Manmohan Singh: ಮನಮೋಹನ್ ಸಿಂಗ್ ಇನ್ನಿಲ್ಲ... ಮಾಜಿ ಪ್ರಧಾನಿ ನಿಧನಕ್ಕೆ ಕಂಬನಿ ಮಿಡಿದ ಭಾರತ...
ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಇನ್ನಿಲ್ಲ ಎಂಬ ಸುದ್ದಿ ಶತಕೋಟಿ ಭಾರತೀಯರಿಗೆ ಬರಸಿಡಿಲು ಬಡಿದಂತೆ ಆಗಿಸಿದೆ. ಜಾಗತಿಕ ಮಟ್ಟದ ಅತ್ಯುತ್ತಮ ಅರ್ಥಶಾಸ್ತ್ರಜ್ಞರಾಗಿ & ಶಿಕ್ಷಣ ತಜ್ಞರಾಗಿ ಗುರುತಿಸಿಕೊಂಡಿದ್ದ ಮನಮೋಹನ್ ಸಿಂಗ್ ಅವರು ಜಾಗತಿಕ ಮಟ್ಟದ ಅತ್ಯುತ್ತಮ ಪ್ರಶಸ್ತಿಗಳನ್ನ ಕೂಡ ಪಡೆದಿದ್ದರು. ಸತತ 10 ವರ್ಷಗಳ ಕಾಲ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು ಮನಮೋಹನ್ ಸಿಂಗ್ ಅವರು.
2004 ರಿಂದ 2014ರ ತನಕ ಭಾರತದ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು, ಇಡೀ ಜಗತ್ತು ಕಂಡ ಅತ್ಯುತ್ತಮ ನಾಯಕರ ಪೈಕಿ ಒಬ್ಬರು ಎನ್ನಬಹುದು. ಆರ್ಥಿಕ ತಜ್ಞರಾಗಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಭಾರತ ಅಡಳಿತ ವ್ಯವಸ್ಥೆಯಲ್ಲಿ ಭಾರಿ ದೊಡ್ಡ ಬದಲಾವಣೆ ತಂದ ಅಧಿಕಾರಿ ಕೂಡ ಆಗಿದ್ದರು. ಈ ರೀತಿ ಮನಮೋಹನ್ ಸಿಂಗ್ ಅವರು ಅಧಿಕಾರಿಯಾಗಿ, ಭಾರತದ ಆಡಳಿತ ಸುಧಾರಣೆ ಮಾಡಿ ನಂತರ ಸತತ 10 ವರ್ಷಗಳ ಕಾಲ ಭಾರತದ ಪ್ರಧಾನಿಯಾಗಿಯೂ ಆಡಳಿತ ನಡೆಸಿದರು.

ಮನಮೋಹನ್ ಸಿಂಗ್ ಅವರಿಗೆ ಏನಾಗಿತ್ತು?
ಭಾರತ ಕಂಡ ಶ್ರೇಷ್ಠ ನಾಯಕರ ಸಾಲಿಗೆ ಮನಮೋಹನ್ ಸಿಂಗ್ ಅವರು ಕೂಡ ಸೇರಿದ್ದು, ವಯೋ ಸಹಜ ಕಾಯಿಲೆಗಳಿಂದ ಅವರು ಬಳಲುತ್ತಿದ್ದರು. ಹಾಗೇ, ಮನಮೋಹನ್ ಸಿಂಗ್ ಅವರಿಗೆ ಸೂಕ್ತ ಚಿಕಿತ್ಸೆಯನ್ನು ಕೂಡ ನೀಡಲಾಗುತ್ತಿತ್ತು. ಆದರೆ ದಿಢೀರ್ ಇಂತಹ ಬೆಳವಣಿಗೆ ನಡೆದು ಹೋಗಿದೆ. ಮನಮೋಹನ್ ಸಿಂಗ್ ಅವರು ಇಂದು ಸಂಜೆ ದಿಢೀರ್ ದೆಹಲಿ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಮಯದಲ್ಲಿ ಸಾಕಷ್ಟು ಆತಂಕ ನಿರ್ಮಾಣ ಆಗಿತ್ತು.
ತುರ್ತುನಿಗಾ ಘಟಕದಲ್ಲಿ ಸಂಜೆಯಿಂದಲೂ ಮನಮೋಹನ್ ಸಿಂಗ್ ಅವರಿಗೆ ಚಿಕಿತ್ಸೆಯನ್ನು ನೀಡಲಾಗಿತ್ತು. ಆದರೆ ಅಂತಿಮವಾಗಿ ಚಿಕಿತ್ಸೆ ಫಲಿಸದೆ ಮನಮೋಹನ್ ಸಿಂಗ್ ಅವರು ಕೆಲ ನಿಮಿಷಗಳ ಹಿಂದೆ ಕೊನೆಯುಸಿರು ಎಳೆದಿರುವ ಮಾಹಿತಿ ಹೊರಬಿದ್ದಿದೆ. ಈ ಸುದ್ದಿ ಇದೀಗ ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಸಂಚಲನ ಸೃಷ್ಟಿ ಮಾಡಿದೆ. ಯಾಕಂದ್ರೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಜಾಗತಿಕ ಆರ್ಥಿಕತೆ ಸುಧಾರಣೆಯಲ್ಲಿ ಕೂಡ ಭಾರಿ ದೊಡ್ಡ ಪಾತ್ರವನ್ನು ವಹಿಸಿದ್ದರು.
ಭಾರತದ ಆರ್ಥಿಕತೆಗೆ ಭದ್ರ ಬುನಾದಿ!
1992ರ ಸಮಯದಲ್ಲೇ ಭಾರತದ ಆರ್ಥಿಕತೆಗೆ ಭದ್ರ ಬುನಾದಿ ಹಾಕಿಕೊಟ್ಟಿದ್ದರು ಮನಮೋಹನ್ ಸಿಂಗ್ ಅವರು. ಭಾರತೀಯರ ಅಭಿವೃದ್ಧಿಗೆ ಶ್ರಮಿಸಿದ್ದ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು 2004 ರಿಂದ 2014ರ ತನಕ ಭಾರತದ ಪ್ರಧಾನಿಯಾಗಿ ಕೂಡ ಕೆಲಸ ಮಾಡಿ ಸಾಕಷ್ಟು ಸುಧಾರಣೆ ತಂದಿದ್ದರು. ಭಾರತದ ಆರ್ಥಿಕ ಸ್ಥಿತಿ ಕೂಡ, ಮನಮೋಹನ್ ಸಿಂಗ್‌ರ ಕಾಲದಲ್ಲಿ ಸಾಕಷ್ಟು ದೊಡ್ಡ ಸುಧಾರಣೆ ಕಂಡಿತ್ತು. ಇದೀಗ ಮನಮೋಹನ್ ಸಿಂಗ್ ಅವರ ಅಗಲಿಕೆಯು ಭಾರಿ ನೋವು ತರಿಸಿದ್ದು, ಭಾರತೀಯರು ಕಂಬನಿ ಮಿಡಿದಿದ್ದಾರೆ.












Click it and Unblock the Notifications