ಅಳಿದ ಮೇಲೆಯೂ ಉಳಿಯುವ ಯತ್ನ: ಗಾಲಿ ಜನಾರ್ಧನ ರೆಡ್ಡಿಯೆಂಬ ದುರಂತ ನಾಯಕನ ಕಥಾನಕವಿದು
ಬೆಂಗಳೂರು, ಮೇ 2: ಗಣಿ ಧಣಿ ಎಂದೇ ಖ್ಯಾತಿ ಪಡೆದಿದ್ದ ಗಾಲಿ ಜನಾರ್ಧನ ರೆಡ್ಡಿ ಹೊಸ ಪಕ್ಷವನ್ನು ಸ್ಥಾಪಿಸಿ, ಚುನಾವಣೆ ಗೆಲ್ಲಲು ಹರಸಾಹಸ ಪಡುತ್ತಿದ್ದಾರೆ. ಹಿಂದೊಮ್ಮೆ ಬಿಜೆಪಿ ಸರ್ಕಾರ ರಚನೆಗೆ ಪ್ರಮುಖ ಪಾತ್ರ ವಹಿಸಿದ್ದ ಜನಾರ್ಧನ ರೆಡ್ಡಿ ಕಾಲಕ್ರಮೇಣ ಪ್ರಾಬಲ್ಯ ಕಳೆದುಕೊಂಡರು. ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ವ್ಯಾಪಕ ಚರ್ಚೆಗೀಡಾಗಿದ್ದ ವ್ಯಕ್ತಿ ಈಗ ರಾಜಕೀಯ ಅಸ್ವಿತ್ವ ಕಂಡುಕೊಳ್ಳುವಲ್ಲಿ ಯತ್ನ ನಡೆಸಿರುವುದು ಮಾತ್ರ ದುರಂತವೆಂದೇ ಹೇಳಬಹುದು.
ಸುಷ್ಮಾ ಸ್ವರಾಜ್ ಶಿಷ್ಯರೆಂದೇ ಹೆಸರುವಾಸಿಯಾಗಿದ್ದ ರೆಡ್ಡಿ ಸಹೋದರರು
ಕರ್ನಾಟಕದಲ್ಲಿ ಮೊದಲ ಬಾರಿಗೆ ಸ್ವತಂತ್ರ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದವರಲ್ಲಿ ಜನಾರ್ಧನ ರೆಡ್ಡಿ ಪ್ರಮುಖರು. ಗಾಲಿ ಕುಟುಂಬದ ಮೂವರು ಸಹೋದರರು ದಿವಂಗತ ಸುಷ್ಮಾ ಸ್ವರಾಜ್ ಶಿಷ್ಯರೆಂದೇ ಹೆಸರಾಗಿದ್ದವರು. ಗಣಿ ವ್ಯವಹಾರದ ಮೂಲಕ ಅಪಾರ ಪ್ರಮಾಣದ ಹಣವನ್ನು ಮಾಡಿದವರು. 2004 ವಿಧಾನಸಭೆ ಚುನಾವಣೆಯಲ್ಲಿ ಶಾಸಕರಾದ ರೆಡ್ಡಿ ಅವರು 2006ರ ಬಿಜೆಪಿ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಜನಾರ್ಧನ ರೆಡ್ಡಿ ಹಾಗೂ ಅವರ ಸ್ನೇಹಿತ ಶ್ರೀರಾಮುಲು ಅವರು ಯತ್ನಗಳನ್ನು ಮೆಚ್ಚಿ ಸಮ್ಮಿಶ್ರ ಸರ್ಕಾರದಲ್ಲಿ ಅವರಿಬ್ಬರನ್ನು ಸಚಿವರನ್ನಾಗಿ ಮಾಡಲಾಯಿತು.

