ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದ್ದಿಲ್ಲದೆ ಸಿದ್ದರಾಮಯ್ಯ ವಿರುದ್ಧ ಗೆದ್ದ ಪರಮೇಶ್ವರ್, ದಿನೇಶ್‌ ಗುಂಡೂರಾವ್!

|
Google Oneindia Kannada News

Recommended Video

ಸದ್ದಿಲ್ಲದೆ ಸಿದ್ದರಾಮಯ್ಯ ವಿರುದ್ಧ ಗೆದ್ದ ಪರಮೇಶ್ವರ್, ದಿನೇಶ್‌ ಗುಂಡೂರಾವ್! | Oneindia Kannada

ಬೆಳಗಾವಿ, ಡಿಸೆಂಬರ್ 12: ನಿನ್ನೆ ದೇಶವೆಲ್ಲಾ ಪಂಚ ರಾಜ್ಯ ಚುನಾವಣೆಯ ಫಲಿತಾಂಶದಲ್ಲಿ ಮುಳುಗಿದ್ದಾಗಲೇ ಕರ್ನಾಟಕ ಕಾಂಗ್ರೆಸ್‌ನಲ್ಲಿ ಒಳಜಗಳಕ್ಕೆ ಹೊಸ ರೂಪ ಸಿಕ್ಕಿದೆ. ಸಿದ್ದರಾಮಯ್ಯ ವಿರುದ್ಧ ಪರಮೇಶ್ವರ್ ಮತ್ತು ದಿನೇಶ್ ಗುಂಡೂರಾವ್ ತೊಡೆತಟ್ಟಿದ್ದಾರೆ.

ಹೌದು, ನಿನ್ನೆ ಪರಮೇಶ್ವರ್, ದಿನೇಶ್ ಗುಂಡೂರಾವ್ ಸೇರಿ ಕೆಲವು ಮೂಲ ಕಾಂಗ್ರೆಸ್ಸಿಗರು ಒಟ್ಟು ಸೇರಿ ಪ್ರತಾಪ್ ಚಂದ್ರ ಶೆಟ್ಟಿ ಅವರು ಸಭಾಪತಿಯಾಗಿ ಆಯ್ಕೆ ಆಗುವಂತೆ ಮಾಡಿದ್ದಾರೆ. ಇದರ ಹಿಂದೆ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ನಲ್ಲಿ ಮಣಿಸುವ ಉದ್ದೇಶವೇ ಇದ್ದಂತಿದೆ. ಸಣ್ಣ ಮಟ್ಟಿನ ಜಯವೂ ಈ ಗುಂಪಿಗೆ ಪ್ರಾಪ್ತವಾಗಿದೆ.

ಪರಿಷತ್ ಸಭಾಪತಿ ಆಯ್ಕೆಗೆ ಡಿ.12ಕ್ಕೆ ಚುನಾವಣೆ, ಹಗ್ಗ-ಜಗ್ಗಾಟ ಪರಿಷತ್ ಸಭಾಪತಿ ಆಯ್ಕೆಗೆ ಡಿ.12ಕ್ಕೆ ಚುನಾವಣೆ, ಹಗ್ಗ-ಜಗ್ಗಾಟ

ಈ ಮೊದಲು ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಅಭ್ಯರ್ಥಿಯಾಗಿ ಸಿದ್ದರಾಮಯ್ಯ ಅವರು ಸೂಚಿಸಿದ್ದ ಎಸ್‌.ಆರ್.ಪಾಟೀಲ್ ಅವರನ್ನು ಆಯ್ಕೆ ಮಾಡಲಾಗಿತ್ತು ಆದರೆ ಆಗ ಮಧ್ಯ ಪ್ರವೇಶಿಸಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಜಿ.ಪರಮೇಶ್ವರ್ ಅವರು ಹೈಕಮಾಂಡ್‌ನಿಂದ ಆದೇಶವಾಗಿದೆ ಎಂದು ಹೇಳಿ ಎಸ್‌.ಆರ್.ಪಾಟೀಲ್ ಅವರನ್ನು ತಪ್ಪಿಸಿ ಪ್ರತಾಪ್ ಚಂದ್ರ ಶೆಟ್ಟಿ ಅವರನ್ನು ಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು.

ಸಿದ್ದರಾಮಯ್ಯ ವಿದೇಶ ಪ್ರವಾಸದ ಲಾಭ ಪಡೆದರು

ಸಿದ್ದರಾಮಯ್ಯ ವಿದೇಶ ಪ್ರವಾಸದ ಲಾಭ ಪಡೆದರು

ಸಿದ್ದರಾಮಯ್ಯ ಅವರು ವಿದೇಶದಲ್ಲಿದ್ದಾಗ ಹಠಾತ್ತನೆ ಈ ಬೆಳವಣಿಗೆ ನಡೆದಿದ್ದು, ಮೂಲ ಕಾಂಗ್ರೆಸ್ಸಿಗರು ಸಿದ್ದರಾಮಯ್ಯ ಬಲವನ್ನು ಕಡಿಮೆ ಮಾಡಬೇಕೆಂದು ಈ ದಾಳ ಎಸೆದಿದ್ದಾರೆ ಎನ್ನಲಾಗಿದೆ. ಪ್ರತಾಪ್ ಚಂದ್ರ ಶೆಟ್ಟಿ ಅವರಿಗೆ ನಾಮಪತ್ರ ಸಲ್ಲಿಸಬೇಕು ಎಂಬ ಮಾಹಿತಿ ಕೆಲವೇ ಗಂಟೆಗಳ ಮುಂಚೆ ಬಂದಿತೆಂದು ಹೇಳಲಾಗುತ್ತಿದೆ.

