ಒಬಾಮಾ, ಜಿನ್‌ಪಿಂಗ್ ಕೈ ಸೇರಿದ ಕರ್ನಾಟಕ ಚರಕ
ಬೆಂಗಳೂರು, ಅ. 2 : ನಮ್ಮ ರಾಜ್ಯದಲ್ಲಿ ತಯಾರಾದ ಚರಕ ಮಾದರಿಗಳು ಅಮೆರಿಕ, ಚೀನಾದ ಅಧ್ಯಕ್ಷರ ಕೋಣೆಗಳ ಸೆಲ್ಫ್ ಗಳ ಮೇಲೆ ಮಿನುಗುತ್ತಿವೆ ಎಂಬ ಸಂಗತಿಯನ್ನು ನೀವು ನಂಬಲೆಬೇಕು.
ಮಹಾತ್ಮ ಗಾಂಧೀಜಿ ತತ್ವ ಆದರ್ಶಗಳಲ್ಲಿ ಒಂದಾದ ಖಾದಿ ಬಟ್ಟೆ ಬಳಕೆ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ಕರ್ನಾಟಕದ ಕಂಪನಿಯೊಂದು ಕಳೆದ ಮೂರು ವರ್ಷಗಳಿಂದ ಸದ್ದಿಲ್ಲದೇ ಮಾಡಿಕೊಂಡು ಬರುತ್ತಿದೆ. ಚರಕದ ಮಾದರಿಗಳನ್ನು ತಯಾರಿಸಲು ಗುಜರಾತಿನ ಸಬರಮತಿ ಆಶ್ರಮದಿಂದ ಅನುಮತಿ ಪಡೆದಿರುವ ಕರ್ನಾಟಕದ ಏಕೈಕ ಸಂಸ್ಥೆ ಸ್ವದೇಶ್ ಎಂಟರ್‌ಪ್ರೈಸಸ್ ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಬರುತ್ತಿದೆ.
ಚರಣ್ ಭಾಸ್ಕರಾಚಾರ್ ಎಂಬುವರು ಮೂರು ವರ್ಷದ ಕೆಳಗೆ ಆರಂಭಿಸಿದ ಸ್ವದೇಶ್ ಎಂಟರ್‌ಪ್ರೈಸಸ್ ಇಂದು 25 ಜನ ಕಾರ್ಮಿಕರನ್ನೊಳಗೊಂಡಿದೆ. ಚಿಕ್ಕಮಗಳೂರು ಜಿಲ್ಲೆಯ ಬಾಣಾವರದಲ್ಲಿ ಘಟಕ ಕಾರ್ಯನಿರತವಾಗಿದೆ. ಇಲ್ಲಿ ತಯಾರಾಗುವ ಚರಕದ ಮಾದರಿಗಳು ದೇಶ-ವಿದೇಶದ ಗಣ್ಯರಿಗೆ ನೆನಪಿನ ಕಾಣಿಕೆಯಾಗಿ ರವಾನೆಯಾಗುತ್ತಿವೆ.[ಸ್ವಚ್ಛ ಭಾರತ ಅಭಿಯಾನಕ್ಕಾಗಿ ಗಾಂಧಿ ಜಯಂತಿ ರಜೆ ಇಲ್ಲ]

ನಮಗೆ ಹೊರದೇಶಗಳಿಂದಲೂ ಬೇಡಿಕೆ ಬರುತ್ತಿದೆ. ಭಾರತದ ಮೂಲದವರು ವಿದೇಶಗಳಿಂದಲೂ ಆರ್ಡರ್ ಕಳುಹಿಸುತ್ತಿದ್ದಾರೆ. ಪೆರುವಿನಿಂದಲೂ ಬೇಡಿಕೆ ಬಂದಿದೆ. ಅಮೆರಿಕದ ಅಧ್ಯಕ್ಷ ಬರಾಕ್ ಒಮಾಮ, ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದ ಕ್ಸಿ ಜಿನ್‌ಪಿಂಗ್ ಅವರಿಗೂ ಸಹ ನಮ್ಮ ಸಂಸ್ಥೆಯಲ್ಲೇ ತಯಾರು ಮಾಡಿದ ಚರಕದ ಮಾದರಿಯನ್ನು ನೆನಪಿನ ಕಾಣಿಕೆಯಾಗಿ ನೀಡಿದ್ದು ಹೆಮ್ಮೆ ತಂದಿದೆ ಎಂದು ಚರಣ್ ಭಾಸ್ಕರಾಚಾರ್ ಹೇಳುತ್ತಾರೆ.
ಸಾಕ್ಷಚಿತ್ರ ನಿರ್ಮಾಣ ಮಾಡಿಕೊಂಡಿದ್ದ ಭದ್ರಾವತಿ ಮೂಲದ ಭಾಸ್ಕರಾಚಾರ್ ಚರಕ ಮಾದರಿ ತಯಾರಿಕೆ ಆರಂಭಿಸಿ ಯಶಸ್ಸು ಸಾಧಿಸಿದ್ದಾರೆ. ಚರಣ್ ತಮ್ಮ ತಂದೆ ಖಾದಿ ಭಾಸ್ಕರಾಚಾರ್ ಅವರಿಂದ ಪ್ರಭಾವಿತರಾಗಿ ಚರಕದ ಮಾದರಿ ತಯಾರಿಕೆಯಂಥ ವಿಶಿಷ್ಟ ಕೆಲಸ ಶುರುವಿಟ್ಟುಕೊಂಡರು.[ಗಾಂಧೀಜಿ ಸ್ವಚ್ಛ ಭಾರತ ಕನಸು ನನಸಾಗಿಸೋಣ: ಮೋದಿ]
ಸಾಕ್ಷಚಿತ್ರಕ್ಕೆ ಸಂಬಂಧಿಸಿ ಭಾಸ್ಕರಾಚಾರ್ ಗೆ ಚರಕವೊಂದರ ಅಗತ್ಯಬಿತ್ತು. ಆದರೆ ಒಂದೇ ಒಂದು ಚರಕ ಮಾದರಿ ತರಲು ಆಚಾರ್ ಪರದಾಡಬೇಕಾಯಿತು. ಇದಾದ ನಂತರ ಸ್ವತಃ ಆಚಾರ್ ಚರಕ ಮಾದರಿ ನಿರ್ಮಾಣಕ್ಕೆ ನಿಂತರು. ಕೆಲ ಸಮಸ್ಯೆಗಳು ಎದುರಾದರೂ ಆಚಾರ್ ಎಲ್ಲವನ್ನೂ ಮೆಟ್ಟಿ ಯಶಸ್ಸು ಸಾಧಿಸಿದರು.
ಈಗ ಪ್ರತಿ ತಿಂಗಳು ಮೂರು ಸಾವಿರಕ್ಕೂ ಅಧಿಕ ಚರಕದ ಮಾದರಿ ತಯಾರು ಮಾಡಲಾಗುತ್ತದೆ. ಚರಕದ ಮಾದರಿಯನ್ನು ನೆನಪಿನ ಕಾಣಿಕೆಯನ್ನಾಗಿ ನೀಡುವುದು ಒಂದು ಪರಂಪರೆ ಮತ್ತು ಪ್ರತಿಷ್ಠೆಯಾಗಿ ಬೆಳೆಯುತ್ತಿದೆ. 500 ರೂ. ನಿಂದ 5 ಸಾವಿರ ರೂ. ವರೆಗೂ ಚರಕದ ಮಾದರಿಗಳು ಲಭ್ಯವಿವೆ ಎಂದು ಆಚಾರ್ ಮಾಹಿತಿ ನೀಡುತ್ತಾರೆ.
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications