ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್.ಎಸ್.ಎಸ್ ವಿರುದ್ಧ ಮಾತನಾಡಿದ್ದಕ್ಕೆ ಗೌರಿ ಹತ್ಯೆ: ಬಿಜೆಪಿ ಶಾಸಕ ಜೀವರಾಜ್

By Sachhidananda Acharya
|
Google Oneindia Kannada News

ಚಿಕ್ಕಮಗಳೂರು, ಸೆಪ್ಟೆಂಬರ್ 7: "ಆರೆಸ್ಸೆಸ್ ವಿರುದ್ಧ ಮಾತನಾಡಿದ್ದಕ್ಕೆ ಪತ್ರಕರ್ತೆ ಗೌರಿ ಹತ್ಯೆಯಾದರು," ಎಂದು ಶೃಂಗೇರಿಯ ಬಿಜೆಪಿ ಶಾಸಕ ಡಿ.ಎನ್. ಜೀವರಾಜ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಗೌರಿ ಲಂಕೇಶ್ ಹತ್ಯೆಯ ಕಡೆಯ ಕ್ಷಣಗಳು ಹೇಗಿದ್ದವು?ಗೌರಿ ಲಂಕೇಶ್ ಹತ್ಯೆಯ ಕಡೆಯ ಕ್ಷಣಗಳು ಹೇಗಿದ್ದವು?

ಕೊಪ್ಪದಲ್ಲಿ 'ಮಂಗಳೂರು ಚಲೋ'ಗೆ ಜಾಥಾಗೆ ಬುಧವಾರ ಚಾಲನೆ ನೀಡಿದ ಸಂದರ್ಭದಲ್ಲಿ ಅವರು ಈ ಹೇಳಿಕೆ ನೀಡಿದ್ದರು. ಈ ಹೇಳಿಕೆಯೀಗ ವೈರಲ್ ಆಗಿದೆ.

Gauri Lankesh assassinated for talking against RSS : BJP MLA DN Jeevaraj

"ಪತ್ರಿಕೆಯಲ್ಲಿ 'ಚಡ್ಡಿಗಳ ಮಾರಣ ಹೋಮ' ಎಂದು ಬರಿಯದ್ದಿದ್ರೆ ಇವತ್ತು ಗೌರಿ ಲಂಕೇಶ್ ಹತ್ಯೆಯಾಗ್ತಿತ್ತಾ? ಇವತ್ತು ಗೌರಿ ಲಂಕೇಶ್ ಉಳಿಯುತ್ತಿದ್ದರಲ್ಲಾ?," ಎಂದು ಬಹಿರಂಗ ಸಭೆಯಲ್ಲಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಡಿ.ಎನ್. ಜೀವರಾಜ್ ವೀರಾವೇಷದ ಭಾಷಣ ಮಾಡಿದ್ದಾರೆ.

ಗೌರಿ ಲಂಕೇಶ್ ಪ್ರಕರಣ ಸಿಬಿಐಗೆ, ಸಿದ್ದರಾಮಯ್ಯ ಹೇಳುವುದೇನು?ಗೌರಿ ಲಂಕೇಶ್ ಪ್ರಕರಣ ಸಿಬಿಐಗೆ, ಸಿದ್ದರಾಮಯ್ಯ ಹೇಳುವುದೇನು?

ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, "ತಮ್ಮ ಪತ್ರಿಕೆಯಲ್ಲಿ ಗೌರಿ ಅವರು ಸಂಘ ಪರಿವಾರದ ಅವಹೇಳನ ಮಾಡದೇ ಹೋಗಿದ್ದರೆ ಹತ್ಯೆ ಆಗುತ್ತಿರಲಿಲ್ಲ ಎಂದು ಬಿಜೆಪಿ ಶಾಸಕರೇ ಹೇಳಿರುವುದು ಏನು ಸಂದೇಶ ನೀಡುತ್ತದೆ?" ಎಂದು ಪ್ರಶ್ನಿಸಿದ್ದಾರೆ.

ತಮ್ಮ ಹೇಳಿಕೆ ವೈರಲ್ ಆಗುತ್ತಿದ್ದಂತೆ ಸಮಜಾಯಿಷಿ ನೀಡಿರುವ ಜೀವರಾಜ್ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆ, "ಗೌರಿ ಲಂಕೇಶ್ ಹತ್ಯೆಯನ್ನು ನಾನು ಖಂಡಿಸುತ್ತೇನೆ. ಗೌರಿ ಲಂಕೇಶ್ ಮತ್ತು ಸಿದ್ದರಾಮಯ್ಯ ಆಪ್ತರಾಗಿದ್ದರು. ಕಲಬುರ್ಗಿ ಹಂತಕರನ್ನು ಬಂಧಿಸಿದ್ದರೆ ಈ ಅಪರಾಧ ತಡೆಯಬಹುದಾಗಿತ್ತು," ಎಂದು ಹೇಳಿದ್ದಾರೆ.

English summary
Journalist Gauri Lankesh was assassinated for talking against RSS," said Sringeri’s BJP legislator DN Jeevaraj in a open statement here in Koppa on September 7.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X