
ಬೇರೆ ಜಾತಿಯವರಿಗೆ ವಿಷ ಭಾಗ್ಯ ಕರುಣಿಸಿ: ಫೇಸ್ ಬುಕ್ ನಲ್ಲಿ ಸಿಎಂಗೆ ಮನವಿ
ಬೆಂಗಳೂರು, ಜೂನ್ 3: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪರಿಶಿಷ್ಟ ಜಾತಿ, ವರ್ಗಗಳ ವಿದ್ಯಾರ್ಥಿಗಳಿಗಾಗಿ ಘೋಷಿಸಿರುವ ಉಚಿತ ಬಸ್ ಪಾಸ್ ಸೌಕರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.
ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಕೊಟ್ಟ ಹಾಗೆ ಉಳಿದ ವಿದ್ಯಾರ್ಥಿಗಳಿಗೂ ನೀಡಬೇಕೆಂದು ಹಲವರು ಆಗ್ರಹಿಸಿದ್ದಾರೆ. ಇನ್ನೂ ಕೆಲವರು, ಮುಖ್ಯಮಂತ್ರಿಯಾದಾಗಿನಿಂದ ಸಿದ್ದರಾಮಯ್ಯ ಅವರಿಗೆ ಕೇವಲ ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತರೇ ಕಾಣುತ್ತಾರೆ. ಅವರಿಗೆ ಇತರ ವರ್ಗಗಳ್ಯಾವೂ ಕಾಣುತ್ತಿಲ್ಲ ಎಂದು ಟೀಕಿಸಿದ್ದಾರೆ.
'ಒನ್ ಇಂಡಿಯಾ'ದಲ್ಲಿ ಪ್ರಕಟಗೊಂಡ ಸುದ್ದಿಯನ್ನು ಓದಿರುವ ಫೇಸ್ ಬುಕ್ ಓದುಗರಂತೂ ಸಾಕಷ್ಟು ಗರಂ ಆಗಿದ್ದಾರೆ. ಸರ್ಕಾರದ ತೀರ್ಮಾನಕ್ಕೆ ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದಾರೆ. ಒಬ್ಬರಂತೂ, ಇತರ ವರ್ಗಗಳಿಗೆ ವಿಷ ಭಾಗ್ಯ ಕೊಟ್ಟುಬಿಡಿ ಎಂದಿದ್ದರೆ, ಮತ್ತೂ ಮತ್ತೊಬ್ಬರೂ ನೀವು ತಿಪ್ಪರಲಾಗ ಹಾಕಿದರೂ ಮತ್ತೆ ಸಿಎಂ ಆಗಲ್ಲ ಬಿಡಿ ಅಂತ ಛೇಡಿಸಿದ್ದಾರೆ.
ಶನಿವಾರ ಮಧ್ಯಾಹ್ನ ಸಂಜೆ ಹೊತ್ತಿಗೆ ಇಂಥ 11 ಕಮೆಂಟ್ ಗಳು ಬಂದಿವೆ. ಅವುಗಳಲ್ಲಿ ಕೆಲವನ್ನು ಮಾತ್ರ ಹೆಕ್ಕಿ ತಂದು ಇಲ್ಲಿ ನಿಮಗೆ ಕೊಡಲಾಗಿದೆ.

ಬೇರೆ ವರ್ಗದವರಿಗೆ ವಿಷ ಭಾಗ್ಯ ನೀಡಿ
- ನಮೋ ಸುಧೀರ್ ಗೌಡ ತುಳುನಾಡ್
ಮಧ್ಯಮ ವರ್ಗದವರಿಗೆ ಸಿದ್ದರಾಮಯ್ಯ ಅವರ ಕಡೆಯಿಂದ ವಿಷ ಭಾಗ್ಯ..... ಎಂಚಿ ಸಾವುದ ಓಲೈಕೆ ಮಾರೆಯರೇ....
- Bhaskar
ನಿಮ್ಮ ಓಟ್ ಬ್ಯಾಂಕಿಂಗ್ ನಂತಹ ನರಿಬುದ್ದಿಗೆ ನಮ್ಮಂತಹ ವಿಧ್ಯಾರ್ಥಿಗಳನ್ನು ಏಕೆ ಹಾಳು ಮಾಡುತ್ತೀರಿ. ನಿಮಗೆ
ಯೋಗ್ಯತೆ ಇದ್ದರೆ ಯುವ ಜನತೆಗೆ ಉದ್ಯೋಗ ನೀಡುವ ಕೆಲಸವನ್ನ ಮಾಡಿ. ನಿಮ್ಮ ಉಚಿತ ಬಸ್ ಪಾಸಿಗಾಗಿಯೇ ನಾವಿಲ್ಲಿ ಯಾರೂ ಕಾದು ಕುಳಿತಿಲ್ಲ.
