ಹೈಕಮಾಂಡ್ ಅಂಗಣದಲ್ಲಿ ಸಿದ್ದರಾಮಯ್ಯಗೆ ಸಿಗುತ್ತಿದ್ದ 'ರಾಜ ಮರ್ಯಾದೆ' ಕಮ್ಮಿ ಆಯಿತೇ?

ಕಳೆದ ವಾರ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ದೆಹಲಿಗೆ ಹೋಗಿದ್ದರು. ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡುವ ಮೂಲ ಉದ್ದೇಶದಿಂದ ಸಿದ್ದರಾಮಯ್ಯ ರಾಜಧಾನಿಗೆ ತೆರಳಿದ್ದರು.

ಹೇಗೂ, ದೆಹಲಿಯಲ್ಲೇ ಇರುವುದರಿಂದ, ಇಡಿ ಬಂಧನದಲ್ಲಿರುವ ಡಿ.ಕೆ.ಶಿವಕುಮಾರ್ ಅವರನ್ನೂ ಮಾತನಾಡಿಸಲು ಹೋಗಿದ್ದರು. ಆದರೆ, ಡಿಕೆಶಿಯವರನ್ನು ಭೇಟಿ ಮಾಡಲು ಇಡಿ ಅಧಿಕಾರಿಗಳು ಅವಕಾಶ ನೀಡಿರಲಿಲ್ಲ. ಅದಕ್ಕೆ, ಅಲ್ಲಿಂದಲೇ ಟ್ವೀಟ್ ಮೂಲಕ ಸಿದ್ದರಾಮಯ್ಯ ಸಿಟ್ಟು ಹೊರಹಾಕಿದ್ದರು.

ಇನ್ನೊಂದೆಡೆ, ಎರಡು ದಿನ ಸಿದ್ದರಾಮಯ್ಯ ದೆಹಲಿಯಲ್ಲಿ ಇದ್ದರೂ, ಸೋನಿಯಾ ತಮ್ಮ ಭೇಟಿಗೆ ಸಮಯ ನೀಡಿರಲಿಲ್ಲ. ಹಾಗಾಗಿ, ಬಂದ ದಾರಿಗೆ ಸುಂಕ ಇಲ್ಲ ಎನ್ನುವಂತೆ, ದೆಹಲಿಯಿಂದ ಸಿದ್ದರಾಮಯ್ಯ ವಾಪಸ್ ಆಗಿದ್ದರು.

ಆದರೆ, ಮಂಗಳವಾರ (ಸೆ 17) ರಾಜ್ಯದ ಮಾಜಿ ಡಿಸಿಎಂ, "ಮೂಲ ಕಾಂಗ್ರೆಸ್ಸಿಗ" ಡಾ. ಪರಮೇಶ್ವರ್ ಅವರನ್ನು ಸೋನಿಯಾ ಭೇಟಿಯಾಗಿದ್ದಾರೆ. ಹಾಗಾಗಿ, ಸಿದ್ದರಾಮಯ್ಯ ಅವರನ್ನು ಭೇಟಿಯಾಗದ ಸೋನಿಯಾ, ಪರಮೇಶ್ವರ್ ಅವರನ್ನು ಯಾಕೆ ಭೇಟಿಯಾದರು ಎನ್ನುವುದೀಗ ಕಾಂಗ್ರೆಸ್ ವಲಯದಲ್ಲಿ ಚರ್ಚೆಯ ವಿಷಯವಾಗಿ ಕೂತಿದೆ.

