• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಕ್ಕಳಿಗೆ ಉಚಿತ ಟೆಲಿ-ಕೌನ್ಸಿಲಿಂಗ್, ಟೋಲ್ ಫ್ರೀ ಸಂಖ್ಯೆ ಇಲ್ಲಿದೆ

|

ಬೆಂಗಳೂರು, ಜುಲೈ 31: ಸಮಗ್ರ ಮಕ್ಕಳ ರಕ್ಷಣಾ ಯೋಜನೆ ನಿರ್ಲಕ್ಷತೆಗೊಳಗಾದ, ಪರಿತ್ಯಜಿಸಲ್ಪಟ್ಟ, ದೌರ್ಜನ್ಯಕ್ಕೆ, ಶೋಷಣೆಗೆ ಒಳಗಾದ ಮತ್ತು ಕುಟುಂಬದಿಂದ ಬೇರ್ಪಟ್ಟ ಮಕ್ಕಳು ದುರ್ಬಲ ಸ್ಥಿತಿಗೆ ತಲುಪದಿರುವಂತೆ ತಡೆಯಲು ಹಾಗೂ ಇಂತಹ ಪ್ರಕರಣಗಳನ್ನು ಕಡಿಮೆ ಮಾಡಲು ಹಾಗೂ ಸಂಕಷ್ಠದಲ್ಲಿರುವ ಮಕ್ಕಳ ಪರಿಸ್ಥಿತಿಯನ್ನು ಉತ್ತಮಪಡಿಸುವ ಉದ್ದೇಶವನ್ನು ಹೊಂದಿರುವ ಕೇಂದ್ರದ ಯೋಜನೆಯಾಗಿರುತ್ತದೆ.

ಸಮಗ್ರ ಮಕ್ಕಳ ರಕ್ಷಣಾ ಯೋಜನೆಯು ಮಕ್ಕಳಿಗಾಗಿ ಉಚಿತ ದೂರವಾಣಿ ಸಮಾಲೋಚನೆ ನೀಡಲು ಟೋಲ್-ಫ್ರೀ ನಂ: 18004252244 ಅನ್ನು ಪ್ರಾರಂಭಿಸುತ್ತಿದೆ. ಉಚಿತ "ಟೆಲಿ-ಆಪ್ತಸಮಾಲೋಚನೆ"ಗೆ ಅಗತ್ಯವಿರುವ ಮಾನವ ಸಂಪನ್ಮೂಲದ ಬಳಕೆಗೆ ಯೂನಿಸೆಫ್ ಹಣಕಾಸು ಸಹಾಯ ಮಾಡುತ್ತದೆ. ಕರ್ನಾಟಕದಲ್ಲಿ ಸಮಾಲೋಚನೆ ಅಗತ್ಯವಿರುವ ಎಲ್ಲಾ ಮಕ್ಕಳಿಗಾಗಿ ಉಚಿತ "ಟೆಲಿ-ಕೌನ್ಸಲಿಂಗ್ ಸೌಲಭ್ಯವನ್ನು ನೀಡಲು ಯೋಜಿಸಲಾಗಿದೆ. ಆಪ್ತ ಸಮಾಲೋಚನೆ ಬಯಸುವ ಕರ್ನಾಟಕದಲ್ಲಿನ ಎಲ್ಲಾ ಮಕ್ಕಳು ಹಾಗೂ ಮಕ್ಕಳ ಪೋಷಕರು ಈ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡುವ ಮೂಲಕ ಉಚಿತವಾಗಿ ಆಪ್ತ ಸಮಾಲೋಚನೆ ಸೌಲಭ್ಯ ಪಡೆಯಬಹುದು.

ಕೊರೊನಾ ಕುರಿತ ಗೊಂದಲವಿದ್ದರೆ ಒಂದೇ ಒಂದು ಕರೆ ಮಾಡಿ ಸಾಕು

ಉಚಿತ "ಟೆಲಿ-ಆಪ್ತಸಮಾಲೋಚನೆ" ಸೌಲಭ್ಯವು ಪ್ರಮುಖವಾಗಿ 2 ಸಿಬ್ಬಂದಿಗಳನ್ನು ಹೊಂದಿದ್ದು ( ಒಬ್ಬ ಸಿಬ್ಬಂದಿ ಬೆಳಿಗ್ಗೆ 8.00 ರಿಂದ ಮಧ್ಯಾಹ್ನ 2.00 ವರೆಗೆ ಹಾಗೂ ಮಧ್ಯಾಹ್ನ 2.00 ರಿಂದ ರಾತ್ರಿ 8.00 ವರೆಗೆ) ಪಾಳಿ ಕೆಲಸ ನಿರ್ವಹಿಸುತ್ತಾರೆ. ಇವರು ಪ್ರಥಮವಾಗಿ ಮಗುವಿನ ಕರೆಗಳನ್ನು ಸ್ವೀಕರಿಸಿ ಮಗುವಿನ ನಿರ್ಧಿಷ್ಟವಾದ ಸಮಾಲೋಚನೆಯ ಅವಶ್ಯಕತೆಯನ್ನು ಆಧರಿಸಿ ಸಂಬಂಧಪಟ್ಟ ಸಮಾಲೋಚಕರಿಗೆ ಸಂಪರ್ಕ ಕಲ್ಪಿಸುತ್ತಾರೆ.

ಟೋಲ್-ಫ್ರೀ ಸಂಖ್ಯೆ 18004252244ಕ್ಕೆ ಬಂದ ಕರೆಗಳಿಗೆ ಅವಶ್ಯಕ ಆಪ್ತ ಸಮಾಲೋಚನೆ ಒದಗಿಸಲು ರಾಜ್ಯಾದ್ಯಂತ ಸಮಗ್ರ ಮಕ್ಕಳ ರಕ್ಷಣಾ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 148 ಸಮಾಲೋಚಕರಿಗೆ ಹಾಗೂ ಸಮಾಜ ಕಾರ್ಯಕರ್ತರಿಗೆ ಪ್ರಥಮ ಹಂತದ ತರಬೇತಿಯನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಅನುಭವದ ಆಧಾರದ ಮೇಲೆ ಮನೋಶಾಸ್ತ್ರ ಬೆಂಬಲದ ಅವಶ್ಯಕತೆ ಇರುವ ಮಕ್ಕಳಿಗೆ ಸೇವೆ ಸಲ್ಲಿಸಲು ಹೆಚ್ಚಿನ ತರಬೇತಿಯನ್ನು ಎಲ್ಲಾ ಸಮಾಲೋಚಕರಿಗೆ ಒದಗಿಸಿ ಮಕ್ಕಳ ಸಾಮಥ್ರ್ಯ ಅಭಿವೃದ್ಧಿ ಮಾಡಲಾಗುವುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

English summary
Integrated Child Protection Scheme is starting free “Tele Counseling” Facility through a Toll-Free number 18004252244. UNICEF is supporting the finances of the Man-Power required for this free " “Tele-Counseling” Facility.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more