- Praveen M H Hiremath
ಇತರ ಹಿಂದುಳಿದ ವರ್ಗಕ್ಕೆ ಸೇರಿದ ಅಸಂಖ್ಯಾತ ಬಡ ವಿದ್ಯಾರ್ಥಿಗಳು ನಿಮಗೆ ವಿಧ್ಯಾರ್ಥಿಗಳಾಗಿ ಕಾಣಲಿಲ್ಲವೇ?...ಸ್ವಾಮಿ ಮುಖ್ಯಮಂತ್ರಿಗಳೆ ಇಂದು ನೀವು ಕೂಟ್ಟಿರುವ ಹಲವಾರು ಸರ್ಕಾರಿ ಸವಲತ್ತುಗಳನ್ನು ಪಡೆದು ಪ,ಜಾತಿ ಮತ್ತು ಪ,ಪಂಗಡಗಳು ಎಲ್ಲದರಲ್ಲಿಯೂ ಅಭಿವೃದ್ಧಿ ಸಾಧಿಸಿದ್ದಾರೆ. ಇನ್ನಾದರೂ ಇತರ ಹಿಂದುಳಿದ ವರ್ಗಗಳ ಕಡೆಗೆ ಗಮನ ಹರಿಸಿ ಒಬಿಸಿ ಯಲ್ಲಿಯೂ ಕೂಡ ಸಾಕಷ್ಟು ಬಡತನದ ಬೇಗೆಯಲ್ಲಿ ವಿದ್ಯಾಭ್ಯಾಸ ಮಾಡುವಂತಹ ಪರಿಸ್ಥತಿ ಇದೆ..ದಯಮಾಡಿ ನಿಮ್ಮ ಮತ್ತು ಮುಂದೆ ಬರಲಿರುವ ಸರ್ಕಾರಗಳು ಈ ತರಹದ ಏಕಮುಖವಾದ ನಿರ್ಧಾರಗಳನ್ನು ತೆಗೆದುಕೂಳ್ಳುವ ಮೂದಲು ಎಲ್ಲಾ ಸಮುದಾಯಕ್ಕು ಮತ್ತು ಎಲ್ಲಾ ಜಾತಿ ಧರ್ಮಗಳ ವಿದ್ಯಾರ್ಥಿಗಳಿಗೆ ಅನ್ವಯವಾಗುವಂತೆ ನಿಮ್ಮ ಕಾಯಿದೆ ಕಾನೂನುಗಳಿರಲಿ...ವಿದ್ಯಾರ್ಥಿಗಳಿಗೆ ನೀವು ಕೂಡಲು ಬಯಸುತ್ತಿರುವ ಉಚಿತ ಬಸ್ ಪಾಸ್ ನ್ನು ದಯಮಾಡಿ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಕೂಡಬೇಕು ಎಂದು ನಮ್ಮ ಆಶಯ.

ಬೇರೆ ಜಾತೀಲಿ ಬಡವರು ಇಲ್ವಾ?
- MD Harish
ಬೇರೆ ಜನಾಂಗದವರ್ಯಾರೂ ನಿಮ್ಮ ಕಣ್ಣಿಗೆ ಕಾಣೋಲ್ವಾ? ನಿಮ್ಮ ಪ್ರಕಾರ, ಸಾಮಾನ್ಯ ವರ್ಗದವರು ಅನುಕೂಲಕರವಾಗಿದ್ದಾರೆ. ಅವರ ಕುಟುಂಬಗಳ ಆದಾಯ ವರ್ಷಕ್ಕೆ ಕೋಟಿಗಳಿರುತ್ತದೆ ಎಂದು ಲೆಕ್ಕಹಾಕಿದ್ದೀರಾ?
- Nagaraja Reddy R
ಎಲ್ಲ ಜಾತಿಯವ್ರಿಗೂ ಮಾಡಿದ್ದರೆ ಏನು ಹೋಗ್ತಾ ಇತ್ತು ಇಲ್ಲಿ thorisidri ನಿಮ್ಮ ಕಚಡ ಬುದ್ಧಿ.ನಿನನ್ದು ಏನು ಹೋಗ್ಬೇಕು ಘೋಷಣೆ ಮಾಡಕ್ಕೆ. ವಿದ್ಯಾರ್ಥಿಗಳಿಂದಲೆ ಪ್ರಾರಂಭ ಆಗಬೇಕು . ಯಾಕೆ ಬೇರೆ ಜಾತಿಯಲ್ಲಿ ಬಡವರು ಇಲ್ವಾ ????? ಇಲ್ಲ ಅಂತ ನಿಮ್ಮ ಜಾತಿ ಸಮೀಕ್ಷೆ ಹೇಳುತ್ತಾ ??????