ಪದಾಧಿಕಾರಿಗಳು, ಸಮಿತಿಯ ಸದಸ್ಯರ ಹೆಸರುಗಳನ್ನು ಅಪ್ಡೇಟ್ ಮಾಡಿ ಕಳುಹಿಸಲು ಸೂಚನೆ

ಪದಾಧಿಕಾರಿಗಳು, ಸಮಿತಿಯ ಸದಸ್ಯರ ಹೆಸರುಗಳನ್ನು ಅಪ್ಡೇಟ್ ಮಾಡಿ ಕಳುಹಿಸಲು ಸೂಚನೆ

ಇತ್ತೀಚೆಗೆ, ಎಲ್ಲಾ ರಾಜ್ಯಗಳ ಕಾಂಗ್ರೆಸ್ ಮುಖ್ಯಸ್ಥರನ್ನು ಸಂಪರ್ಕಿಸಿದ್ದ ಎಐಸಿಸಿ ಕಚೇರಿ, ತಮ್ಮತಮ್ಮ ರಾಜ್ಯದಲ್ಲಿರುವ ಹಿರಿಯ ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳು, ಸಮಿತಿಯ ಸದಸ್ಯರ ಹೆಸರುಗಳನ್ನು ಅಪ್ಡೇಟ್ ಮಾಡಿ ಕಳುಹಿಸಲು ಸೂಚಿಸಿತ್ತು. ಆ ಮೂಲಕ, ಕೆಲವೊಂದು ಬದಲಾವಣೆ ಮಾಡುವ ಉದ್ದೇಶವನ್ನು ಸೋನಿಯಾ ಗಾಂಧಿ ಹೊಂದಿದ್ದರು. ಇದು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದ್ದ ಮಾತು.

ವಿರೋಧ ಪಕ್ಷದ ನಾಯಕ ಯಾರಾಗಬೇಕು ಎನ್ನುವ ವಿಷಯ

ವಿರೋಧ ಪಕ್ಷದ ನಾಯಕ ಯಾರಾಗಬೇಕು ಎನ್ನುವ ವಿಷಯ

ಕರ್ನಾಟಕದಲ್ಲಿ ವಿರೋಧ ಪಕ್ಷದ ನಾಯಕ ಯಾರಾಗಬೇಕು ಎನ್ನುವ ವಿಷಯ ಆದಷ್ಟು ಬೇಗ ಇತ್ಯರ್ಥವಾಗಬೇಕಿದೆ. ಕಳೆದ ವಾರದ ಮಾಹಿತಿಯ ಪ್ರಕಾರ, ಸಿದ್ದರಾಮಯ್ಯ ಅವರಿಗೆ ಈ ಸ್ಥಾನ ಒಲಿಯಲಿದೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಆದರೆ, ಸೋನಿಯಾ ಗಾಂಧಿ, ಸಿದ್ದರಾಮಯ್ಯನವರನ್ನು ಭೇಟಿಯಾಗದೇ ಇರುವುದರಿಂದ, ಮತ್ತೆ, ಯಾರು ವಿರೋಧ ಪಕ್ಷದ ನಾಯಕರಾಗಬಹುದು ಎನ್ನುವ ಕುತೂಹಲ ಹಾಗೇ ಉಳಿದಿದೆ.

ಸಿದ್ದರಾಮಯ್ಯ ಭೇಟಿಗೆ ನಿರಾಕರಿಸಿದ ಸೋನಿಯಾ, ಪರಮೇಶ್ವರ್ ಜೊತೆ ಚರ್ಚೆ

ಸಿದ್ದರಾಮಯ್ಯ ಭೇಟಿಗೆ ನಿರಾಕರಿಸಿದ ಸೋನಿಯಾ, ಪರಮೇಶ್ವರ್ ಜೊತೆ ಚರ್ಚೆ

ಸೋನಿಯಾ ಗಾಂಧಿಯವರನ್ನು ಭೇಟಿಯಾಗಿರುವ ಬಗ್ಗೆ ಖುದ್ದು ಪರಮೇಶ್ವರ್ ಅವರೇ ಟ್ವೀಟ್ ಮಾಡಿದ್ದಾರೆ. " ರಾಜ್ಯ ಮತ್ತು ಪಕ್ಷಕ್ಕೆ ಸಂಬಂಧಪಟ್ಟ ಹಲವು ವಿಚಾರಗಳನ್ನು ಚರ್ಚೆ ಮಾಡಿರುವುದಾಗಿ" ಪರಮೇಶ್ವರ್ ಹೇಳಿದ್ದಾರೆ. ಪರಮೇಶ್ವರ್ - ಸೋನಿಯಾ ಮೇಡಂ ನಡುವಿನ ಮಾತುಕತೆ, ಈಗ ಕಾಂಗ್ರೆಸ್ ಪಡಶಾಲೆಯಲ್ಲಿ ಬಿಸಿಬಿಸಿ ಚರ್ಚೆಯ ವಿಷಯವಾಗಿದೆ.

