ಸಿದ್ದರಾಮಯ್ಯ ಅವ್ರೇ, ಪೆಟ್ರೋಲ್ ಮೇಲೆ ವ್ಯಾಟ್ ಇಳಿಕೆ ಮಾಡ್ರಿ

Posted By:
Subscribe to Oneindia Kannada

ಪಣಜಿ ,ಜೂ. 02: ಕೇಂದ್ರ ಸರ್ಕಾರ ಎಂದಿನಂತೆ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಹೆಚ್ಚಿಸಿ ಜನ ಸಾಮಾನ್ಯರ ಮೇಲೆ ಹೊರೆ ಹಾಕಿದೆ. ಆದರೆ, ರಾಜ್ಯ ಸರ್ಕಾರಗಳು ತಮ್ಮ ಜನರ ಕಷ್ಟ ನಷ್ಟಗಳನ್ನು ಗಮನಿಸಿ ಹೆಚ್ಚುವರಿ ತೆರಿಗೆಗಳನ್ನು ಮನ್ನಾ ಮಾಡುವ ಅಧಿಕಾರ ಚಲಾಯಿಸಬಹುದು. ಗೋವಾ ಸರ್ಕಾರ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದು, ಪೆಟ್ರೋಲ್ ಮೇಲಿನ ವೌಲ್ಯವರ್ಧಿತ ತೆರಿಗೆ (ವ್ಯಾಟ್) ಯನ್ನು ಇಳಿಸಿದೆ.[20 ರೂಪಾಯಿಗೆ ಲೀಟರ್ ಪೆಟ್ರೋಲ್ ನೀಡಿ : ಸಿದ್ದರಾಮಯ್ಯ]

ಕೇಂದ್ರ ಸರ್ಕಾರ ಇಂಧನ ಬೆಲೆ ಏರಿಕೆ ಮಾಡಿದ ಮೇಲೆ ಆಯಾ ರಾಜ್ಯಗಳು ತಮ್ಮ ಆರ್ಥಿಕ ಮಾರ್ಗದರ್ಶನಕ್ಕೆ ಅನುಗುಣವಾಗಿ ವ್ಯಾಟ್, ಸೆಸ್ ಸೇರಿಸಬಹುದು. ಹೀಗಾಗಿ ಯಾವಾಗಲೂ ಪೆಟ್ರೋಲ್ ಬೆಲೆ ದೆಹಲಿ ಇನ್ನಿತರ ರಾಜ್ಯಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಅಧಿಕವಾಗಿರುತ್ತದೆ.[ಪೆಟ್ರೋಲ್, ಡೀಸೆಲ್ ಬೆಲೆ 2 ರೂ. ಏರಿಕೆ]

ಗೋವಾ ಮಾಡಿದ್ದೇನು?: ತನ್ನ ಜನರ ಹಿತ ಕಾಯಲು ವೌಲ್ಯವರ್ಧಿತ ತೆರಿಗೆ(ವ್ಯಾಟ್)ಯನ್ನು ಶೇ.20ರಿಂದ ಶೇ.15ಕ್ಕೆ ಇಳಿಸಿದೆ. ಇದರಿಂದಾಗಿ ರಾಜ್ಯದಲ್ಲೀಗ ಪೆಟ್ರೋಲ್ ಬೆಲೆ ಪ್ರತಿ ಲೀ.ಗೆ 59.10 ರೂ.ಆಗಿದೆ. [ಲೀಟರ್ ಪೆಟ್ರೋಲ್ ಗೆ ಎಷ್ಟು ಕೊಡ್ತಾ ಇದೀರಿ? ಈ ಲೆಕ್ಕ ನೋಡಿ]

ಈ ಬಗ್ಗೆ ಪಿಟಿಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ ಗೋವಾ ಸಿಎಂ ಲಕ್ಷ್ಮಿಕಾಂತ್ ಪರ್ಸೆಕರ್ ಅವರು, ಗೋವಾದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀ.ಗೆ 60 ರೂ.ಗಿಂತ ಹೆಚ್ಚಾಗಲು ಅವಕಾಶ ನೀಡುವುದಿಲ್ಲ ಎಂದು ನಾವು ನಮ್ಮ ಮುಂಗಡಪತ್ರದಲ್ಲಿ ಭರವಸೆ ನೀಡಿದ್ದೆವು. ಅದರಂತೆ ನಡೆದುಕೊಳ್ಳುವುದು ನಮ್ಮ ಕರ್ತವ್ಯ ಎಂದಿದ್ದಾರೆ.

