K. Shivaram: ದಲಿತ ಅಂತಾ ಬೆಳೆಸಲಿಲ್ಲ..ಬಳಸಿಕೊಂಡರು: ವಾಣಿ ಶಿವರಾಂ ಕಾಂಗ್ರೆಸ್‌ ಸೇರಿದ್ಯಾಕೆ?

ಬೆಂಗಳೂರು, ಏಪ್ರಿಲ್‌ 09: ಇತ್ತೀಚಿಗಷ್ಟೆ ನಿಧನರಾದ ನಟ, ರಾಜಕಾರಣಿ, ಮಾಜಿ ಐಎಎಸ್​ ಅಧಿಕಾರಿ ಕೆ.ಶಿವರಾಮ್ ಅವರ ಪತ್ನಿ ವಾಣಿ ಕೆ.ಶಿವರಾಮ್ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್​ ಸೇರ್ಪಡೆಗೊಂಡಿದ್ದಾರೆ.

ಕಾಂಗ್ರೆಸ್‌ ಪಕ್ಷ ಸೇರ್ಪಡೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತನ್ನ ಪತಿಗೆ ಬಿಜೆಪಿ ಅನ್ಯಾಯ ಮಾಡಿದೆ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.

Former IAS officer K Shivaram Wife Vani Shivaram Lashes Out At BJP

ಕೆ. ಶಿವರಾಮ್‌ ಅವರು ಜನಪ್ರಿಯ ಅಧಿಕಾರಿಯಾಗಿ ಎಲ್ಲರ ಅಭಿಮಾನ ಗಳಿಸಿಕೊಂಡವರು. ಜನ ಸೇವೆಯನ್ನು ಇನ್ನೂ ಒಂದು ಹಂತಕ್ಕೆ ತೆಗೆದುಕೊಂಡು ಹೋಗಬೇಕು ಎಂದು ರಾಜಕೀಯಕ್ಕೆ ಹೋದವರು. ಅವರಿಗಿದ್ದಿದ್ದು ಒಂದೇ ಆಸೆ ಜನಸೇವೆ. ಹಾಗಾಗಿ ಅವರ ಮುಂದಿನ ಕನಸು, ಅವರ ಗುರಿಯನ್ನು ಹಾಗೇ ಉಳಿಸಿ ಹೊರಟು ಹೋಗಿದ್ದಾರೆ. ಅದನ್ನು ನಾನು ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ಎಂದು ವಾಣಿ ಶಿವರಾಮ್‌ ಹೇಳಿದ್ದಾರೆ.

ಕೆ. ಶಿವರಾಮ್‌ ಅವರಿಗೆ ಬಿಜೆಪಿ ಅನ್ಯಾಯ ಮಾಡಿದೆ. ಅವರನ್ನು ದುಡಿಸಿಕೊಂಡರು, ಅವರನ್ನು ಪಕ್ಷಕ್ಕಾಗಿ ಬಳಸಿಕೊಂಡರೇ ವಿನಃ ಅವರಿಗೆ ಯಾವುದೇ ಸ್ಥಾನಮಾನ ನೀಡಲಿಲ್ಲ. ಒಬ್ಬ ದಲಿತ ಅಂತಾ ಅವರನ್ನು ಬೆಳೆಸಲಿಲ್ಲ. ಬರಿ ಬಳಸಿಕೊಂಡರು. ಹಾಗಾಗಿ ಕರ್ನಾಟಕ ಜನರಲ್ಲಿ ನಾನು ಮನವಿ ಮಾಡಿಕೊಳ್ಳುತ್ತೇನೆ. ಕೆ. ಶಿವರಾಮ್‌ ಅವರನ್ನು ಬಳಸಿಕೊಂಡು ಯಾವುದೇ ಸ್ಥಾನಮಾನ ನೀಡದ ಬಿಜೆಪಿಯನ್ನು ತಿರಸ್ಕರಿಸಿ, ಕಾಂಗ್ರೆಸ್‌ ಅನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದ್ದಾರೆ.

Former IAS officer K Shivaram Wife Vani Shivaram Lashes Out At BJP

ಕಾಂಗ್ರೆಸ್‌ ಪಕ್ಷ ನನ್ನನ್ನು ಗುರುತಿಸಿ, ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಹೀಗಾಗಿ ಕಾಂಗ್ರೆಸ್‌ ಪಕ್ಷವನ್ನು ಬೆಳೆಸಬೇಕು. ಬೆಂಬಲಿಸಬೇಕು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸಬೇಕು ಎಂದು ಬೇಡಿಕೊಳ್ಳುತ್ತೇನೆ. ಮುಂದಿನ ದಿನಗಳಲ್ಲಿ ನಮ್ಮ ಯಜಮಾನರಿಗಾದ ಅನ್ಯಾಯ ಮುಂದೆ ಯಾವ ನಾಯಕರಿಗೂ ಆಗಬಾರದು.

ಅವರ ಆಸೆ ಕನಸುಗಳನ್ನು ನನಾಗಿಸಬೇಕು ಎಂದು ನಾನು ನನ್ನ ಬಂಧುಗಳಲ್ಲಿ ಕೇಳಿಕೊಂಡೆ. ಅವರೆಲ್ಲಾ ಈಗ ನನ್ನ ಜೊತೆ ಇದ್ದಾರೆ. ನನ್ನ ಶಕ್ತಿಯಾಗಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು ನನ್ನ ಪತಿಯ ಕನಸುಗಳನ್ನು ನೆರವೇರಿಸುವ ಭರವಸೆ ನೀಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಧೈರ್ಯ ತುಂಬಿದ್ದಾರೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+