ಕನ್ನಡಿಗರಿಗೆ ಉದ್ಯೋಗ : ಡಾ.ಜಿ.ಪರಮೇಶ್ವರ ಟ್ವೀಟ್
ಬೆಂಗಳೂರು, ಮೇ 06 : ಐಬಿಪಿಎಸ್ ತಿದ್ದುಪಡಿಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಕೇಂದ್ರ ಹಣಕಾಸು ಸಚಿವರಿಗೆ ನಾನು ಪತ್ರ ಬರೆದಿದ್ದೆ. ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹೇಳಿದ್ದಾರೆ.
ಡಾ.ಜಿ.ಪರಮೇಶ್ವರ ಅವರು #KarnatakaJobsForKannadigas ಎಂಬ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ. ಶನಿವಾರ ಟ್ವಿಟರ್‌ನಲ್ಲಿ ನಡೆದ ದೊಡ್ಡ ಅಭಿಯಾನದ ಬಗ್ಗೆ ಅವರು ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.
ಐಬಿಪಿಎಸ್ ತಿದ್ದುಪಡಿಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಕೇಂದ್ರ ಹಣಕಾಸು ಸಚಿವರಿಗೆ ನಾನು ಪತ್ರ ಬರೆದಿದ್ದೆ. ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಸ್ಥಳೀಯರೊಡನೆ ವ್ಯವಹರಿಸುವ ಜವಾಬ್ದಾರಿ ಇರುವ ಉದ್ಯೋಗಿಗಳು ನಾಡಭಾಷೆ ಬಲ್ಲವರಾದ ಸ್ಥಳೀಯರಾಗಿರಬೇಕೆಂಬುದು ಸಹಜವಾದ ಬೇಡಿಕೆ. #KarnatakaJobsForKannadigas ಗೆ ನನ್ನ ಬೆಂಬಲವಿದೆ ಎಂದು ಪರಮೇಶ್ವರ ಟ್ವೀಟ್ ಮಾಡಿದ್ದಾರೆ.
ಕರ್ನಾಟಕದ ಕೆಲಸ ಕನ್ನಡಿಗರಿಗೆ ಸಿಗಬೇಕು ಎಂದು ಕರ್ನಾಟಕದಲ್ಲಿ ಬೃಹತ್ ಅಭಿಯಾನ ಶನಿವಾರ ನಡೆದಿತ್ತು. #KarnatakaJobsForKannadigas ಹೆಸರಿನಲ್ಲಿ ಹಲವಾರು ಜನರು ಸರಣಿ ಟ್ವೀಟ್‌ಗಳನ್ನು ಮಾಡಿದ್ದರು.
|
ಡಾ.ಜಿ.ಪರಮೇಶ್ವರ ಟ್ವೀಟ್
2014ರ ವರೆಗೂ ರಾಜ್ಯದ ಬ್ಯಾಂಕ್ ಉದ್ಯೋಗಗಳು ಕನ್ನಡ ಬಲ್ಲ ರಾಜ್ಯದ ಆಕಾಂಕ್ಷಿಗಳಿಗೆ ಮೀಸಲಾಗಿತ್ತು. ಐಬಿಪಿಎಸ್ ತಿದ್ದುಪಡಿಯಿಂದಾಗಿ ಕನ್ನಡ ಬಾರದವರೆಲ್ಲರೂ ಈ ಉದ್ಯೋಗಗಳನ್ನು ಪಡೆದು ಕನ್ನಡಿಗರು ಯಾವ ಬ್ಯಾಂಕಿನಲ್ಲೂ ವ್ಯವಹರಿಸಲಾಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಬ್ಯಾಂಕ್ ಉದ್ಯೋಗಗಳು ಬಹುತೇಕ ರಾಜ್ಯದ ಆಕಾಂಕ್ಷಿಗಳ ಕೈತಪ್ಪುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

ಕನ್ನಡಿಗರಿಗೆ ಉದ್ಯೋಗ
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಮಾಜಿ ಸಚಿವ ಸಿ.ಟಿ.ರವಿ ಸೇರಿದಂತೆ ಹಲವು ನಾಯಕರು #KarnatakaJobsForKannadigas ಅಭಿಯಾನಕ್ಕೆ ಬೆಂಬಲ ನೀಡಿದ್ದರು.
|
ಎಚ್.ಡಿ.ಕುಮಾರಸ್ವಾಮಿ ಹೇಳಿದ್ದೇನು?
ಕನ್ನಡಿಗರ ಹಕ್ಕೊತ್ತಾಯವನ್ನು ಪರಿಗಣಿಸಿ ಕಾನೂನಿನ ಚೌಕಟ್ಟಿನಲ್ಲಿ ಹೇಗೆ ಕಾರ್ಯರೂಪಕ್ಕೆ ತರಬಹುದು ಎಂದು ಸಲಹೆ ಪಡೆಯಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಟ್ವೀಟ್ ಮಾಡಿದ್ದರು.
|
ಉದ್ಯೋಗದಲ್ಲಿ ಮೊದಲ ಆದ್ಯತೆ
ಖಾಸಗಿ ಕ್ಷೇತ್ರವೂ ಸೇರಿದಂತೆ ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೊದಲ ಆದ್ಯತೆ ನೀಡಬೇಕೆಂಬುದು ನನ್ನ ನಿಲುವು. ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೆ ನೀಡಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಅಭಿಯಾನಕ್ಕೆ ನನ್ನ ಬೆಂಬಲ ಇದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.












Click it and Unblock the Notifications