Foxconn Investment: ಕರ್ನಾಟಕದಲ್ಲಿ ಫಾಕ್ಸ್‌ಕಾನ್ ಭರ್ಜರಿ ಹೂಡಿಕೆ!

ಬೆಂಗಳೂರು: ಹೂಡಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಮ್ಮೆ ಬಂಪರ್ ಸಿಕ್ಕಿದೆ. ಖ್ಯಾತ ಸಂಸ್ಥೆ ಕರ್ನಾಟಕದಲ್ಲಿ ಭಾರಿ ಮೊತ್ತದ ಹೂಡಿಕೆಗೆ ಮುಂದಾಗಿದೆ. ಅಂದಹಾಗೆ ಆ್ಯಪಲ್ ಸಂಸ್ಥೆಗೆ ಹೆಚ್ಚು ಐಫೋನ್ ತಯಾರಿಸಿಕೊಡುವ ಫಾಕ್ಸ್‌ಕಾನ್ ಸಂಸ್ಥೆ (Foxconn) ಕನ್ನಡಿಗರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಹಾಗಾದರೆ ಏನದು ಸಿಹಿಸುದ್ದಿ? ಫಾಕ್ಸ್‌ಕಾನ್ ಕರ್ನಾಟಕದಲ್ಲಿ ಹೂಡಿಕೆ ಮಾಡುತ್ತಿರುವ ಹಣ ಎಷ್ಟು? ಸಂಪೂರ್ಣ ಮಾಹಿತಿ ಇಲ್ಲಿದೆ.

ಹೌದು, ಕರ್ನಾಟಕದಲ್ಲಿ ಇನ್ನೂ 2 ಘಟಕ ಸ್ಥಾಪಿಸಲು ಫಾಕ್ಸ್‌ಕಾನ್ ಸಂಸ್ಥೆ ಮುಂದಾಗಿದೆ. ಅಂದಹಾಗೆ ಐಫೋನ್​ ಕೇಸಿಂಗ್ ಭಾಗಗಳನ್ನ ತಯಾರಿಸುವ ಘಟಕ ಸೇರಿ ಚಿಪ್ ತಯಾರಿಸುವ ಉಪಕರಣಗಳ ತಯಾರಿಕೆಗೆ ಇನ್ನೊಂದು ಘಟಕವನ್ನ ಕರ್ನಾಟಕದಲ್ಲಿ ಫಾಕ್ಸ್‌ಕಾನ್ ಸಂಸ್ಥೆಯು ಸ್ಥಾಪನೆ ಮಾಡಲಿದೆ. ಇದಕ್ಕಾಗಿ ಒಂದಲ್ಲ.. ಎರಡಲ್ಲ.. ಬರೋಬ್ಬರಿ 600 ಮಿಲಿಯನ್ ಡಾಲರ್ ಅಂದರೆ ಸುಮಾರು 5000 ಕೋಟಿ ರೂಪಾಯಿ ಹೂಡಿಕೆಗೆ ಮುಂದಾಗಿದೆ. ತೈವಾನ್ ಮೂಲದ ಈ ಕಂಪನಿ ಕನ್ನಡಿಗರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಮತ್ತಷ್ಟು ಉದ್ಯೋಗ ಸ್ಥಾಪನೆಗೆ ನೆರವಾಗಲಿದೆ.

Foxconn will invest in Karnataka Worth $600 Million on Components and Chip Making Machinery

ತಮಿಳುನಾಡಿಗೂ ಬಂಪರ್ ಕೊಟ್ಟಿರುವ ಕಂಪನಿ

ಅಂದಹಾಗೆ ಫಾಕ್ಸ್‌ಕಾನ್ ಸಂಸ್ಥೆಯ ಲೆಕ್ಕಾಚಾರವೇ ಬೇರೆಯಾಗಿದೆ. ಭವಿಷ್ಯದ ಬಗ್ಗೆ ಭರ್ಜರಿ ಪ್ಲ್ಯಾನ್ ಮಾಡಿರುವ ಸಂಸ್ಥೆ ಭಾರತದಲ್ಲಿ ಭಾರಿ ಪ್ರಮಾಣದಲ್ಲಿ ಹೂಡಿಕೆಗೆ ಮುಂದಾಗಿದೆ. ಈಗಾಗಲೇ ಫಾಕ್ಸ್‌ಕಾನ್ ಸಂಸ್ಥೆ ತಮಿಳುನಾಡಿನಲ್ಲಿ ಐಫೋನ್ ಅಸೆಂಬ್ಲಿಂಗ್ ಯೂನಿಟ್ ಅನ್ನ ಹೊಂದಿದೆ. ಚೆನ್ನೈ ಫ್ಯಾಕ್ಟರಿ ಜೊತೆ ಇನ್ನೆರಡು ಘಟಕಗಳನ್ನ ಸ್ಥಾಪಿಸುವ ಯೋಚನೆಯಲ್ಲಿದೆ. ಎಲೆಕ್ಟ್ರಾನಿಕ್ ಬಿಡಿಭಾಗಗಳ ತಯಾರಿಕಾ ಘಟಕವನ್ನು ಸ್ಥಾಪಿಸಲಿದ್ದು ಅದಕ್ಕೆ 195 ಮಿಲಿಯನ್ ಡಾಲರ್ ಬಂಡವಾಳ ಹೂಡಲಿದೆ. ಈ ಘಟಕದಿಂದ 6,000 ಮಂದಿಗೆ ಉದ್ಯೋಗ ಸಿಗಲಿದ್ದು, ಇದೀಗ ಕರ್ನಾಟಕದಲ್ಲೂ ಭಾರಿ ಮೊತ್ತದ ಹೂಡಿಕೆ ಮಾಡುತ್ತಿದೆ.