ದ್ದು ಭೇಟಿಗೆ 'ನೋ'ಎಂದ ಸೋನಿಯಾ, ಪರಮೇಶ್ವರ್ ಗೆ 'ಯೆಸ್' ಅಂದ್ರು

ದ್ದು ಭೇಟಿಗೆ 'ನೋ'ಎಂದ ಸೋನಿಯಾ, ಪರಮೇಶ್ವರ್ ಗೆ 'ಯೆಸ್' ಅಂದ್ರು

ಯಾವ ವಿಚಾರ ಭೇಟಿಯ ವೇಳೆ ಚರ್ಚೆಗೆ ಬಂತು ಎನ್ನುವುದರ ಬಗ್ಗೆ ಖಚಿತ ಮಾಹಿತಿಯಿಲ್ಲ. ಆದರೆ, ವಿರೋಧ ಪಕ್ಷದ ನಾಯಕ ಯಾರಾಗಬೇಕು? ಉಪಚುನಾವಣೆಯಲ್ಲಿ ಪಕ್ಷದ ತಂತ್ರಗಾರಿಕೆ ಏನು? ಎನ್ನುವುದರ ಬಗ್ಗೆ ಚರ್ಚೆ ನಡೆದಿರಬಹುದು ಎನ್ನುವುದು ಸದ್ಯ ಕೇಳಿಬರುತ್ತಿರುವ ಮಾತು. ಆದರೆ, ರಾಜ್ಯ ಕಾಂಗ್ರೆಸ್ಸಿಗೆ ಅರ್ಥವಾಗದ ಒಳಮರ್ಮ ಏನಂದರೆ, ಸಿದ್ದರಾಮಯ್ಯನವರ ಭೇಟಿಗೆ 'ನೋ'ಎಂದ ಸೋನಿಯಾ ಗಾಂಧಿ, ಪರಮೇಶ್ವರ್ ಭೇಟಿಗೆ ಹೇಗೆ 'ಯೆಸ್' ಅಂದ್ರು ಅನ್ನುವುದು.

ಅಹಮದ್ ಪಟೇಲ್ ಭೇಟಿ ಮಾಡಿದ್ದ ಸಿದ್ದರಾಮಯ್ಯ

ಅಹಮದ್ ಪಟೇಲ್ ಭೇಟಿ ಮಾಡಿದ್ದ ಸಿದ್ದರಾಮಯ್ಯ

ಅಹಮದ್ ಪಟೇಲ್ ಭೇಟಿ ಮಾಡಿದ್ದ ಸಿದ್ದರಾಮಯ್ಯ, ಸೋನಿಯಾ ಭೇಟಿಗೆ ಅವಕಾಶ ಕೋರಿದ್ದರು. ಆದರೆ ಅವರಿಗೆ ಸೋನಿಯಾ ಗಾಂಧಿ ಭೇಟಿಯ ಅವಕಾಶ ಸಿಕ್ಕಿರಲಿಲ್ಲ. ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಜೊತೆ, ಸಿದ್ದರಾಮಯ್ಯ, ಹೈಕಮಾಂಡ್ ಭೇಟಿಗೆ ತೆರಳಿದ್ದರು. ಕೆಲವೊಂದು ಮೂಲಗಳ ಪ್ರಕಾರ, ಒಂದು ದಿನದ ನಂತರ ಸಿದ್ದರಾಮಯ್ಯ - ಸೋನಿಯಾ ಭೇಟಿ ನಿಗದಿಯಾಗಿತ್ತು. ಆದರೆ, ಪೂರ್ವನಿರ್ಧಾರಿತ ಕಾರ್ಯಕ್ರಮ ಇದ್ದಿದ್ದರಿಂದ, ಸಿದ್ದರಾಮಯ್ಯ, ದೆಹಲಿಯಿಂದ ವಾಪಸ್ ಆದರು ಎನ್ನುವ ಮಾತೂ ಕೇಳಿಬರುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+