• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟ್ವಿಟರ್‌ನಲ್ಲಿ ನಿಖಿಲ್ ಕುಮಾರಸ್ವಾಮಿ ವಿರುದ್ಧ GoBack ಅಭಿಯಾನ

|
   Lok Sabha Elections 2019 : ನಿಖಿಲ್ ಕುಮಾರಸ್ವಾಮಿ ವಿರುದ್ಧ ಶುರುವಾಯ್ತು ಟ್ವಿಟ್ಟರ್ ಅಭಿಯಾನ | Oneindia Kannada

   ಬೆಂಗಳೂರು, ಮಾರ್ಚ್ 07 : ನಟ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಮಂಡ್ಯದಿಂದ ಲೋಕಸಭಾ ಚುನಾವಣಾ ಕಣಕ್ಕಿಳಿಯಲು ಬಯಸಿದ್ದಾರೆ. ನಿಖಿಲ್ ಸ್ಪರ್ಧೆ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ.

   ಟ್ವಿಟರ್‌ನಲ್ಲಿ ನಿಖಿಲ್ ಕುಮಾರಸ್ವಾಮಿ ವಿರುದ್ಧ #GoBackNikhil_Kumaraswamy ಅಭಿಯಾನ ಆರಂಂಭವಾಗಿದೆ. ಈ ಹ್ಯಾಷ್ ಟ್ಯಾಗ್ ಬಳಸಿ ಹಲವು ಜನರು ಟ್ವೀಟ್‌ಗಳನ್ನು ಮಾಡಿದ್ದು, ಸುಮಲತಾ ಅಂಬರೀಶ್ ಅವರಿಗೆ ಬೆಂಬಲ ನೀಡಿದ್ದಾರೆ.

   ಬಣ್ಣದವರ ಮಾತಿಗೆ ಮಂಡ್ಯದ ಜನ ಬೆರಗಾಗೋದು ಬೇಡ : ಡಿಸಿ ತಮ್ಮಣ್ಣ

   ಚಿಕ್ಕಮಗಳೂರಿನಲ್ಲಿ ಈ ಅಭಿಯಾನದ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದು, 'ನಿಖಿಲ್ ಕುಮಾರಸ್ವಾಮಿಯವರು ಬರಬೇಕು ಅನ್ನೋರು ಇರ್ತಾರೆ. ಹೋಗ್ಬೇಕು ಅನ್ನೋರು ಇರ್ತಾರೆ. ಇದಕ್ಕೆಲ್ಲ ದೊಡ್ಡ ಮಹತ್ವ ಕೊಡಬೇಕಿಲ್ಲ' ಎಂದು ಹೇಳಿದರು.

   ಸುಮಲತಾ ಮುಂದೆ 4 ಪ್ರಶ್ನೆಗಳಿಟ್ಟ ಅಂಬರೀಶ್ ಅಭಿಮಾನಿಗಳು

   ಮಂಡ್ಯ ಕ್ಷೇತ್ರ ವಿವಿಧ ಕಾರಣಗಳಿಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಗಮನ ಸೆಳೆಯುತ್ತಿದೆ. ಜೆಡಿಎಸ್‌ನಿಂದ ಅಭ್ಯರ್ಥಿಯಾಗಿ ಯಾರು ಕಣಕ್ಕಿಳಿಯಲಿದ್ದಾರೆ? ಎಂಬುದು ಇನ್ನೂ ಖಚಿತವಾಗಿಲ್ಲ. ಜೆಡಿಎಸ್‌ ಅಭ್ಯರ್ಥಿಗೆ ಎದುರಾಳಿಯಾಗಿ ಬಿಜೆಪಿ ಅಭ್ಯರ್ಥಿ ಯಾರು? ಎಂಬುದು ಕುತೂಹಲಕ್ಕೆ ಕಾರಣವಾಗಿದೆ...

   ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ #ShobhaGoBack ಅಭಿಯಾನ

   ಸ್ಥಳೀಯ ನಾಯಕತ್ವದಲ್ಲಿ ಕೊರತೆ ಇಲ್ಲ

   ಸ್ವಾತಂತ್ರ್ಯಪೂರ್ವದಿಂದಲೂ ರಾಷ್ಟ್ರಮಟ್ಟದ ನಾಯಕರನ್ನು ನೀಡಿದ ಜಿಲ್ಲೆಯಿದು. ಇಂತಹ ಹೋರಾಟದ ಭೂಮಿಯಲ್ಲಿ ಸ್ಪರ್ಧಿಸಲು ಸ್ಥಳೀಯ ನಾಯಕತ್ವದಲ್ಲಿ ಕೊರತೆಯಿಲ್ಲ ಎಂದು ಟ್ವೀಟ್ ಮಾಡಲಾಗಿದೆ.

   ಪಕ್ಷಕ್ಕಾಗಿ ದುಡಿದವರು

   ಬಹುತೇಕ ಮಂಡ್ಯ ಜನತೆಯ ಅಭಿಪ್ರಾಯವಿದು. ಪಕ್ಷಕ್ಕಾಗಿ ದುಡಿದವರನ್ನು ಅದ್ಯಾವ ಕಸಾಯಿಖಾನೆಗೆ ಕಳುಹಿಸುತ್ತೀರಿ ಕುಮಾರಣ್ಣ? ಎಂದು ಪ್ರಶ್ನೆ ಮಾಡಲಾಗಿದೆ.

   ಕುಟುಂಬದ ಮತ್ತೊಂದು ಕುಡಿ

   ಮುಖ್ಯಮಂತ್ರಿಗಳೇ ಪ್ರಚಾರ ಕೊಟ್ಟರೂ ಸಿನಿಮಾಗಳು ಫ್ಲಾಪ್ ಆಗುತ್ತಿವೆ. ಈಗ ಒಕ್ಕಲಿಗ ಎಂಬ ಹೆಸರು ಬಳಸಿಕೊಂಡು ಕುಟುಂಬದ ಮತ್ತೊಂದು ಕುಡಿಯನ್ನು ರಾಜಕೀಯಕ್ಕೆ ತರಲು ಹೊರಟಿದ್ದೀರಿ.

   ಸುಮಲತಾ ಅಮ್ಮನಿಗೆ ಬೆಂಬಲ

   #GoBackNikhil_Kumaraswamy ನಾವು ರೆಬಲ್ ಸ್ಟಾರ್ ಪತ್ನಿ ಸುಮಲತಾ ಅಮ್ಮ ಅವರನ್ನು ಬೆಂಬಲಿಸುತ್ತೇವೆ ಎಂದು ಟ್ವೀಟ್ ಮಾಡಲಾಗಿದೆ.

   ಮತ್ತೊಂದು ಫ್ಲಾಪ್ ಚಿತ್ರ ಕೊಡಿ

   ಸ್ಯಾಂಡಲ್‌ವುಡ್‌ಗೆ ವಾಪಸ್ ಹೋಗಿ ಮತ್ತೊಂದು ಫ್ಲಾಪ್ ಚಿತ್ರವನ್ನು ಕೊಡಿ ಎಂದು ಟ್ವೀಟರ್‌ನಲ್ಲಿ ಟೀಕೆ ಮಾಡಲಾಗಿದೆ.

   English summary
   #GoBackNikhil_Kumaraswamy twitter campaign against Karnataka chief minister H.D.Kumaraswamy son Nikhil Kumaraswamy who wish to contest for 2019 Lok Sabha Election form Mandya seat.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X