ಸಿದ್ದರಾಮಯ್ಯನ ವಾಶ್‌ಔಟ್ ಮಾಡದಿದ್ರೆ ರಾಷ್ಟ ರಾಜಕಾರಣಕ್ಕೂ ಕೈ ಹಾಕ್ತಾರೆ ಎಂಬ ಭೀತಿ ಬಿಜೆಪಿಗೆ ಇದೆ : ಗೌರಿಶಂಕರ್

ತುಮಕೂರು,ಆಗಸ್ಟ್‌ 20: ಇಡೀ ದೇಶದಲ್ಲೇ ರಾಷ್ಟ್ರ ನಾಯಕರಾಗಿ, ಅಹಿಂದ ನಾಯಕರಾಗಿ ಸಿ.ಎಂ ಸಿದ್ದರಾಮಯ್ಯ ಹೊರ ಹೊಮ್ಮುತ್ತಿದ್ದಾರೆ. ಎಲ್ಲೋ ಒಂದು ಕಡೆ ಸಿದ್ದರಾಮಯ್ಯ ಅವರನ್ನ ಈಗಲೇ ವಾಶ್‌ಔಟ್ ಮಾಡದೇ ಹೋದ್ರೆ ಕರ್ನಾಟಕದಲ್ಲಿ ಮಾತ್ರವಲ್ಲ. ರಾಷ್ಟ ರಾಜಕಾರಣಕ್ಕೂ ಕೈ ಹಾಕ್ತಾರೆ ಎಂಬ ಭಯ ಬಿಜೆಪಿಗೆ ಇದೆ. ಹಾಗಾಗಿಯೇ, ಸಿದ್ದರಾಮಯ್ಯ ಅವರನ್ನ ಬಿಜೆಪಿ ಟಾರ್ಗೆಟ್ ಮಾಡ್ತಿದೆ ಅಂತಾ ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಡಿ.ಸಿ ಗೌರಿಶಂಕರ್ ಗಂಭೀರ ಆರೋಪ ಮಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ ವಿಚಾರದ ವಿರುದ್ಧ ತುಮಕೂರಿನ ಹೆಬ್ಬೂರಿನಲ್ಲಿ ಪ್ರತಿಭಟನೆ ನಡೆಸಿ, ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಡಿ.ಸಿ ಅವರಿಗೆ ಮನವಿ ಪತ್ರ ಸಲ್ಲಿಕೆ ನಂತರ ಸುದ್ದಿಗಾರರೊಂದಿಗೆ ಗೌರಿಶಂಕರ್ ಮಾತನಾಡಿ, ಕೆಪಿಸಿಸಿ ಅಧ್ಯಕ್ಷರ ಆದೇಶದ ಮೇರೆಗೆ ಸೋಮವಾರ ಪ್ರತಿಭಟನೆ ಕೈಗೊಂಡಿದ್ದೇವೆ. ಪಾರದರ್ಶಕ ಅಡಳಿತ ನಡೆಸುವ ಸಿದ್ದರಾಮಯ್ಯ ಅವರಿಗೆ ಸಮಸ್ಯೆ ಆಗಿದೆ. ಹಾಗಾಗಿ, ರಾಜ್ಯಪಾಲರು ಕೊಟ್ಟಂತಹ ಪ್ರಾಸಿಕ್ಯೂಷನ್ ಕಾನೂನು ಹಾಗೂ ಸಂವಿಧಾನಕ್ಕೆ ವಿರುದ್ಧ ಆಗಿದೆ. ಜಿಲ್ಲಾಧಿಕಾರಿ ಮೂಲಕ ಮನವಿ ಪತ್ರ ಕೊಡುವ ಮೂಲಕ ರಾಜ್ಯಪಾಲರನ್ನ ವಾಪಾಸ್ ಕರೆಸಿಕೊಳ್ಳಿ ಅಂತಾ ಆಗ್ರಹಿಸಿದ್ದೇವೆ ಎಂದು ಗೌರಿಶಂಕರ್ ತಿಳಿಸಿದರು.

Former MLA DC Gowrishankar Lashed Out At The BJP

ಸಿದ್ದರಾಮಯ್ಯ ಅವರ ಕೇಸ್ ನೋಡಿದ್ರೆ ಸ್ಕೂಲ್‌ನ ಮಕ್ಕಳಿಗೂ ಸಹ ಗೊತ್ತಾಗ್ತಿದೆ. ಉದ್ದೇಶಪೂರ್ವಕವಾಗಿ ಹಾಗೂ ರಾಜಕೀಯ ಒತ್ತಡ ಇಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಟಾರ್ಗೆಟ್ ಮಾಡಿದ್ದಾರೆ ಅಂತಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಕೇವಲ ಅಹಿಂದ ನಾಯಕ ಅಷ್ಟೇ ಅಲ್ಲ. ಎಲ್ಲಾ ಸಮಾಜದವರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ‌ನಾಯಕ. ಅವರಿಗೆ ಅನ್ಯಾಯ ಆಗ್ತಿದೆ ಅಂತಾ ಗೊತ್ತಿದ್ರೂ ನೋಡಿಕೊಂಡು ಸುಮ್ಮನಿರಬೇಕಾ..? ಸಾಧ್ಯವಿಲ್ಲ. ಬದಲಾಗಿ ನಾವೂ ಕೂಡ ಹೋರಾಟ ಮಾಡ್ತೇವೆ ಅಂತಾ ಎಚ್ಚರಿಕೆ ನೀಡಿದರು.

ಪಕ್ಷಪಾತ ಮಾಡೋ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಿ: ಖಂಡ್ರೆ

ಪಕ್ಷಪಾತ ಮಾಡೋ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಿ ಎಂದು ಸಚಿವ ಈಶ್ವರ್ ಖಂಡ್ರೆ ಆಗ್ರಹಿಸಿದರು. ಪ್ರತಿಪಕ್ಷ ನಾಯಕರ ವಿರುದ್ಧ ಪುರಾವೆ ಇವೆ. ಲೋಕಾಯುಕ್ತ ಸಂಸ್ಥೆಯವರೇ ತನಿಖೆ ಮಾಡಿದ್ದರು. ಮೇಲ್ನೋಟಕ್ಕೆ ಆರೋಪ ಇದೆ ಅಂದಿದ್ದರು. ಆದರೆ ಪ್ರಾಸಿಕ್ಯೂಶನ್ ಗೆ ಅನುಮತಿ ಕೊಟ್ಟಿಲ್ಲ ಎಂದರು. ಹೀಗಾಗಿ ಪಕ್ಷಪಾತ ಮಾಡುವ ರಾಜ್ಯಪಾಲರನ್ನ ವಾಪಸ್ ಕರೆಸಿಕೊಳ್ಳಬೇಕು. ಅಥವಾ ರಾಜ್ಯಪಾಲರು ತಕ್ಷಣ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಡಲು ಕ್ರಮವಹಿಸಬೇಕು ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+