- Chandru Shekar
ಇತರ ಹಿಂದುಳಿದ ವರ್ಗಕ್ಕೆ ಸೇರಿದ ಅಸಂಖ್ಯಾತ ಬಡ ವಿದ್ಯಾರ್ಥಿಗಳು ನಿಮಗೆ ವಿಧ್ಯಾರ್ಥಿಗಳಾಗಿ ಕಾಣಲಿಲ್ಲವೇ?...ಸ್ವಾಮಿ ಮುಖ್ಯಮಂತ್ರಿಗಳೆ ಇಂದು ನೀವು ಕೂಟ್ಟಿರುವ ಹಲವಾರು ಸರ್ಕಾರಿ ಸವಲತ್ತುಗಳನ್ನು ಪಡೆದು ಪ,ಜಾತಿ ಮತ್ತು ಪ,ಪಂಗಡಗಳು ಎಲ್ಲದರಲ್ಲಿಯೂ ಅಭಿವೃದ್ಧಿ ಸಾಧಿಸಿದ್ದಾರೆ..ಇನ್ನಾದರೂ ಇತರ ಹಿಂದುಳಿದ ವರ್ಗಗಳ ಕಡೆಗೆ ಗಮನ ಹರಿಸಿ ಒಬಿಸಿ ಯಲ್ಲಿಯೂ ಕೂಡ ಸಾಕಷ್ಟು ಬಡತನದ ಬೇಗೆಯಲ್ಲಿ ವಿದ್ಯಾಭ್ಯಾಸ ಮಾಡುವಂತಹ ಪರಿಸ್ಥತಿ ಇದೆ. ದಯಮಾಡಿ ನಿಮ್ಮ ಮತ್ತು ಮುಂದೆ ಬರಲಿರುವ ಸರ್ಕಾರಗಳು ಈ ತರಹದ ಏಕಮುಖವಾದ ನಿರ್ಧಾರಗಳನ್ನು ತೆಗೆದುಕೂಳ್ಳುವ ಮೂದಲು ಎಲ್ಲಾ ಸಮುದಾಯಕ್ಕು ಮತ್ತು ಎಲ್ಲಾ ಜಾತಿ ಧರ್ಮಗಳ ವಿದ್ಯಾರ್ಥಿಗಳಿಗೆ ಅನ್ವಯವಾಗುವಂತೆ ನಿಮ್ಮ ಕಾಯಿದೆ ಕಾನೂನುಗಳಿರಲಿ. ವಿದ್ಯಾರ್ಥಿಗಳಿಗೆ ನೀವು ಕೂಡಲು ಬಯಸುತ್ತಿರುವ ಉಚಿತ ಬಸ್ ಪಾಸ್ ನ್ನು ದಯಮಾಡಿ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಕೂಡಬೇಕು ಎಂದು ನಮ್ಮ ಆಶಯ.

ಸಾಮಾನ್ಯ ಪ್ರಜೆಗಳ ಪರಿಸ್ಥಿತಿಯೇನು?
- Shankar Gk
ಬೇರೆ ವರ್ಗದ ವಿದ್ಯಾರ್ಥಿಗಳು ಮನುಷ್ಯರಲ್ಲವಾ? ಎಲ್ಲಾ ಗಿಮಿಕ್ ಪಾಲಿಟಿಕ್ಸ್ . ಸಂವಿಧಾನದ ಅಡಿಯಲ್ಲಿ ಕಾರ್ಯ ನಿರ್ವಹಿಸುವವರು ಎಲ್ಲರನ್ನೂ ಸಮಾನವಾಗಿ ಕಾಣಬೇಕು.
