ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದರಾಮಯ್ಯಗೆ ಮೋದಿಯವರ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ, ಅವರೊಬ್ಬ ಅಯೋಗ್ಯ: ಈಶ್ವರಪ್ಪ ಕಿಡಿ

|
Google Oneindia Kannada News

ರಾಯಚೂರು, ಜನವರಿ 12: ಮೋದಿಯವರ ಬಗ್ಗೆ ಮಾತನಾಡುವ ಯೋಗ್ಯತೆ ಸಿದ್ದರಾಮಯ್ಯ ಇಲ್ಲ, ಅವರೊಬ್ಬ ಅಯೋಗ್ಯ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಮಕರ ಸಂಕ್ರಾಂತಿ ವಿಶೇಷ ಪುಟ

ಈ ಕುರಿತು ನಗರದ ಪ್ರವಾಸಿ ಮಂದಿರದಲ್ಲಿ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡುತ್ತಿರುವ ವಿಚಾರಕ್ಕೆ ಟೀಕೆ ಮಾಡಿದ ಸಿದ್ದರಾಮಯ್ಯ ವಿರುದ್ದ ವಾಗ್ದಳಿ ನಡೆಸಿದ ಈಶ್ವರಪ್ಪ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವವೇ ಮೋದಿಯನ್ನು ನಾಯಕನೆಂದು ಒಪ್ಪಿಕೊಂಡಿದ್ದು, ದೇಶದ ಅಭಿವೃದ್ದಿ ಕಡೆ ಸಾಗುತ್ತಿದೆ. ಇಂತಹವನ್ನು ಟೀಕೆ ಮಾಡಿದರೆ, ನಾನು ನಾಯಕನೆಂದು ಹೇಳುವುದಕ್ಕೆ ಮಾತನಾಡುತ್ತಾರೆ. ಸೂರ್ಯನಿಗೆ ಉಗಿದರೆ ತಾವೊಬ್ಬ ದೊಡ್ಡ ಜನನಾಯಕ ಎನಿಸಿಕೊಳ್ಳುತ್ತೇನೆ ಎನ್ನುವ ಭ್ರಮಲೋಕದಲ್ಲಿದ್ದಾರೆ. ಆದರೆ ಸೂರ್ಯನಿಗೆ ಉಗುಳಿದ ಉಗುಳು ತಮ್ಮ ಮೇಲೆಯೇ ಬೀಳುತ್ತದೆ ಎನ್ನುವ ಪರಿಜ್ಞಾನ ಇಲ್ಲ ಸಹವಿಲ್ಲ ಎಂದು ವಾಗ್ದಾಳಿ ನಡೆಸಿದರು.

ಹಾಲಿ ಪರಿಷತ್ ಸದಸ್ಯ ಹೆಚ್.ವಿಶ್ವನಾಥ ಬಿಜೆಪಿ ಪಕ್ಷ ಬಿಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹೆಚ್.ವಿಶ್ವನಾಥ, ಸಿದ್ದರಾಮಯ್ಯನವರಿಗೆ ಯಾವ ಪಕ್ಷದಲ್ಲಿರು ಇರಬೇಕು ಎನ್ನುವುದಿಲ್ಲ. ಅವರಿಬ್ಬರು ಎಲ್ಲಾ ಅಧಿಕಾರ ಇರುತ್ತದೆ ಅಲ್ಲಿಗೆ ಹೋಗುತ್ತಾರೆ. ನಮ್ಮದು ಹಾಗೆ ಅಲ್ಲ, ನಮ್ಮಗೆ ಪಕ್ಷ ಎನ್ನುವುದು ಒಂದು ತಾಯಿ. ನಮ್ಮ ಸಂಘಟನೆ ನಮ್ಮಗೆ ಸಂಸ್ಕಾರ ನೀಡಿದೆ. ದೇಶದ ಅಭಿವೃದ್ದಿ ಮಾಡಬೇಕು, ಧರ್ಮವನ್ನು ರಕ್ಷಣೆ ಮಾಡಬೇಕು ಎನ್ನುವುದು ಸಿದ್ದಾಂತವಿದ್ದು, ಸಂಸ್ಕಾರವನ್ನು ಕಲಿಸಿದೆ. ಅದರಂತೆ ನಾವು ಹೋಗುತ್ತೇವೆ. ಆದರೆ ಅವರಿಗೆ ಅಧಿಕಾರಬೇಕು ಎನ್ನುವುದು ಅವರ ಸಂಸ್ಕಾರವೆಂದು ಲೇವಡಿ ಮಾಡಿದರು.