ರಿಪಬ್ಲಿಕ್ ಆಫ್ ಬಳ್ಳಾರಿ
2008 ರಲ್ಲಿ ಮಾಜಿ ಸಿಎಂ ಬಿಎಸ್ ಯೂಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವಲ್ಲಿ ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲು ಪ್ರಮುಖ ಪಾತ್ರವಹಿಸಿದರು. ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಜನಾರ್ಧನ ರೆಡ್ಡಿ ಹಾಗೂ ಅವರ ಹಿರಿಯ ಸಹೋದರ ಕರುಣಾಕರ ರೆಡ್ಡಿ ಸಚಿವರಾದರು. ಜನಾರ್ಧನ ರೆಡ್ಡಿ ಅವರ ಇನ್ನೊಬ್ಬ ಸಹೋದರ ಸೋಮಶೇಖರ ರೆಡ್ಡಿ ಅವರು ಶಾಸಕರಾಗಿ ಆಯ್ಕೆಯಾದರು. ರೆಡ್ಡಿ ಅವರ ಆಪ್ತ ಸ್ನೇಹಿತರೆಂದೇ ಗುರುತಿಸಿಕೊಂಡಿದ್ದ ಶ್ರೀರಾಮುಲು ಅವರು ಸಹ ಸಚಿವರಾಗಿದರು.
ಸಚಿವ ಶ್ರೀರಾಮುಲು ಅವರ ಸಹೋದರಿ ಬಿ ಶಾಂತಾ ಬಳ್ಳಾರಿ ಲೋಕಸಭೆಗೆ ಸಂಸದರಾಗಿ ಆಯ್ಕೆಯಾದರು. ಶ್ರೀರಾಮುಲು ಅಳಿಯ ಸುರೇಶ್ ಬಾಬು ಶಾಸಕರಾಗಿದರು. ಬಳ್ಳಾರಿ ಹಾಗೂ ರಾಯಚೂರು ಸುತ್ತಲಿನ ಹಲವು ಕ್ಷೇತ್ರಗಳಲ್ಲಿ ತಮ್ಮ ಆಪ್ತರನ್ನು ಶಾಸಕರನ್ನಾಗಿ ರೆಡ್ಡಿ ಸಹೋದದರು ಮಾಡಿದರು. ಈ ಎಲ್ಲ ಬೆಳವಣಿಗೆಗಳಿಗೆ ಜನಾರ್ಧನ ರೆಡ್ಡಿಯೇ ಟಾಸ್ಕ್ ಮಾಸ್ಟರ್ ಆಗಿ ಕಾರ್ಯನಿರ್ವಹಿಸಿದರು. ರೆಡ್ಡಿ ಕಟ್ಟಿಕೊಂಡಿದ್ದ ಈ ಸಾಮ್ರಾಜ್ಯವನ್ನು 'ರಿಪಬ್ಲಿಕ್ ಆಫ್ ಬಳ್ಳಾರಿ' ಎಂದೇ ಕರೆಯಲಾಗುತ್ತಿತ್ತು.

ಕೇಳಿ ಬಂತು ಅಕ್ರಮ ಗಣಿಗಾರಿಕೆ ಆರೋಪ
2008 ರಲ್ಲಿ ಬೀಜಿಂಗ್ ಒಲಂಪಿಕ್ಸ್‌ಗೆ ಚೀನಾದಲ್ಲಿ ಸಿದ್ದತೆ ನಡೆಯಿತ್ತಿತ್ತು. ಆ ಸಮಯದಲ್ಲಿ ಜನಾರ್ಧನ ರೆಡ್ಡಿ ಅವರ ಒಡೆತನದ ಗಣಿ ಕಂಪನಿ ನೇರವಾಗಿ ಚೀನಾ ದೇಶಕ್ಕೆ ಕಬ್ಬಿಣದ ಅದಿರನ್ನು ರವಾನಿಸುವ ಕಾರ್ಯದಲ್ಲಿ ತೊಡಗಿತು. ಆಗ ಅಪಾರ ಪ್ರಮಾಣದ ಹಾಗೂ ಹೆಚ್ಚಿನ ಬೆಲೆಗೆ ಅದಿರನ್ನು ರಪ್ತು ಮಾಡಲಾಯಿತು. ಈ ಮೂಲಕ ರೆಡ್ಡಿ ಸಹೋದದರ ಮನೆ ಬಾಗಿಲಿಗೆ ಹಣದ ಹೊಳೆಯೇ ಹರಿದುಬಂದಿತು.
