ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ, ಬೆಂಗಳೂರು ಒನ್ ಕೇಂದ್ರದಲ್ಲಿ ಎಲ್‌ಎಲ್ಆರ್ ಲಭ್ಯ

|
Google Oneindia Kannada News

ಬೆಂಗಳೂರು, ಜುಲೈ 22 : ಎಲ್‌ಎಲ್‌ಆರ್ ಪಡೆಯಲು ಜನರು ಇನ್ನು ಮುಂದೆ ಆರ್‌ಟಿಓ ಕಚೇರಿಗೆ ಅಲೆಯಬೇಕಾಗಿಲ್ಲ. ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಕೇಂದ್ರದಲ್ಲಿ ಎಲ್‌ಎಲ್‌ಆರ್ ನೀಡುವ ಸೇವೆಯನ್ನು ಆರಂಭಿಸಲಾಗುತ್ತಿದೆ.

ಆರ್‌ಟಿಓ ಕಚೇರಿಯಲ್ಲಿ ಉಂಟಾಗುವ ಜನರ ದಟ್ಟಣೆಯನ್ನು ಕಡಿಮೆ ಮಾಡಲು ಎಲ್‌ಎಲ್‌ಆರ್ ಪಡೆಯುವ ಸೇವೆಯನ್ನು ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಕ್ಕೆ ವರ್ಗಾವಣೆ ಮಾಡಲಾಗುತ್ತಿದೆ. ಆಗಸ್ಟ್‌ನಿಂದ ಈ ಸೇವೆ ಲಭ್ಯವಾಗುವ ನಿರೀಕ್ಷೆ ಇದೆ.

ವಾಹನಗಳಿಗೆ ಫಾಸ್ಟ್‌ಟ್ಯಾಗ್ ಕಡ್ಡಾಯ, ಇಲ್ಲ ದುಪ್ಪಟ್ಟು ಟೋಲ್ ಕಟ್ಟಿವಾಹನಗಳಿಗೆ ಫಾಸ್ಟ್‌ಟ್ಯಾಗ್ ಕಡ್ಡಾಯ, ಇಲ್ಲ ದುಪ್ಪಟ್ಟು ಟೋಲ್ ಕಟ್ಟಿ

ಎಲ್‌ಎಲ್‌ಆರ್‌ಗೆ ಅರ್ಜಿ ಸಲ್ಲಿಕೆ, ಶುಲ್ಕ ಪಾವತಿ, ಆನ್‌ಲೈನ್ ಪರೀಕ್ಷೆ, ಎಲ್‌ಎಲ್‌ಆರ್ ಡೌನ್ ಲೋಡಿಂಗ್ ಸೇವೆಗಳನ್ನು ಬೆಂಗಳೂರು ಒನ್, ಕರ್ನಾಟಕ ಒನ್ ಕಚೇರಿಯಲ್ಲಿ ಆರಂಭಿಸಲಾಗುತ್ತಿದೆ. ಇದರಿಂದಾಗಿ ಜನರು ಹತ್ತಿರದ ಬೆಂಗಳೂರು ಒನ್ ಕೇಂದ್ರದಲ್ಲಿ ಸೇವೆ ಪಡೆದುಕೊಳ್ಳಬಹುದಾಗಿದೆ.

ನೋ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಮೇಯರ್ ಕಾರಿಗೆ ದಂಡನೋ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಮೇಯರ್ ಕಾರಿಗೆ ದಂಡ

Get LLR in Bangalore one and Karnataka one center

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದವರು ಆರ್‌ಟಿಓ ಕಚೇರಿಗಳಲ್ಲಿ ಎಲ್‌ಎಲ್‌ಆರ್ ಶುಲ್ಕ ಪಾವತಿ, ಆನ್‌ಲೈನ್ ಪರೀಕ್ಷೆಗಾಗಿ ಆಗಮಿಸುತ್ತಾರೆ. ಇದರಿಂದಾಗಿ ಜನರ ದಟ್ಟಣೆ ಹೆಚ್ಚುತ್ತಿದೆ. ಸಮಯವು ಸಾಕಷ್ಟು ಹಿಡಿಯುತ್ತಿದೆ.

ಇದು ರಸ್ತೆಯಲ್ಲ ಸ್ವಾಮಿ ಫೂಟ್‌ಪಾತ್ , ಸ್ವಲ್ಪ ಕೆಳಗಿಳೀರಿಇದು ರಸ್ತೆಯಲ್ಲ ಸ್ವಾಮಿ ಫೂಟ್‌ಪಾತ್ , ಸ್ವಲ್ಪ ಕೆಳಗಿಳೀರಿ

ವೈಟ್‌ಬೋರ್ಡ್‌ ವಾಹನಗಳಿಗೆ ಎಲ್‌ಎಲ್‌ಆರ್ ಮಾಡಿಸುವವರು ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರದಲ್ಲಿ ಸೇವಾ ಶುಲ್ಕವನ್ನು ಕಟ್ಟಿ ಆನ್‌ಲೈನ್ ಪರೀಕ್ಷೆ ಬರೆದು ಎಲ್‌ಎಲ್‌ಆರ್ ಪಡೆಯಬಹುದಾಗಿದೆ. ಇದರಿಂದಾಗಿ ಆರ್‌ಟಿಓ ಕಚೇರಿ ಹುಡುಕಿಕೊಂಡು ಅಲೆಯುವುದು ತಪ್ಪಲಿದೆ.

ಬೆಂಗಳೂರು ಒನ್ ಕೇಂದ್ರದಲ್ಲಿ ಈ ಸೇವೆಗಳು ಆರಂಭವಾದರೆ ಜನರ ಸಮಯ ಉಳಿತಾಯವಾಗಲಿದೆ. ಆರ್‌ಟಿಓ ಕಚೇರಿಯಲ್ಲಿ ತಾಸುಗಟ್ಟಲೇ ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪಲಿದೆ. ಸರ್ಕಾರ ನಿಗದಿಪಡಿಸಿದ ಶುಲ್ಕವನ್ನು ಮಾತ್ರ ಕಟ್ಟಿದರೆ ಸಾಕು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

English summary
Soon people will get LLR in Bangalore one and Karnataka one center. Now people visit RTO office to get LLR application, online test.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X