- Praveen Pavi
ಇತರ ಹಿಂದುಳಿದ ವರ್ಗಕ್ಕೆ ಸೇರಿದ ಅಸಂಖ್ಯಾತ ಬಡ ವಿದ್ಯಾರ್ಥಿಗಳು ನಿಮಗೆ ವಿಧ್ಯಾರ್ಥಿಗಳಾಗಿ ಕಾಣಲಿಲ್ಲವೇ?...ಸ್ವಾಮಿ ಮುಖ್ಯಮಂತ್ರಿಗಳೆ ಇಂದು ನೀವು ಕೂಟ್ಟಿರುವ ಹಲವಾರು ಸರ್ಕಾರಿ ಸವಲತ್ತುಗಳನ್ನು ಪಡೆದು ಪ,ಜಾತಿ ಮತ್ತು ಪ,ಪಂಗಡಗಳು ಎಲ್ಲದರಲ್ಲಿಯೂ ಅಭಿವೃದ್ಧಿ ಸಾಧಿಸಿದ್ದಾರೆ..ಇನ್ನಾದರೂ ಇತರ ಹಿಂದುಳಿದ ವರ್ಗಗಳ ಕಡೆಗೆ ಗಮನ ಹರಿಸಿ ಒಬಿಸಿ ಯಲ್ಲಿಯೂ ಕೂಡ ಸಾಕಷ್ಟು ಬಡತನದ ಬೇಗೆಯಲ್ಲಿ ವಿದ್ಯಾಭ್ಯಾಸ ಮಾಡುವಂತಹ ಪರಿಸ್ಥತಿ ಇದೆ..ದಯಮಾಡಿ ನಿಮ್ಮ ಮತ್ತು ಮುಂದೆ ಬರಲಿರುವ ಸರ್ಕಾರಗಳು ಈ ತರಹದ ಏಕಮುಖವಾದ ನಿರ್ಧಾರಗಳನ್ನು ತೆಗೆದುಕೂಳ್ಳುವ ಮೂದಲು ಎಲ್ಲಾ ಸಮುದಾಯಕ್ಕು ಮತ್ತು ಎಲ್ಲಾ ಜಾತಿ ಧರ್ಮಗಳ ವಿದ್ಯಾರ್ಥಿಗಳಿಗೆ ಅನ್ವಯವಾಗುವಂತೆ ನಿಮ್ಮ ಕಾಯಿದೆ ಕಾನೂನುಗಳಿರಲಿ...ವಿದ್ಯಾರ್ಥಿಗಳಿಗೆ ನೀವು ಕೂಡಲು ಬಯಸುತ್ತಿರುವ ಉಚಿತ ಬಸ್ ಪಾಸ್ ನ್ನು ದಯಮಾಡಿ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಕೂಡಬೇಕು ಎಂದು ನಮ್ಮ ಆಶಯ.
- Mallayya Mathapathi
ಮುಖ್ಯಮಂತ್ರಿ ಗಳಾಗಿ ನೀವೇ ಜಾತ್ಯತೀತತೆ ಬಿಟ್ಟು ಜಾತೀಯತೆ ಮಾಡಿದ್ರೆ ಸಾಮಾನ್ಯ ಪ್ರಜೆಗಳ ಪರಿಸ್ಥಿತಿ ಏನಾಗಬೇಕು ಸ್ವಾಮಿ? ಇಂದಿನ ಭಾರತದಲ್ಲಿ ಎಲ್ಲರೂ ಬಸ್ ನಲ್ಲಿ ಓಡಾಡುವಷ್ಟು ಅನುಕೂಲವಾಗಿದ್ದಾರೆ. ನ್ಯಾಯವಾಗಿ ಜನಗಣತಿ ಮಾಡಿ ಯಾರು ಬಿ.ಪಿ.ಎಲ್ ಕಾರ್ಡ್ ಹೊಂದಿದ್ದಾರೋ ಅಂಥವರಿಗೆ ಈ ಸೇವೆ ಕೊಡಿ.

ಬೇಧ ಭಾವ ಬಿತ್ತುವುದು ಒಳ್ಳೆಯದಲ್ಲ
- Vidyarani Dyamankar
ಎಲ್ಲಾ sc st ಯವರು ಬಡವರಲ್ಲ. ಹಾಗೆನೆ ಎಲ್ಲ obc/general category ಯವರು ಶ್ರೀಮಂತ ರಲ್ಲ. ದಯವಿಟ್ಟು ಸೌಲಭ್ಯಗಳನ್ನು ಬಡವರಿಗೆ ಕೊಡಿ. ಪರಿಶಿಷ್ಟ ಜಾತಿಯಲ್ಲಿಯ ಎಷ್ಟೋ ಜನಾ ಆರ್ಥಿಕವಾಗಿ ತುಂಬಾ ಮುಂದೆ ಇದ್ದಾರೆ.