2011ರ ಜುಲೈನಲ್ಲಿ ಅಂದಿನ ಕರ್ನಾಟಕದ ಲೋಕಾಯಕ್ತರಾಗಿದ್ದ ಮಾಜಿ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅವರು ಬಳ್ಳಾರಿಯ ಅಕ್ರಮ ಗಣಿಗರಿಕೆ ಕುರಿತು ವಿಸ್ತಾರವಾದ ವರದಿ ನೀಡಿದರು. ಇದನ್ನೇ ಮೂಲವಾಗಿರಿಸಿಕೊಂಡು ತೆರಿಗೆ ಇಲಾಖೆ ಅಧಿಕಾರಿಗಳು ರೆಡ್ಡಿ ಸಹೋದರರು ಹಾಗೂ ಅವರ ಆಪ್ತರಿಗೆ ಸೇರಿದ್ದ ಎಲ್ಲಾ ಕಚೇರಿ, ಮನೆಗಳ ಮೇಲೆ ದಾಳಿ ವ್ಯಾಪಕ ದಾಳಿ ನಡೆಸಿದರು.

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ಧನ ರೆಡ್ಡಿ ಜೈಲು ಸೇರಿದರು. ರೆಡ್ಡಿ ಜಾಮೀನಿಗಾಗಿ ಅಂದಿನ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಿಗೆ ಲಂಚ ನೀಡುವ ಪ್ರಯತ್ನಗಳನ್ನೂ ಜನಾರ್ಧನ ರೆಡ್ಡಿ ಆಪ್ತರು ಮಾಡಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದವು. ಅಲ್ಲಿಗೆ ಜನಾರ್ಧನ ರೆಡ್ಡಿ ಎಂಬ ಗಣಿ ಧಣಿ ಜೈಲಿಂದ ಹೊರಬರುವುದು ಕಷ್ಟಕರವಾಯಿತು.
ಮಹಾಪತನದತ್ತ ಗಣಿ ಧಣಿ
ಗಾಲಿ ಜನಾರ್ಧನ ರೆಡ್ಡಿ 2011 ರಿಂದ 2015ರ ವರೆಗೂ ಆಂದ್ರ ಪ್ರದೇಶದ ಚಂಚಲಗೂಡಾ ಜೈಲಿನಲ್ಲೇ ಉಳಿದರು. ಈ ವರ್ಷಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಹಲವು ಮಹತ್ತರ ಪಲ್ಲಟಗಳಾದವು. ಜನಾರ್ಧನ ರೆಡ್ಡಿ ಅವರ ಆಪ್ತರೆಂದೇ ಕರೆಯಲಾಗುತ್ತಿದ್ದ ಶ್ರೀರಾಮುಲು ಬಿಜೆಪಿಯಿಂದ ಹೊರಬಂದು ಬಿಎಸ್‌ಆರ್ ಕಾಂಗ್ರೆಸ್ ಪಕ್ಷವನ್ನು ಕಟ್ಟಿದರು. 2013 ರ ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಕೇವಲ ನಾಲ್ಕು ಸ್ಥಾನವನ್ನು ಗೆಲ್ಲುವಲ್ಲಿ ಪಕ್ಷ ಸಫಲವಾಯಿತು. ಆಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿತು.
ರೆಡ್ಡಿ ಸಹೋದರ ಕರುಣಾಕರ ರೆಡ್ಡಿ ಶ್ರೀರಾಮುಲು ಅವರಿಂದ ದೂರ ಉಳಿದರು. ರೆಡ್ಡಿ ಕಟ್ಟಿದ ಬಳ್ಳಾರಿ ರಿಪಬ್ಲಿಕ್‌ನ ಮಹಾಪತನ ಆರಂಭವಾಗಿತು. ಶ್ರೀರಾಮುಲು ಮತ್ತೆ ಬಿಜೆಪಿಗೆ ಸೇರಿಕೊಂಡರು. ಅತ್ತ ಗಣಿ ಧಣಿ ಗಾಲಿ ಜನಾರ್ಧನ ರೆಡ್ಡಿ ಹೆಸರು ಕರ್ನಾಟಕದ ರಾಜಕೀಯ ರಂಗದಿಂದ ಮರೆಯಾಗತೊಡಗಿತು.