Former Minister K S Eshwarappa Slams Siddaramaiah

ಬರುವ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡುವುದಕ್ಕೆ ಅವರ ಪಕ್ಷಕ್ಕೆ ಗೊಂದಲವಿದೆ. ಹೀಗಾಗಿ ಮೊದಲು ಅವರು ಕೋಲಾರಕ್ಕೆ ನಿಲಲ್ಲಿ. ಯಾಕೆಂದ್ರೆ ಡಿ.ಕೆ.ಶಿವಕುಮಾರ ಕೋಲಾರದಿಂದ ಸ್ಪರ್ಧೆ ಮಾಡುವುದು ನನ್ನಗೆ ಗೊತ್ತಿಲ್ಲ ಅಂತಾರೆ, ಮುನಿಯಪ್ಪನವರು ಹೈಕಮಾಂಡ್ ಸೀಟು ಹೇಗೆ ಕೋಡುತ್ತಾರೆ ಎಂದು ಹೇಳಿಕೆ ನೀಡುತ್ತಾರೆ ಅಲ್ಲದೇ ನಾನೇ ಅಭ್ಯರ್ಥಿಯೆಂದು ಘೋಷಣೆ ಮಾಡಿಕೊಂಡರೆ ಮುಗಿಯುತ್ತಾ, ಇದರಿಂದ ಕಾಂಗ್ರೆಸ್ ನಾಯಕರಲ್ಲಿ ಗೊಂದಲವಿದ್ದು, ಸಿದ್ದರಾಮಯ್ಯನವರು ಮೊದಲು ಸ್ಪರ್ಧೆ ಮಾಡಲಿ ನೋಡೋಣ ಎಂದರು.

ಇನ್ನೂ ಪದೇ ಪದೇ ಕ್ಷೇತ್ರದ ಬಲಾವಣೆ ಮಾಡುವ ವಿಚಾರಕ್ಕೆ ಪ್ರಕ್ರಿಯೆ ಮಾಡಿದವರು, ನಿಜವಾದ ಜನನಾಯಕ ತಾವು ಸ್ಪರ್ಧೆ ಮಾಡಿದ ಕ್ಷೇತ್ರದಿಂದ ಆಯ್ಕೆ ಮಾಡಿದ ಬಳಿಕ ಅಲ್ಲಿ ಅಭಿವೃದ್ಧಿ ಮಾಡಿ ಕೆಲಸ ಮಾಡಿ ಚುನಾವಣೆಗೆ ಹೋಗಬೇಕು. ಆದರೆ ಪದೆ ಪದೇ ಕ್ಷೇತ್ರ ಬದಲಾವಣೆಗೊಳಿಸುವುದು ನಿಜವಾದ ನಾಯಕನ ಲಕ್ಷಣವಲ್ಲ. ಯಾಕೆಂದರೆ ಚಾಮುಂಡೇಶ್ವರಿ ಕ್ಷೇತ್ರದಿಂದ ಸೋತರು, ಈಗ ಬಾದಾಮಿ ಕ್ಷೇತ್ರದಲ್ಲಿ ಅಲ್ಲಿ ಕಳೆದ ಬಾರಿ ಗೆದ್ದರು, ಈ ಬಾರಿ ಸೋಲುವ ಭೀತಿ ಎದುರಾಗಿರುವುದ್ದರಿಂದ ಕೋಲಾರಕ್ಕೆ ಹೋಗುವುದಾಗಿ ಹೇಳುತ್ತಿದ್ದಾರೆ. ಅಲ್ಲದೇದೆ. ಈ ರೀತಿ ಕ್ಷೇತ್ರಗಳನ್ನು ಬದಲಿಸುವುದು ನಾಯಕನ ಲಕ್ಷಣವಲ್ಲ. ಚಾಮುಂಡೇಶ್ವರಿಯಲ್ಲಿ ಸೋತರು. ಈಗ ಬದಾಮಿಯಲ್ಲಿ ಸೋಲುವ ಭೀತಿ ಎದುರಾಗಿದೆ. ಹೀಗಾಗಿ ಕೋಲಾರಕ್ಕೆ ಹೋಗುತ್ತಿದ್ದಾರೆ ಎಂದರು.

Former Minister K S Eshwarappa Slams Siddaramaiah

ಸ್ಯಾಂಟ್ರೋ ರವಿ ವಿಚಾರವಾಗಿ ಮಾತನಾಡಿ, ಸ್ಯಾಂಟ್ರೊ ರವಿ ಪ್ರಕರಣದ ತನಿಖೆ ನಡೆಯುತ್ತಿದೆ. ಕಳ್ಳ ಸಾಕ್ಷಿ ಸಮೇತವಾಗಿ ಸಿಕ್ಕ ಮೇಲೆಯೇ ನಂತರದಲ್ಲಿಯೇ ಯಾರು ಆರೋಪಿಗಳು ಎನ್ನುವುದು ತಿಳಿಯುತ್ತದೆ. ಕಾಂಗ್ರೆಸ್ ಪಕ್ಷ ರಾಷ್ಟ್ರೀಯ ಪಕ್ಷವಾಗಿ ಉಳಿದಿಲ್ಲ. ಅದೊಂದು ಪ್ರಾದೇಶಿಕ ಪಕ್ಷದ ಪರಿಸ್ಥಿತಿಗೆ ಬರುತ್ತಿದ್ದು, ದೇಶದಲ್ಲಿ, ರಾಜ್ಯದಲ್ಲಿ ವಿಪಕ್ಷವಾಗಿ ಇರಲು ಸಹ ಅರ್ಹತೆಯಿಲ್ಲದಂತೆ ಆಗಿದೆ. ಕನಿಷ್ಠ ಪಕ್ಷ ವಿಪಕ್ಷದಲ್ಲಿರಲು ಇಂಥ ಯಾತ್ರೆಗಳನ್ನು ಮಾಡಬೇಕು ಎನ್ನುವ ಸ್ಥಿತಿಗೆ ಬಂದಿದೆ ಎಂದರು.

English summary
Siddaramaiah is not fit to talk about Modi says Former Minister K S Eshwarappa,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X