- Sharanayya Hirematt
ಎಲ್ಲಾ ವಿದ್ಯಾಥಿ೯ಗಳಿಗೆ ಉಚಿತ ಕೊಡಿ , ಮಕ್ಕಳ್ಳಲ್ಲಿ ಭೇದ ಭಾವ ಮಾಡೋದು ಬೇಡ , ಅದು ಒಳ್ಳೆಯ ಬೆಳವಣಿಗೆ ಅಲ್ಲ . ಉಚಿತ ಬಸ್ ಪಾಸ್ ಕೊಡೊದು ಒಳ್ಳೆಯ ಬೆಳವಣಿಗೆ.
- Madenur Prashantha
ಅತ್ತ ಕೇಂದ್ರ ಸರ್ಕಾರ ಧರ್ಮದ ವಿಷಯದಲ್ಲಿ ದೇಶವನ್ನ ಒಡೆಯುತಿದೆ. ಇತ್ತ ರಾಜ್ಯ ಸರ್ಕಾರ ಜಾತಿ-ಜಾತಿ ಗಳ ಮಧ್ಯ ವಿಷ ಬೀಜ ಬಿತ್ತುತ್ತಿದೆ.
ಇವೆಲ್ಲವನ್ನ ಮೀರಿ ಅಭಿವೃದ್ಧಿ ಪರ ಪ್ರಾದೇಶಿಕ ಪಕ್ಷದ ಅನಿವಾರ್ಯತೆ ನಮ್ಮ ಕರ್ನಾಟಕಕ್ಕೆ ಇದೆ.

ಇನ್ಯೂ ಯಾವ್ಯಾವು ಬಾಕಿ ಇದಾವೆ, ಅದೆಲ್ಲವನ್ನೂ ಕೊಟ್ಬಿಡಿ
- Mallikarjun Arjun
ಈ ರೀತಿ ಮಾಡಿ ವಿದ್ಯಾರ್ಥಿಗಳಲ್ಲಿ ಜಾತಿ ಯೆಂಬ ವಿಷದ ಬೀಜ ಬಿತ್ತುವುದರಿಂದ ಸಮಾನತೆಯನ್ನು ತರಲು ಸಾದ್ಯವೇ? ಅಂಬೇಡ್ಕರ್ ಅವರ ಜಾತ್ಯಾತೀತ ತತ್ವ, ಸಮಾನತೆಯನ್ನು ಕಾಣಲು ಸಾಧ್ಯವಿದೆಯೆ?
- Sunil Ds
ಸಿದ್ದರಾಮಯ್ಯನವರೆ, ನಿವೇನೆ ಮಾಡಿದ್ರು ಮುಂದಿನ ಮುಖ್ಯಮಂತ್ರಿ ಆಗೋಲ್ಲ .ನಿಮಗೆ ಬರೀ ಎಸ್ಸಿ.ಎಸ್ಟಿ ವರ್ಗದಲ್ಲಿ ಮಾತ್ರ ಬಡ ವಿದ್ಯಾರ್ಥಿಗಳು ಕಾಣುತ್ತಾರೆ ,ವರ್ಷಕ್ಕೆ 500-600 ರೂ ಗಳ ಬಸ್ ಪಾಸ್ನಿಂದ ಅವ್ರಿಗೆನ್ ದೊಡ್ಡ ಅನುಕೂಲ ಆಗಲ್ಲ ವೋಟ್ ಗೋಸ್ಕರ ವಿದ್ಯಾರ್ಥಿಗಳ ವಿಚಾರದಲ್ಲು ರಾಜಕೀಯ ಮಾಡ್ತಿರಲ್ರಿ.
- Veeresh Hiremath
ನಿನ್ನ ಈ ರಾಜ್ಯದ ಮುಖ್ಯಮಂತ್ರಿ ಮಾಡಿದ್ದಕ್ಕೆ ಸಾರ್ಥಕ ಆಯಿತು ಸ್ವಾಮಿ,ಇನ್ನೂ ಯಾವ್ಯವು ಬಾಕಿ ಇದಾವೆ ಅದನ್ನೆಲ್ಲಾ ಅವರಿಗೆ ಕೊಟ್ಟು ಬಿಡು,ಕಾಂಗ್ರೆಸ್ ಪಾಪದ ಕೊಡ ತುಂಬಿದೆ ಎನ್ ಮಾಡೊಕೆ ಹಾಗುತ್ತೆ, ಇನ್ನೂ ಸ್ವಲ್ಪ ದಿನ ಕಾಯಿತಿವಿ ಸ್ವಾಮಿ, ನೀನು ಕಾಲಿಟ್ಟ ಮೇಲೆ ಇಡೀ ಕರ್ನಾಟಕಕ್ಕೆ ಬರ ಬಿದ್ದು ಬಿಡಿತು ಸ್ವಾಮಿ.