ಅಳಿದ ಮೇಲೆಯೂ ಉಳಿಯುವ ಯತ್ನ
ಜೈಲಿನಿಂದ ಹೊರಬಂದ ಗಾಲಿ ಜನಾರ್ಧನ ರೆಡ್ಡಿಯನ್ನು ಬಿಜೆಪಿಯೇ ದೂರ ತಳ್ಳಿತು. ಬಿಜೆಪಿ ಶಾಸಕರಾದ ಸಹೋದರರು ಜನಾರ್ಧನ ರೆಡ್ಡಿಯನ್ನು ಅಷ್ಟಾಗಿ ಹಚ್ಚಿಕೊಳ್ಳಲಿಲ್ಲ. ಶ್ರೀರಾಮುಲು ತಮ್ಮ ಗೆಳೆಯನ ಬೆನ್ನಿಗೆ ನಿಂತರು. ಆದರೂ, ರೆಡ್ಡಿ ರಾಜಕೀಯವಾಗಿ ಒಬ್ಬಂಟಿಯಾಗುತ್ತಲೇ ಹೋದರು. ಬಳ್ಳಾರಿ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ಹೇರಿದ ಹಿನ್ನೆಲೆಯಲ್ಲಿ ಬಳ್ಳಾರಿಯಾಚೆಗೆ ರೆಡ್ಡಿ ಉಳಿಯುವಂತಾಯಿತು. ಇದು ರೆಡ್ಡಿಯನ್ನು ಇನ್ನಷ್ಟು ಅತಂತ್ರವಾಗಿಸಿತು.
ಈಗ ರೆಡ್ಡಿ ಅವರು ಹೊಸ ಪಕ್ಷವನ್ನು ಕಟ್ಟಿದ್ದಾರೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳಾದ ರಾಯಚೂರು, ಯಾದಗಿರಿ, ಕಲಬುರಗಿ ಬಳ್ಳಾರಿ, ವಿಜಯನಗರ, ಕೊಪ್ಪಳ ಹಾಗೂ ಬೀದರ್‌ಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು 'ಕಲ್ಯಾಣ ರಾಜ್ಯ ಪ್ರಗತಿ ಪಕ್ಷ' ಎಂಬ ಪಕ್ಷವನ್ನು ಜನಾರ್ಧನ ರೆಡ್ಡಿ ಆರಂಭಿಸಿದ್ದಾರೆ. ಅವರು ಗಂಗಾವತಿಯಲ್ಲಿ ಸ್ಪರ್ಧೆಸುತ್ತಿದ್ದಾರೆ. ಅವರ ಪತ್ನಿಯನ್ನು ತಮ್ಮ ಸಹೋದರ ಸೋಮಶೇಖರ ರೆಡ್ಡಿ ವಿರುದ್ಧ ಕಣಕ್ಕಿಳಿಸಿದ್ದಾರೆ. ಆಪ್ತ ಸ್ನೇಹಿತ ಶ್ರೀರಾಮುಲು ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಿದ್ದಾರೆ. ರೆಡ್ಡಿ ಹಿರಿಯ ಸಹೋದರ ಮತ್ತೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ರೆಡ್ಡಿ ಮಾತ್ರ ಅಳಿದ ಮೇಲೆಯೂ ಉಳಿಯುವ ಪ್ರಯತ್ನ ಮಾಡುತ್ತಿರುವುದು ಗೋಚರವಾಗುತ್ತಿದೆ.
-
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ












Click it and Unblock the Notifications