ವಾರ್ತಾ ಇಲಾಖೆಯಿಂದ ವಿಶುಕುಮಾರ್ ಎತ್ತಂಗಡಿ
ಬೆಂಗಳೂರು, ಜುಲೈ 31: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕರ ಸ್ಥಾನದಿಂದ ಎನ್.ಆರ್ ವಿಶುಕುಮಾರ್ ಗೆ ಗೇಟ್ ಪಾಸ್ ನೀಡಲಾಗಿದೆ. ಅವರ ಸ್ಥಾನಕ್ಕೆ ಈಶಾನ್ಯ ವಲಯ ಡಿಸಿಪಿ ಡಾ.ಪಿ.ಎಸ್ ಹರ್ಷ ರನ್ನು ನೇಮಕ ಮಾಡಲಾಗಿದೆ.
ವಿಶುಕುಮಾರ್ ಅವರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೂತನ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ. ಈ ಹಿಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿಯಾಗಿದ್ದ ಶ್ರೀಮತಿ ಎಂ.ಎಸ್ ಅರ್ಚನಾರನ್ನು ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ನ ಸಿಇಒ ಆಗಿ ನೇಮಕ ಮಾಡಲಾಗಿದೆ.

ಈ ಹಿಂದೆ ಬೆಂಗಳೂರು ನಗರ ಪಂಚಾಯತ್ ಜಿಲ್ಲಾ ಪಂಚಾಯತ್ ಸಿಇಒ ಆಗಿದ್ದ ಮಂಜುಶ್ರೀಯವರನ್ನು ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.












Click it and Unblock the Notifications