದ್ದಂತೆ ಟಿಕೆಟ್ ಬುಕ್ಕಿಂಗ್ ಸಹ ಆರಂಭವಾಗಲಿದೆ. ಪ್ರಯಾಣಕ್ಕೂ ಮುನ್ನ ಪ್ರಯಾಣಿಕರು ರೈಲ್ವೆ ಇಲಾಖೆಯ ಅಧಿಕೃತ ವೆಬ್‌ಸೈಟ್ https://www.indianrail.gov.in ಭೇಟಿ ನೀಡಬೇಕು. ರೈಲಿನ ಸೇವೆ ಬಗ್ಗೆ ಮಾಹಿತಿ, ಟಿಕೆಟ್, ಮಾರ್ಗ ಇತರ ಮಾಹಿತಿಗಾಗಿ ಸಹಾಯವಾಣಿ 139ಕ್ಕೆ ಕರೆ ಮಾಡುವಂತೆ ಕೋರಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+