ಯಾದಗಿರಿ: ಸರ್ಕಾರಿ ಕೆಲಸ ಕೊಡಿಸುವುದಾಗಿ ಮಹಿಳೆಯಿಂದ ವಂಚನೆ
Recommended Video

Yadagiri : A lady cheated to yadagiri people
ಯಾದಗಿರಿ, ಸೆಪ್ಟೆಂಬರ್ 27: ಸರ್ಕಾರಿ ಕೆಲಸ ಕೊಡಿಸುವುದಾಗಿ ನೂರಕ್ಕೂ ಹೆಚ್ಚು ಜನರಿಗೆ ಯಾದಗಿರಿಯಲ್ಲಿ ಮಹಿಳೆಯೊಬ್ಬರು ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ.
ಜನರಿಗೆ ವಿವಿಧ ಸರ್ಕಾರಿ ಉದ್ಯೋಗ ಹಾಗೂ ಸೌಲಭ್ಯಗಳನ್ನು ಕೊಡಿಸುವುದಾಗಿ ದೇವಿಕಾ ಎಂಬ ಮಹಿಳೆ ಸಾವಿರಾರು ರೂಪಾಯಿ ಪಡೆದು ಪಂಗನಾಮ ಹಾಕಿದ್ದಾಳೆ. ಯಾದಗಿರಿಯ ಗಾಂಧಿ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ದೇವಿಕಾ ವರ್ಷದ ಹಿಂದೆಯೇ ಹಣ ಪಡೆದಿದ್ದಾರೆ. ಇತ್ತೀಚೆಗೆ ಹಣ ಕೊಟ್ಟವರು ಪದೇ ಪದೇ ಉದ್ಯೋಗ, ಸೌಲಭ್ಯ ಕೇಳಿದ್ದರಿಂದ ಬಾಡಿಗೆ ಮನೆ ಖಾಲಿ ಮಾಡಿ ನಾಪತ್ತೆಯಾಗಿದ್ದಾಳೆ.

ಯಾದಗಿರಿಯ ಹಿಂದಿನ ಡಿಸಿ ಆತ್ಮೀಯರಂತೆ: ಯಾದಗಿರಿಯ ಹಿಂದಿನ ಡಿಸಿ ಖುಷ್ಬೂ ಗೋಯಲ್ ಚೌಧರಿ ಆತ್ಮೀಯರು ಎಂದು ಹೇಳಿಕೊಂಡು ಜನರನ್ನು ಮರಳು ಮಾಡಿದ್ದಾಳೆ. ಇದೀಗ ದೇವಿಕಾ ನಾಪತ್ತೆಯಾಗುವ ಮೂಲಕ ವಂಚನೆ ಬಯಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅವರಿಗೆ ವಂಚನೆಗೊಳಗಾದವರು ದೇವಿಕಾ ವಿರುದ್ಧ ಕ್ರಮಕೈಗೊಳ್ಳುವಂತೆ ಮನವಿ ಸಲ್ಲಿಸಿದರು.












Click it and Unblock the Notifications