ಅಳುತ್ತಾ ಸದನದಿಂದ ಹೊರನಡೆದ ಬಸವರಾಜ ಹೊರಟ್ಟಿ, ಏನು ಕಾರಣ?ಅಳುತ್ತಾ ಸದನದಿಂದ ಹೊರನಡೆದ ಬಸವರಾಜ ಹೊರಟ್ಟಿ, ಏನು ಕಾರಣ?

ಕಳೆದ ಬಾರಿ ಪ್ರವಾಸದಲ್ಲೂ ಹೀಗೆ ಆಗಿತ್ತು

ಕಳೆದ ಬಾರಿ ಪ್ರವಾಸದಲ್ಲೂ ಹೀಗೆ ಆಗಿತ್ತು

ಸಿದ್ದರಾಮಯ್ಯ ಅವರು ಕಳೆದ ಬಾರಿ ಯೂರೋಪ್ ಪ್ರವಾಸ ಹೋದಾಗ ಕೂಡಾ ಪರಮೇಶ್ವರ್ ಹಾಗೂ ದಿನೇಶ್‌ಗುಂಡೂರಾವ್ ಅವರು ಸಿದ್ದರಾಮಯ್ಯ ಅವರ ಬೆಂಬಲಿತ ಶಾಸಕರನ್ನು ಭೇಟಿ ಮಾಡಿ ತಮ್ಮತ್ತ ಸೆಳೆಯುವ ಯತ್ನ ಮಾಡಿದ್ದರು. ಪರಮೇಶ್ವರ್ ಅವರ ನಿವಾಸದಲ್ಲಿ ಈ ಸಂಬಂಧ ಅನೌಪಚಾರಿಕ ಸಭೆ ಸಹ ಆಯೋಜಿಸಲಾಗಿತ್ತು.

ಕಾಂಗ್ರೆಸ್‌ನಲ್ಲೇ ಅಸಮಾಧಾನ

ಕಾಂಗ್ರೆಸ್‌ನಲ್ಲೇ ಅಸಮಾಧಾನ

ಕರಾವಳಿಯ ಪ್ರತಾಪ್ ಚಂದ್ರ ಶೆಟ್ಟಿ ಅವರನ್ನು ಸಭಾಪತಿ ಸ್ಥಾನಕ್ಕೆ ಆಯ್ಕೆ ಮಾಡಿರುವುದು ಕಾಂಗ್ರೆಸ್‌ನ ಶಾಸಕರಿಗೆ ಅಸಮಾಧಾನವಾಗಿದ್ದು. ಮೈತ್ರಿ ಸರ್ಕಾರದಲ್ಲಿ ಉತ್ತರ ಕರ್ನಾಟಕ್ಕೆ ಆಗುತ್ತಿರುವ ಅನ್ಯಾಯ ಮುಂದುವರೆದಿದೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಪಿಸಿಸಿ ಕಾರ್ಯದರ್ಶಿ ನಂಜಯ್ಯನಮಠ ಸಹ ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬಸವರಾಜ ಹೊರಟ್ಟಿಗೂ ತಪ್ಪಿದ ಸ್ಥಾನ

ಬಸವರಾಜ ಹೊರಟ್ಟಿಗೂ ತಪ್ಪಿದ ಸ್ಥಾನ

ಹಂಗಾಮಿ ಸಭಾಪತಿ ಆಗಿದ್ದ ಬಸವರಾಜ ಹೊರಟ್ಟಿ ಅವರನ್ನು ಸಭಾಪತಿ ಮಾಡಲಾಗುತ್ತದೆ ಎನ್ನಲಾಗಿತ್ತು. ಅವರೂ ಸಹ ಉತ್ತರ ಕರ್ನಾಟಕ್ಕೆ ಸೇರಿದವರಾಗಿರುವ ಕಾರಣ ಅವರಿಗೆ ಅವಕಾಶ ಸಿಗುತ್ತದೆ ಎಂದು ಹೇಳಲಾಗಿತ್ತು. ಆದರೆ ಅದೂ ಸಹ ಹುಸಿಯಾಗಿದ್ದು, ಸಭಾಪತಿ ಸ್ಥಾನ ಕೈತಪ್ಪಿದ್ದಕ್ಕೆ ಬೇಸರಗೊಂಡು ಅವರು ಇಂದು ಸದನ ತೊರೆದರು.

ಅನಿರೀಕ್ಷಿತವಾಗಿ ಸಭಾಪತಿ ಆದ ಪ್ರತಾಪ್ ಚಂದ್ರ ಶೆಟ್ಟಿ

ಅನಿರೀಕ್ಷಿತವಾಗಿ ಸಭಾಪತಿ ಆದ ಪ್ರತಾಪ್ ಚಂದ್ರ ಶೆಟ್ಟಿ

ಕರಾವಳಿಯ ಪ್ರತಾಪ್ ಚಂದ್ರ ಶೆಟ್ಟಿ ಅವರು ನಾಲ್ಕು ಬಾರಿ ಶಾಸಕರಾಗಿ ಸೇವೆ ಸಲ್ಲಿಸಿರುವ ಪ್ರತಾಪ್ ಚಂದ್ರ, ಮೂರು ಬಾರಿ ಪರಿಷತ್‌ಗೆ ಆಯ್ಕೆ ಆಗಿದ್ದವರು. ಹಿರಿತನದ ಆಧಾರದಲ್ಲಿ ಅವರಿಗೆ ಅವಕಾಶ ನೀಡಲಾಗಿದೆ ಎಂದು ಪರಮೇಶ್ವರ್ ಮತ್ತು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

English summary
Inner politics sparkle in congress as the G Parameshwar and Dinesh Gundu Rao supported Prathap Chandra Shetty become speaker of Legislative council.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X