Goa Government slashes VAT On Petrol, Diesel, Can Siddaramaiah consider this

ಪೆಟ್ರೋಲ್ ಬೆಲೆ ಮಂಗಳವಾರ ಮಧ್ಯರಾತ್ರಿಯಿಂದ ಪ್ರತಿ ಲೀ.ಗೆ 2.58 ರೂ. ಮತ್ತು ಡೀಸೆಲ್ ಬೆಲೆಯನ್ನು 2.26 ರೂ ಹೆಚ್ಚಳವಾಗಿದೆ. ಬೆಲೆ ಏರಿಕೆ ನಂತರ ಗೋವಾ ರಾಜ್ಯದಲ್ಲಿ ಪೆಟ್ರೋಲ್ ಬೆಲೆಯನ್ನು ಪ್ರತಿ ಲೀ.ಗೆ 62 ರೂ.ಗೆ ನಿಗದಿಗೊಳಿಸಲಾಗಿತ್ತು. ಇದೀಗ ವ್ಯಾಟ್ ಕಡಿತದಿಂದಾಗಿ ರಾಜ್ಯದಲ್ಲಿ ಪ್ರತಿ ಲೀ.ಗೆ 59.10 ರೂ.ಗೆ ಲಭ್ಯವಾಗುತ್ತಿದೆ.[ಪೆಟ್ರೋಲ್, ಡೀಸೆಲ್ ನಂತರ ಎಲ್ ಪಿಜಿ ದರ ಏರಿಕೆ]

2012ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ವ್ಯಾಟ್ ಇಳಿಕೆ ಮಾಡುವ ಮೂಲಕ ಪ್ರತಿ ಲೀಟರ್ ಗೆ 11 ರು ಗಳಷ್ಟು ಪ್ರತಿ ಲೀಟರ್ ಪೆಟ್ರೋಲ್ ಮೇಲೆ ಇಳಿಕೆ ಕಂಡಿದೆ.

ಬೆಂಗಳೂರಿನ ಕಥೆಗೆ ಬರೋಣ: ಬೆಲೆ ಏರಿಕೆ ನಂತರ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ನಂತರ ಬೆಂಗಳೂರಲ್ಲಿ ಲೀಟರ್ ಪೆಟ್ರೋಲ್ ಗೆ 70.40 ರು ನೀಡಬೇಕು. ಡೀಸೆಲ್ ಗೆ 57.74 ರು, ನೀಡಬೇಕಾಗಿದೆ.

ಡಾಲರ್ ಎದುರಿನ ಅಪಮೌಲ್ಯ, ಅಬಕಾರಿ ಸುಂಕ, ಲೀಟರ್ ಗೆ 12.10 ವ್ಯಾಟ್, ಕಂಪನಿಗಳ ಕಮಿಷನ್, ಲಾಭ, ತೆರಿಗೆ, ಸೆಸ್ ಅದು ಇದು ಎಲ್ಲಾ ಲೆಕ್ಕಾಚಾರ ಹಾಕಿ ರಾಜ್ಯದ ಬೊಕ್ಕಸ ತುಂಬಿಸಲು ಎಲ್ಲಾ ಕರ್ನಾಟಕ ಸರ್ಕಾರಗಳು ಹಿಂದಿನಿಂದ ಬಂದಿರುವ ಪದ್ಧತಿಯನ್ನೇ ಅನುಸರಿಸುತ್ತಿವೆ. [ತೈಲ ಬೆಲೆ ನಿರಂತರ ಇಳಿಕೆಗೆ ನಿಜವಾದ ಕಾರಣವೇನು?]

ಈ ಬಗ್ಗೆ ಪ್ರಶ್ನೆ ಮಾಡಿದರೆ, ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಾರೆ. ಕೇಂದ್ರ ಸರ್ಕಾರವನ್ನು ಕೇಳಿದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ವ್ಯತ್ಯಯ, ಇಂಧನ ಆಮದು ವ್ಯವಸ್ಥೆ ವಿವರಣೆ ಸಿಗುತ್ತದೆ.

ಒಟ್ಟಾರೆ, ಕರ್ನಾಟಕದ ಜನ ಸಾಮಾನ್ಯರಿಗೆ ಪೆಟ್ರೋಲ್ ಬೆಲೆ ಇಷ್ಟೇ ಇರಬೇಕು ಎಂದು ನಿರ್ಧರಿಸುವ ಹಕ್ಕು, ಅಧಿಕಾರ, ಸಾಮರ್ಥ್ಯ ಇದ್ದರೂ ಸಿದ್ದರಾಮಯ್ಯ ಸರ್ಕಾರ ಕೈಕಟ್ಟಿ ಕುಳಿತಿದೆ (ಈ ಹಿಂದಿನ ಬಿಜೆಪಿ ಸರ್ಕಾರದ್ದು ಇದೇ ವರಸೆ). ಇಂಧನ ಮೇಲಿನ ವ್ಯಾಟ್, ಸೆಸ್ ಇಳಿಕೆ ಮಾಡಿದರೆ ಗೋವಾದಂತೆ ನಮ್ಮಲ್ಲೂ ಕಡಿಮೆ ಬೆಲೆಗೆ ಪೆಟ್ರೋಲ್ ಸಿಗಲಿದೆ. ಇದಕ್ಕೆಲ್ಲ ಇಚ್ಛಾಶಕ್ತಿ ಕೊರತೆ ಇದೆ. ಮೊದಲಿಗೆ ಗೋವಾದಂತೆ 60 ರು ದಾಟಲು ಬಿಡುವುದಿಲ್ಲ ಎಂಬ ನಿಯಮ ಹಾಕಿಕೊಂಡರೆ ಸಾಧ್ಯ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Goa government said it will reduce VAT on petrol following the increase in its prices. It is a good move by Goa government, when can we expect this from Siddaramaiah led Congress government in Karnataka. We had promised in our budget that we will not allow the petrol prices in Goa to exceed Rs. 60 per litre," Chief Minister Laxmikant Parsekar told news agency PTI.
Please Wait while comments are loading...