ಕರ್ನಾಟಕಕ್ಕೆ ಏನೆಲ್ಲಾ ಲಾಭ ಆಗುತ್ತೆ?

ಈಗಾಗಲೇ ನೆರೆಯ ತೆಲಂಗಾಣದಲ್ಲಿ ಕೂಡ ಫಾಕ್ಸ್‌ಕಾನ್ ಸಂಸ್ಥೆ ಹೂಡಿಕೆಗೆ ಮುಂದಾಗಿದೆ. ಫಾಕ್ಸ್‌ಕಾನ್ ಹೈದರಾಬಾದ್‌ನಲ್ಲೂ 1 ಘಟಕ ತೆರೆಯಲಿದೆ. ಬೆಂಗಳೂರಿನಲ್ಲಿ ಈಗ 2 ಘಟಕ ಬರುತ್ತಿರುವುದು ಗಮನ ಸೆಳೆದಿದೆ. ಅಷ್ಟಕ್ಕೂ ಐಫೋನ್ ಬಿಡಿಭಾಗ ತಯಾರಿಕೆಗೆ ನಿರ್ಮಿಸುವ ಘಟಕಕ್ಕೆ 350 ಮಿಲಿಯನ್ ಡಾಲರ್ ವಿನಿಯೋಗವಾಗುವ ಸಾಧ್ಯತೆ ಇದೆ. ಈ ಘಟಕದಿಂದಾಗಿ 12,000 ಜನರಿಗೆ ಉದ್ಯೋಗ ಸಿಗಬಹುದು. ಫಾಕ್ಸ್‌ಕಾನ್ ಈಗಾಗಲೇ ದೊಡ್ಡಬಳ್ಳಾಪುರದಲ್ಲಿ 14,000 ಕೋಟಿ ರೂಪಾಯಿ ಮೊತ್ತದ ಐಫೋನ್ ತಯಾರಿಕಾ ಘಟಕಗಳನ್ನು ಸ್ಥಾಪಿಸುತ್ತಿದೆ. ಹೆಚ್ಚುವರಿಯಾಗಿ ಈಗ 2 ಹೊಸ ಯೋಜನೆ ಆರಂಭಿಸಲಿದೆ. ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಟ್ವೀಟ್ ಮೂಲಕ ಈ ಸಂತಸದ ಸುದ್ದಿ ಹಂಚಿಕೊಂಡಿದ್ದಾರೆ.

Foxconn will invest in Karnataka Worth $600 Million on Components and Chip Making Machinery

ಒಟ್ನಲ್ಲಿ ಕರ್ನಾಟಕದಲ್ಲಿ ಮತ್ತೆ ಭಾರಿ ಪ್ರಮಾಣದ ಹೂಡಿಕೆಗೆ ವಿದೇಶಿ ಸಂಸ್ಥೆಗಳು ಇದೀಗ ಮುಂದೆ ಬರುತ್ತಿರುವುದು ಸಂತಸದ ಸುದ್ದಿ. ಆದರೆ ಸ್ಥಳೀಯರಿಗೆ ಉದ್ಯೋಗ ಕೊಡಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು. ಹಾಗೂ ಸ್ಥಳೀಯರಿಗೆ ಮೊದಲ ಆದ್ಯತೆ ನೀಡುವ ಮೂಲಕ ಕನ್ನಡಿಗರನ್ನ ಬೆಳೆಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ಆದರೆ ಈ ಒತ್ತಾಯ ಹಾಗೂ ಬೇಡಿಕೆಗೆ ಯಾವ ರೀತಿ ಮನ್ನಣೆ ಸಿಗಲಿದೆ ಅನ್ನೋದನ್ನ ಕಾದು ನೋಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+